Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಅಪಾರ ಪ್ರಮಾಣದ ನಷ್ಟ, ಜನಜೀವನ ಅಸ್ತವ್ಯಸ್ತ

Friday, 15.06.2018, 5:35 AM       No Comments

ಮಡಿಕೇರಿ: ಕೊಡಗಿನಲ್ಲಿ ಮುಂಗಾರು ಮಳೆ ಜೂನ್ ಮೊದಲೆರಡು ವಾರದಲ್ಲಿಯೇ ಅಬ್ಬರಿಸಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ನಷ್ಟವುಂಟಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಸುರಿದ ಮಳೆಯಿಂದ ಎದುರಾಗಿರುವ ದುಷ್ಪರಿಣಾಮವನ್ನು ಬೆಳೆಗಾರರು, ರೈತಾಪಿ ವರ್ಗ ಅನುಭವಿಸಬೇಕಾಗಿದೆ.

ಮುಂಗಾರು ಅಬ್ಬರಕ್ಕೆ ಜಿಲ್ಲೆಯಲ್ಲಿ ಇಬ್ಬರು ಮರಣವನ್ನಪ್ಪಿದ್ದಾರೆ. ಕಾಫಿ ತೋಟದಲ್ಲಿದ್ದಾಗ ತಲೆ ಮೇಲೆ ಮರ ಬಿದ್ದು ನೆಲ್ಯಹುದಿಕೇರಿಯ ಅಹಮ್ಮದ್ ಹಾಜಿ, ಮಾಕುಟ್ಟದಲ್ಲಿ ಭೂ ಕುಸಿತಕ್ಕೆ ಸಿಲುಕಿ ಕೇರಳದ ಯುವಕ ಶರತ್‌ಕುಮಾರ್ ಮೃತಪಟ್ಟಿದ್ದಾರೆ. ಜಿಲ್ಲಾಧಿಕಾರಿ ಬಂಗಲೆ ಮೇಲೂ ಮರ ಬಿದ್ದು ಹಾನಿಯಾಗಿದೆ.

ಹಲವಾರು ಮನೆಗಳು ಹಾನಿಗೀಡಾಗಿವೆ. ಸೋಮವಾರಪೇಟೆಯಲ್ಲಿ 4 ಮನೆ ಜಖಂಗೊಂಡಿದ್ದು, ಅವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಅವರಿಗಾಗಿ ಗಂಜಿಕೇಂದ್ರ ತೆರೆಯಲಾಗಿದ್ದರೂ, ಅವರು ಅಲ್ಲಿಗೆ ತೆರಳದೇ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಿಥಿಲಾವಸ್ಥೆಯಲ್ಲಿ ಕಟ್ಟಡಗಳು ಕುಸಿಯಲಾರಂಭಿಸಿವೆ.

ಕೇರಳ- ಕರ್ನಾಟಕ ರಾಜ್ಯ ಸಂಪರ್ಕದ ಮಾಕುಟ್ಟ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದ, ಜುಲೈ 12ರವರೆಗೆ ರಸ್ತೆ ಸಂಚಾರವನ್ನೇ ಬಂದ್ ಮಾಡಲಾಗಿದೆ. ಮರಗಳು ಉರುಳಿ ಬಿದ್ದಿದ್ದರಿಂದ ಮಾಕುಟ್ಟ ರಸ್ತೆಯಲ್ಲಿದ್ದ ಹಲವಾರು ವಾಹನಗಳು ಜಖಂಗೊಂಡಿದ್ದು, ಮಾಲೀಕರು ನಷ್ಟ ಅನುಭವಿಸುವಂತಾಗಿದೆ.

ಶ್ರೀಮಂಗಲದಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಪೂಜೆಕಲ್ಲಿನ ತೂಗುಸೇತುವೆ ಹಾನಿಗೀಡಾಗಿದೆ. ಕಾನೂರು ಭಾಗದಲ್ಲಿಯೂ ಸೇತುವೆಗೆ ಅಪಾಯ ಎದುರಾಗಿದೆ. ಕಡಗದಾಳು ಗ್ರಾಮದಲ್ಲಿ ಹೋಂಸ್ಟೇ ಮೇಲೆ ಮರ ಬಿದ್ದು, ನಷ್ಟವಾಗಿದೆ. ಜಿಲ್ಲೆಯ ವಿವಿಧೆಡೆಯಲ್ಲಿ ರಸ್ತೆ ಹಾನಿಗೀಡಾಗಿದೆ.
ಮಳೆಯೊಂದಿಗೆ ರಭಸವಾಗಿ ಬೀಸುತ್ತಿದ್ದ ಗಾಳಿಯಿಂದ ಅಪಾರ ಪ್ರಮಾಣದಲ್ಲಿ ಮರಗಿಡಗಳು ಧರೆಗುರುಳಿವೆ. ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವಾರು ಗ್ರಾಮಗಳಿಗೆ ಕಳೆದೊಂದು ವಾರದಿಂದ ವಿದ್ಯುತ್ ಸರಬರಾಜಾಗುತ್ತಿಲ್ಲ. ಸೆಸ್ಕ್‌ಗೆ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದ್ದು, ವಿದ್ಯುತ್ ಮಾರ್ಗ ಸರಿಪಡಿಸಲು ಹಲವು ದಿನ ಬೇಕಾಗುತ್ತದೆ.

ಸತತವಾಗಿ ಸುರಿದ ಮಳೆಯಿಂದ ಕಾಫಿ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ. ಗಿಡದಲ್ಲಿ ಕಾಯಿ ಕಟ್ಟುತ್ತಿರುವ ಕಾಫಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ತೇವಾಂಶ ಹೆಚ್ಚಾಗಿರುವುದರಿಂದ ಕಾಫಿ ಫಸಲು ಕೊಳೆತು ನೆಲಕಚ್ಚಲಿದೆ. ಶೀತಕ್ಕೆ ಕಾಫಿ ಎಳೆಗಳು ಕೊಳೆತು ಉದುರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top