ಜನರ ಕೈಯಲ್ಲಿ ಚಪ್ಪಲಿಯಲ್ಲಿ ಹೊಡಿಸುತ್ತೇನೆಂದು ತಹಸೀಲ್ದಾರ್​ ಮುಂದೆಯೇ ಆವಾಜ್​ ಹಾಕಿದ ಮಾಗಡಿಯ ಜೆಡಿಎಸ್​ ಶಾಸಕ

ರಾಮನಗರ: ತಮ್ಮ ಕೆಲಸವಾಗುತ್ತಿಲ್ಲ ಎಂದು ಕಾರ್ಯಕರ್ತರು ದೂರು ನೀಡಿದ್ದಕ್ಕೆ ಸಿಟ್ಟಿಗೆದ್ದ ಜೆಡಿಎಸ್​ ಶಾಸಕ ಎ. ಮಂಜುನಾಥ್​, ತಹಸೀಲ್ದಾರ್ ವಿರುದ್ಧ ಗರಂ ಆದ ಘಟನೆ ನಡೆದಿದೆ.​

ತಹಸೀಲ್ದಾರ್ ರಮೇಶ್ ​ಮುಂದೆಯೇ ಕೆಳಹಂತದ ಅಧಿಕಾರಿಗಳಿಗೆ ಅವಾಜ್​ ಹಾಕಿದ ಶಾಸಕ ಮಂಜುನಾಥ್​, ನಾನು ಹೊಡೆಯೋದಿಲ್ಲ ಜನರ ಕೈಯಲ್ಲಿ ಚಪ್ಪಲಿಯಲ್ಲಿ ಹೊಡಿಸುತ್ತೇನೆ ಎಂದು ನಿಂದಿಸಿದ್ದಾರೆ. ಮಾಗಡಿಯ ತಹಶೀಲ್ದರ್ ಕಚೇರಿಯಲ್ಲಿ ಆರಾಧನಾ ಕಮಿಟಿ ಸಭೆ ಹಾಗೂ ಕುಂದುಕೊರತೆ ಸಭೆ ನಡೆಯುತ್ತಿದ್ದ ವೇಳೆ ಈ ಪ್ರಸಂಗ ಜರುಗಿದೆ.

ಅಧಿಕಾರಿಗಳ ಮನೆಗಳಿಂದ ಖಾಸಗಿ ವ್ಯಕ್ತಿಗಳು ರಾತ್ರಿ ವೇಳೆ ಫೈಲ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ತಹಸೀಲ್ದಾರ್​ ಮೇಲೆಯೇ ದೂರು ಹೇಳಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಕ್ಕೆ, ಮಧ್ಯ ಬಂದ ತಹಸೀಲ್ದಾರ್ ಆಗೆಲ್ಲಾ ಏನಿಲ್ಲ ಎಂದು ಸಮಜಾಯಿಷಿ ನೀಡಿದ್ದಕ್ಕೆ ಕೋಪಗೊಂಡ ಶಾಸಕ ತಹಸೀಲ್ದಾರ್​ ಮೇಲೆ ಗರಂ ಆದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *