ರೈಲ್ವೆ ಕಂಬಿ ದುರಸ್ತಿ ಕಾರ್ಯ ಆರಂಭ

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪ
ಆನೆಚೌಕೂರು ವನ್ಯಜೀವಿ ವಲಯದ ನೊಕ್ಯ ಗ್ರಾಮದಲ್ಲಿ ಮುರಿದು ಬಿದ್ದಿದ್ದ ರೈಲ್ವೆ ಕಂಬಿ ದುರಸ್ತಿ ಕಾರ್ಯ ಆರಂಭಗೊಂಡಿದೆ. ಹುಣಸೂರು ಉಪವಿಭಾಗ ಎಸಿಎಫ್ ಪ್ರಸನ್ನಕುಮಾರ್ ಮಂಗಳವಾರ ಸ್ಥಳ ಪರಿಶೀಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
3 ಕಡೆಗಳಲ್ಲಿ ಮುರಿದು ಬಿದ್ದಿರುವ ಕಂಬಗಳನ್ನು ತೆರವುಗೊಳಿಸಿ ಮರು ಜೋಡಣೆ ಮಾಡಲಾಗುತ್ತಿದೆ. ಸ್ಥಳೀಯ ರೈತರಾದ ಚೆಪ್ಪುಡೀರ ಕಾರ್ಯಪ್ಪ, ಕರುಣಾಕರ್, ಎಚ್.ಎಸ್.ಮಹೇಶ್, ಅಶೋಕ್, ಶ್ರೀನಿವಾಸ್ ದುರಸ್ತಿ ಗೊಳಿಸುವಂತೆ ಎರಡ್ಮೂರು ದಿನಗಳ ಹಿಂದಷ್ಟೆ ಈ ಬಗ್ಗೆ ಒತ್ತಾಯಿಸಿದ್ದರು. ಈ ಬಗ್ಗೆ ಕ್ರಮ ಕೈಗೊಂಡ ಅರಣ್ಯ ಇಲಾಖೆ, ಮರು ಜೋಡಣೆಗೆ ಮುಂದಾಗಿದೆ.

Leave a Reply

Your email address will not be published. Required fields are marked *