ಹಾಕಿಯಲ್ಲಿ ರಾಷ್ಟ್ರಮಟ್ಟಕ್ಕೆ ನಾಲ್ವರು ವಿದ್ಯಾರ್ಥಿಗಳು ಆಯ್ಕೆ

ಜನರಲ್ ಕೆ.ಎಸ್.ತಿಮ್ಮಯ್ಯ ಪಬ್ಲಿಕ್ ಶಾಲೆ ಮಕ್ಕಳ ಸಾಧನೆ

ಮಡಿಕೇರಿ: ಒಡಿಸ್ಸಾದ ರೂರ‌್ಕೆಲದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಜನರಲ್ ಕೆ.ಎಸ್.ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್‌ಆಗಿ ಹೊರ ಹೊಮ್ಮಿದ್ದಾರೆ.
ಮೋನಿತ್ ಮೊಣ್ಣಪ್ಪ, ಕುಶನ್ ಕಾರ್ಯಪ್ಪ, ಟಿ.ಆರ್.ಅಶ್ವಥ್, ತನುಶ್ ಕುಟ್ಟಯ್ಯ ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳು. ಕಾಲ್ಸ್‌ನಲ್ಲಿ ನಡೆದ 2019-20ನೇ ಸಾಲಿನ 17 ವರ್ಷ ವಯೋಮಿತಿಯ ಐಸಿಎಸ್‌ಇ ಶಾಲೆಗಳ ಪ್ರಾಂತೀಯ ಮಟ್ಟದ ಅಂತರ್ ಶಾಲೆ ಹಾಕಿ ಪಂದ್ಯಾವಳಿಯಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು 3ನೇ ಸ್ಥಾನ ಪಡೆದರು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದ ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತನುಶ್ ಕುಟ್ಟಯ್ಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *