ಕೋವಿ ವಿನಾಯಿತಿ ಹಕ್ಕಿಗೆ ಸಂಚಕಾರ

Latest News

ಪುಟ್ನಂಜ ನಾಯಕಿಯ ಹೊಸ ಪ್ರಯತ್ನ: ಕಾಮಾಕ್ಷಿಯಾಗಿ ಬಂದ ಸ್ವಾತಿಮುತ್ತು ಮೀನ

ಬೆಂಗಳೂರು: ಒಂದು ಕಾಲದಲ್ಲಿ ಸಿನಿಪ್ರಿಯರ ಮನ ಗೆದ್ದ ನಟಿ ಮೀನಾ ಕರುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ‘ಪುಟ್ನಂಜ’,...

17-11-2019ರಿಂದ 23-11-2019ರವರೆಗೆ

ಮೇಷ: ನಿಮ್ಮ ನಿರೀಕ್ಷೆಗಳು ತುಂಬಾ ಇವೆ. ಆದರೆ ಬುಧನ ಜತೆಗಿನ ನಿಮ್ಮ ರಾಶ್ಯಾಧಿಪ ಕುಜನ ಸಂಯೋಜನೆಯಿಂದಾಗಿ ಹಲವು ಮಹತ್ವದ ವಿಷಯಗಳು ನಿಮ್ಮ ನಿರೀಕ್ಷೆಯ...

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೈಯಲ್ಲಿ ಏನೂ ಹಣವಿಲ್ಲ, ಏನು ಮಾಡುವುದು ಎಂಬ ದೊಡ್ಡ ಚಿಂತೆ ಪವಾಡಸದೃಶವಾಗಿ ದೂರವಾಗಲಿದೆ

ಮೇಷ: ಬರೀ ಗಾಳಿಯೊಡನೆ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಂತಹ ಯುದ್ಧಕ್ಕಾಗಿನ ತಯಾರಿಯನ್ನು ಬಿಡಿ. ಶುಭಸಂಖ್ಯೆ: 2 ವೃಷಭ: ಬಹಳ ಹಿಂದೆ ಪ್ರಾರಂಭಿಸಿದ ಕೆಲಸವೊಂದು ಸದ್ಯದಲ್ಲೇ...

ರಾಷ್ಟ್ರಪತಿ ಆಳ್ವಿಕೆ ರಾಜಕೀಯ ಅಸ್ತ್ರ: ಯಾರ ಕಾಲದಲ್ಲಿ ಹೆಚ್ಚು ಬಳಕೆ ಎಂಬುದರ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ವಿಫಲವಾದ್ದರಿಂದ ಅಲ್ಲಿ ಇತ್ತೀಚೆಗಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಏಕೆ...

ವಿಜಯವಾಣಿ ಸಿನಿಮಾ ವಿಮರ್ಶೆ: ಸಸ್ಪೆನ್ಸ್ ಮಾತ್ರ ಸತ್ಯ ಮತ್ತೆಲ್ಲವೂ ಮಾಯ

ದುಡ್ಡಿಗಾಗಿ ಯುವತಿಯನ್ನು ಅಪಹರಿಸುವ ಖದೀಮರು ಹೇಗೆಲ್ಲ ಪ್ಲಾ್ಯನ್ ರೂಪಿಸುತ್ತಾರೆ ಮತ್ತು ಆ ಪ್ಲಾ್ಯನ್ ಫಲ ನೀಡುತ್ತೋ ಇಲ್ಲವೋ ಎಂಬುದನ್ನು ಇಟ್ಟುಕೊಂಡು ಈಗಾಗಲೇ ಹಲವು...

* ಕೋವಿ ಪರವಾನಗಿ ವಿನಾಯಿತಿ ಪ್ರಶ್ನಿಸಿ ಸೇನಾಧಿಕಾರಿ(ನಿವೃತ್ತ) ಅರ್ಜಿ

* 8 ವಾರದೊಳಗೆ ತೀರ್ಮಾನ ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡವ ಜನಾಂಗ ಹಾಗೂ ಜಮ್ಮಾ ಹಿಡುವಳಿದಾರರು ಅನಾದಿ ಕಾಲದಿಂದ ಹೊಂದಿರುವ ಪಾರಂಪರಿಕ ಕೋವಿ ಪರವಾನಗಿ ವಿನಾಯಿತಿ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ…!
ಜಾತಿ ಆಧಾರದಲ್ಲಿ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿದಾರರಿಗೆ ನೀಡಲಾಗಿರುವ ಕೋವಿ ಪರವಾನಗಿ ವಿನಾಯಿತಿ ವಿಶೇಷ ಹಕ್ಕನ್ನು ಹೈಕೋರ್ಟ್‌ನಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಯಾಲದಾಳು ಚೇತನ್ ಕೇಶವಾನಂದ 2015ರಲ್ಲಿ ಪ್ರಶ್ನಿಸಿದ್ದಾರೆ.
ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ (158 ವರ್ಷಗಳ ಹಿಂದೆ) ನೀಡಿದ ವಿನಾಯಿತಿ ಹಾಗೂ 56 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಶಾಸನ ಬದ್ಧವಾಗಿ ನೀಡಿರುವ ಮಾನ್ಯತೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಚೇತನ್ ಕೇಶವಾನಂದ ಅರ್ಜಿ ಸಲ್ಲಿಕೆ ಸಂಬಂಧ ನ್ಯಾಯಾಲಆ.13 ರಂದು 8 ವಾರದೊಳಗೆ ತೀರ್ಮಾನ ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಸದ್ಯ ವಿನಾಯಿತಿ ತೀರ್ಮಾನ ಕೇಂದ್ರ ಸರ್ಕಾರದ ಕೈಯಲ್ಲಿದೆ.
ಕೊಡವರಿಗೆ ಕೋವಿ ಹೊಂದುವ ವಿಶೇಷ ಹಕ್ಕನ್ನು 1861 ರಲ್ಲಿ ಬ್ರಿಟಿಷ್ ಆಳ್ವಿಕೆ ಕಾಲಘಟ್ಟದಲ್ಲಿ ಅಧಿಕೃತವಾಗಿ ನೀಡಲಾಗಿತ್ತು. ಕೂರ್ಗ್ ಚೀಫ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಕೊಡವರಿಗೆ ಮತ್ತು ಜಮ್ಮಾ ಹಿಡುವವಳಿದಾರರಿಗೆ ವಿಶೇಷ ವಿನಾಯಿತಿ ಹಕ್ಕಿನ ಆದೇಶ ಹೊರಡಿಸಿದ್ದರು. ರಾಜರ ಆಳ್ವಿಕೆ ಕಾಲಕ್ಕಿಂತ ಮುಂಚಿತವಾಗಿ ಕೊಡವರು ಕೋವಿ (ಕೇಪ್ ತೋಕ್) ಹೊಂದಿದ್ದರು. ಬ್ರಿಟಿಷ್ ಸೇನೆಯಲ್ಲಿ ಕೊಡವರು ನಿಷ್ಠೆ, ಬದ್ಧತೆಯಿಂದ ತಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸಿದ್ದರಿಂದ ಕೋವಿ ಇಟ್ಟುಕೊಳ್ಳಲು ಇದ್ದ ಕಾನೂನು ನಿಯಂತ್ರಣದಿಂದ ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ವಿನಾಯಿತಿ ನೀಡಿದರು.
ಸ್ವಾತಂತ್ರೃ ನಂತರದಲ್ಲಿ 1959 ರ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 4 ರನ್ವಯ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲು ಇರುವ ಪರವಾನಗಿ ವಿನಾಯಿತಿ ಮುಂದುವರಿಸಲು 1963 ರಲ್ಲಿ ಕೇಂದ್ರ ಸರ್ಕಾರ ವಿಶೇಷ ಆದೇಶ ಹೊರಡಿಸಿತ್ತು. ಕೊಡವರ ಆಯುಧ ಪೂಜೆ ಎಂದು ಮಾನ್ಯತೆ ಪಡೆದಿರುವ ಕೈಲ್ ಪೊಳ್ಡ್ ನಮ್ಮೆ (ಹಬ್ಬ) ಯಲ್ಲಿ ಕೃಷಿ ಪರಿಕರದೊಂದಿಗೆ ಕೋವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದಂದು ಮರದ ಎತ್ತರದ ಕೊಂಬೆಯೊಂದಕ್ಕೆ ತೆಂಗಿನಕಾಯಿ ಕಟ್ಟಿ ಕೋವಿಯಿಂದ ಹೊಡೆಯುವ ಸ್ಪರ್ಧೆ ನಡೆಯುತ್ತದೆ. ಪುತ್ತರಿ ನಮ್ಮೆಯಲ್ಲಿ ಕದಿರು ತೆಗೆಯುವಾಗ ಆಕಾಶಕ್ಕೆ ಗುಂಡು ಹೊಡೆಯುತ್ತಾರೆಂದು ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ಹೇಳುತ್ತಾರೆ.
ಆಂಗ್ಲರ ಕಾಲದಲ್ಲಿ ಕೊಡವರನ್ನು ಕ್ಷತ್ರಿಯ ಜನಾಂಗವೆಂದು ಗುರುತಿಸಿ ಸರ್ಕಾರದ ಪರವಾನಗಿಯಿಲ್ಲದೆ ಕೋವಿ ಹೊಂದಿರಲು ಅಧಿಕಾರ ಕೊಡಲಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೊಡವರು ಪರವಾನಗಿಯಿಲ್ಲದೆ ಕೋವಿ ಹೊಂದಲು ಕಾನೂನು ಬದ್ಧವಾಗಿ ಅಧಿಕಾರ ನೀಡಲಾಯಿತು. 1963 ರಲ್ಲಿ ಸಂಸತ್‌ನಲ್ಲಿ ಚರ್ಚೆ ನಡೆದ ವೇಳೆ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಕೋವಿ ಪರವಾನಗಿ ವಿನಾಯಿತಿ ಹಕ್ಕು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದರೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಹೇಳುತ್ತಾರೆ.
ಕೊಡವರು ಆದಿ ಕಾಲದಿಂದಲೂ ಕೋವಿಯನ್ನು ಪೂಜಾ ಪರಿಕರವೆಂದು ಪರಿಗಣಿಸಿ, ನೆಲ್ಲಕ್ಕಿಯಲ್ಲಿಟ್ಟು ಭಕ್ತಿಬಾವದಿಂದ ಪೂಜಿಸುತ್ತಾರೆ. ಕೋವಿ ಕೊಡವರ ಧಾರ್ಮಿಕ ಸಂಕೇತ ಮತ್ತು ಸಾಂಸ್ಕೃತಿಕ ಲಾಂಛನವೂ ಆಗಿದೆ. ಕೊಡವ ಕುಟುಂಬದಲ್ಲಿ ಗಂಡು ಮಗು ಜನಿಸಿದರೆ ಸಾಂಕೇತಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವೀರಯೋಧನೊಬ್ಬ ಭೂಮಿಗೆ ಬಂದನೆಂಬ ಶುಭ ಸಂದೇಶ ಸಾರಲಾಗುತ್ತದೆ. ಹುಟ್ಟಿನಿಂದ ಸಾವಿನವರೆಗೂ ಕೋವಿ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳುವುದು ಒಂದು ಜನಾಂಗದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ ಎಂದು ಕೊಡವರು ಭಾವಿಸಿದ್ದಾರೆ.
ಕೋವಿ ಹೊಂದಲು ಕಾನೂನಿನಡಿ ಪರವಾನಗಿ ಪಡೆಯುವುದರಿಂದ ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ (ಕೊಡವ, ಗೌಡ, ಕೊಡವ ಮಾಪಿಳ್ಳೆ, ಹೆಗಡೆ, ಅಮ್ಮಕೊಡವ ಸೇರಿದಂತೆ ವಿವಿಧ ಜನಾಂಗದವರು ಜಮ್ಮಾ ಹಿಡುವಳಿದಾರರಾಗಿದ್ದಾರೆ) ಕೊಡಗು ಜಿಲ್ಲಾಡಳಿತದಿಂದ ವಿನಾಯಿತಿ ಪತ್ರ ನೀಡಲಾಗುತ್ತದೆ. ವಿನಾಯಿತಿ ಪತ್ರದಡಿ ತಾವು ಹೊಂದುವ ಕೋವಿಯನ್ನು ದೇಶದಾದ್ಯಂತ ತೆಗೆದುಕೊಂಡು ಹೋಗಲು ಮುಕ್ತ ಅವಕಾಶವಿದೆ.
ಸ್ವಾತಂತ್ರೃ ಹೋರಾಟ ಸಂದರ್ಭವಲ್ಲಾಗಲಿ, ಕೊಡಗನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಿದ ಸಮುಯದಲ್ಲಾಗಲಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಾಗಲಿ, ಸಾರ್ವಜನಿಕ ಚುನಾವಣೆ, ಕೋಮು ಗಲಭೆ ಸಂದರ್ಭ ಸೇರಿದಂತೆ ಎಂದಿಗೂ ಕೊಡವರು ಕೋವಿ ದುರುಪಯೋಗಪಡಿಸಿಕೊಂಡಿಲ್ಲ. ದೇಶದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ, ದೇಶ ವಿರೋಧಿ ಕೃತ್ಯದಲ್ಲಿ, ವಿಧ್ವಂಸ ಕೃತ್ಯದಲ್ಲಿ ದೇಶಭಕ್ತ ಕೊಡವರು ತೊಡಗಿಲ್ಲ ಎಂದು ಜನಾಂಗದ ಹಿರಿಯರು ಹೇಳುತ್ತಾರೆ.
ಜನ್ಮತಃ ಕ್ಷತ್ರಿಯರಾದ ಕೊಡವರು ಜೀವನದಲ್ಲಿ ಕ್ಷಾತ್ರಧರ್ಮ ಪಾಲಿಸುತ್ತಾ ಬಂದಿರುವವರು. ಹಿಂದುಗಳಂತೆ ವೈದಿಕ ಧರ್ಮವನ್ನಾಚರಿಸದೆ, ಪ್ರಕೃತಿಯನ್ನು, ತಮ್ಮ ಪೂರ್ವಜರನ್ನು ಆರಾಧಿಸುವವರು. ಪಿತೃಪ್ರಧಾನ ಸಮಾಜದಲ್ಲಿರುವ ಇವರು ಪಾರಂಪರ್ಯವಾಗಿ ಆಯುಧಗಳನ್ನು, ಜಮ್ಮಾವೆಂದು ಕರೆಯಲ್ಪಡುವ ಸಾಗುವಳಿ ಭೂಮಿ ಹೊಂದಿರುವ ಹಕ್ಕು ಪಡೆದಿದ್ದಾರೆ. ಮನೆತನದ ಹೊರಗಿನಿಂದ ಹೆಣ್ಣು ತರುವ ಮತ್ತು ಹೊರಗೆ ಕೊಡುವ ಪದ್ಧತಿ ಇದೆ. ಕೊಡಗಿನ ಜನಸಂಖ್ಯೆಯ 5 ರಲ್ಲಿ 1 ರಷ್ಟು ಕೊಡವರಿದ್ದಾರೆ. ಮಾತೃಭಾಷೆ ಕೊಡವ ತಕ್ಕ್.
ಕೊಡವರು ಜನಾಂಗೀಯವಾಗಿಯೂ, ಸಾಂಸ್ಕೃತಿಕವಾಗಿಯೂ ದಕ್ಷಿಣ ಭಾರತದ ಇತರರಗಿಂತ ವೈಶಿಷ್ಟೃಪೂರ್ವವಾಗಿ ಬೇರೆಯಾಗಿದ್ದಾರೆ. ಮೂಲದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಜನನ, ವಿವಾಹ, ಮರಣ ಇತ್ಯಾದಿ ಸಂದರ್ಭಗಳ ಪದ್ಧತಿಗಳು ವಿಶಿಷ್ಟವಾಗಿವೆ. ದೇಹ ರಚನೆ ಗಮನಿಸಿದರೆ ದಕ್ಷಿಣ ಭಾರತದ ಜನರಲ್ಲಿ ಎದ್ದು ಕಾಣುವಷ್ಟು ವಿಭಿನ್ನರಾಗಿದ್ದಾರೆ.
ಕೊಡವರು ಕೊಡಗಿನ ಮೂಲನಿವಾಸಿಗಳಾಗಿದ್ದು, ಕೊಡಗಿನ ಗುಡ್ಡಗಾಡು ಸಮತಲಗೊಳಿಸಿ ಭತ್ತ- ಕಾಫಿ ಬೆಳೆದಿದ್ದಾರೆ. ಬೇಟೆಯಾಡುವುದನ್ನು ವೃತ್ತಿಯನ್ನಾಗಿಸಿಕೊಂಡ ಬುಡಕಟ್ಟು ಜನಾಂಗದವರು. ಮೋಜಿಗಾಗಿ ಬೇಟೆಯಾಡುವುದನ್ನು ಹವ್ಯಾಸವನ್ನಾಗಿಸಿಕೊಂಡ ಕ್ಷತ್ರಿಯರೆಂದು ಕೊಡವರನ್ನು ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಕನ್ನಡ ಕವಿಯಾಗಿದ್ದ ಮಂಗರಾಜ ಕ್ರಿ.ಶ. 1398 ರಲ್ಲಿ ಬಣ್ಣಿಸಿದ್ದರು.

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....