ಮಧುಕರ ಶೆಟ್ಟಿ ಸಾವಿಗೆ ಹೃದಯ ಕಾಯಿಲೆ ಕಾರಣ

<ಆಟಿಕ್ ಆನೆರಿಸಂ ಬಗ್ಗೆ ಸ್ನೇಹಿತ ಡಾ.ಮಹಾಬಲೇಶ್ ಶೆಟ್ಟಿ ಸ್ಪಷ್ಟನೆ>

ಮಂಗಳೂರು: ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಸಾವನ್ನಪ್ಪಿದ್ದು ಎಚ್1ಎನ್1 ಸೋಂಕಿನಿಂದ ಅಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಮಧುಕರ್ ಶೆಟ್ಟಿ ಅವರು ಮಹಾಪಧಮನಿ ಉರಿಯೂತ(ಟ್ಟಠಿಜ್ಚಿ ಚ್ಞಛ್ಠ್ಟಿಞ) ಎಂಬ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು. ಸ್ಟ್ರೋಕ್‌ನಂತೆ ಹೃದಯಕ್ಕೆ ಕಾಡುವ ಸಮಸ್ಯೆ ಇದು. ಈ ಬಗ್ಗೆ ಅವರಿಗೆ ಅರಿವಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಮತ್ತು ಜನರಲ್ಲಿ ಎಚ್1ಎನ್1 ಎಂದು ವದಂತಿ ಹಬ್ಬಿತ್ತು. ಯಾವುದೇ ಜ್ವರದ ಸೋಂಕು ಅವರಿಗೆ ತಗುಲಿರಲಿಲ್ಲ. ಎಚ್1ಎನ್1ಗೆ ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ ಎಂದು ಮಧುಕರ ಶೆಟ್ಟಿ ಸ್ನೇಹಿತ ಮತ್ತು ನಿಟ್ಟೆ ವಿಶ್ವವಿದ್ಯಾಲಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಮಹಾಬಲೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಮಹಾಪಧಮನಿ ಉರಿಯೂತಕ್ಕೆ ಶಸ್ತ್ರಚಿಕಿತ್ಸೆ ನಡೆದಿದೆ. ಇದು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿದ್ದು, ಚಿಕಿತ್ಸೆ ವೇಳೆ ಅಪಾರ ಪ್ರಮಾಣದ ರಕ್ತ ಹರಿಯುತ್ತದೆ. ಮಧುಕರ್ ನನ್ನೊಂದಿಗೆ ಆತ್ಮೀಯರಾಗಿದ್ದರು. ನಾವಿಬ್ಬರೂ ಒಂದೇ ಊರಿನವರು. ಆಗಾಗ ದೂರವಾಣಿಯಲ್ಲಿ ಸಂಪರ್ಕಿಸುತ್ತಿದ್ದರು. ಆಟಿಕ್ ಆನಿರಿಸಂನಿಂದ ಸಾವನ್ನಪ್ಪಿದ ಬಗ್ಗೆ ಮನೆಯವರೂ ತಿಳಿಸಿದ್ದಾರೆ ಎಂದು ‘ವಿಜಯವಾಣಿ’ಗೆ ಹೇಳಿದ್ದಾರೆ.

ಆಟಿಕ್ ಆನೆರಿಸಂ ಅಪರೂಪದ ಕಾಯಿಲೆ. ಸ್ಟೋಕ್‌ನಂತೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಅಪಾಯವಿದೆ. ಮಧುಕರ ಶೆಟ್ಟಿ ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು. ಆದರೆ, ಸ್ವಂತ ಆರೋಗ್ಯ ನಿರ್ಲಕ್ಷಿಸಿದ್ದರು.
| ಡಾ.ಮಹಾಬಲೇಶ್ ಶೆಟ್ಟಿ, ಮುಖ್ಯಸ್ಥ, ನಿಟ್ಟೆ ವಿವಿ ವಿಧಿವಿಜ್ಞಾನ ವಿಭಾಗ