ಕಾಫಿ ತೋಟದಲ್ಲಿ ಕಾದಿದ್ದ ಜವರಾಯ: ದುರಂತ ಅಂತ್ಯಕಂಡ ಮೂವರು ಕಾರ್ಮಿಕರ ಬದುಕು

ಮಡಿಕೇರಿ: ಆಕಸ್ಮಿಕವಾಗಿ ವಿದ್ಯುತ್​ ಪ್ರವಹಿಸಿದ ಪರಿಣಾಮ ಮೂವರು ಕಾರ್ಮಿಕರು ದುರಂತ ಸಾವಿಗೀಡಾಗಿರುವ ಘಟನೆ ಮಡಿಕೇರಿ ತಾಲೂಕಿನ ದೊಡ್ಡಪುಲಿಕೋಟು ಗ್ರಾಮದಲ್ಲಿ ಭಾನುವಾರ ನಡೆದಿದೆ.

ತಮ್ಮಯ್ಯ, ಅನಿಲ್ ಹಾಗೂ ಕವಿತಾ ಮೃತ ದುರ್ದೈವಿಗಳು. ಕೆ.ಸುರೇಶ್ ಎಂಬುವರ ಕಾಫಿ ತೋಟದಲ್ಲಿ ಮರ ಕಡಿಯುವ ವೇಳೆ ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ತಮ್ಮಯ್ಯ ಹಾಗೂ ಅನಿಲ್​ ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ ಕವಿತಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಅವಘಡದಲ್ಲಿ ಸುನೀತಾ ಎಂಬುವರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

One Reply to “ಕಾಫಿ ತೋಟದಲ್ಲಿ ಕಾದಿದ್ದ ಜವರಾಯ: ದುರಂತ ಅಂತ್ಯಕಂಡ ಮೂವರು ಕಾರ್ಮಿಕರ ಬದುಕು”

  1. ವಿಧಿಲೀಲೆ ಎಂದು ಇದಕ್ಕೇ ಹೇಳುತ್ತಾರೇನೋ?

Leave a Reply

Your email address will not be published. Required fields are marked *