ಮದರಸದಲ್ಲಿ ವಿಶ್ವ ಜಲ ದಿನಾಚರಣೆ

ಸಿದ್ದಾಪುರ: ನೆಲ್ಯಹುದಿಕೇರಿ ದಾರುಸ್ಸಲಾಂ ಮದರಸ ಹಾಗೂ ಎಸ್‌ಕೆಎಸ್‌ಬಿವಿ ವಿದ್ಯಾರ್ಥಿಗಳು ಪಕ್ಷಿಗಳಿಗಾಗಿ ನೀರಿನ ಮಡಕೆ ಇಡುವ ಮೂಲಕ ವಿಶ್ವ ಜಲ ದಿನವನ್ನು ಆಚರಿಸಿದರು.
ಮಹಲ್‌ಲ್ ಖತೀಬ್ ಹನೀಫ್ ಫೈಝಿ ಮಣ್ಣಿನ ಮಡಕೆಗೆ ನೀರು ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಜೀವಕ್ಕೂ ನೀರು ಅತ್ಯವಶ್ಯಕವಾಗಿದ್ದು, ಮನುಷ್ಯರಾದ ನಾವು ಅದರ ಮಿತ ಬಳಕೆ ಮಾಡ ಬೇಕೆಂದರು.
ಹರಿಯುವ ನೀರಿನಲ್ಲಿ ಅಂಗಾಂಗ ಶುದ್ಧಿ ಮಾಡುವುದಾದರೂ ನೀರನ್ನು ಮಿತವಾಗಿ ಬಳಸುವಂತೆ ಪ್ರವಾದಿ ಮುಹಮ್ಮದ್ ವಿಶ್ವಕ್ಕೆ ಸಂದೇಶ ಸಾರಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ನೀರಿನ ಮಿತ ಬಳಕೆ ಮಾಡುವುದರ ಜತೆಗೆ ಇತರರಿಗೆ ತಿಳಿಸುವ ಪ್ರಯತ್ನ ಮಾಡ ಬೇಕು ಎಂದು ಹೇಳಿದರು.
ಮದರಸ ಮುಖ್ಯ ಶಿಕ್ಷಕ ತಂಲೀಖ್ ಧಾರಿಮಿ ಮಾತನಾಡಿದರು. ನೀರನ್ನು ಮಿತವಾಗಿ ಬಳಸುತ್ತೇನೆ, ಇತರರಿಗೂ ಮಿತವಾಗಿ ಬಳಸುವಂತೆ ತಿಳಿಸುತ್ತೇವೆ ಎಂಬ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು.
ಜಮಾಅತ್ ಕಾರ್ಯದರ್ಶಿ ಅಶ್ರಫ್ ಹಾಜಿ, ಎಸ್‌ಕೆಎಸ್‌ಬಿವಿ ಕನ್ವೀನರ್ ಫರ್‌ಹಾನ್, ಉಬೈಸ್, ಸಲ್ಮಾನ್, ಮದರಸ ಅಧ್ಯಾಪಕರು ಇದ್ದರು.

Leave a Reply

Your email address will not be published. Required fields are marked *