ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ

ಮಡಿಕೇರಿ: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಊರಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿವುಂಟು ಮಾಡುತ್ತಿವೆ.
ಬ್ರಹ್ಮಗಿರಿ ಬೆಟ್ಟದ ಸನಿಹದಲ್ಲಿರುವ ಈ ಗ್ರಾಮಕ್ಕೆ ಕಾಡಾನೆ ಹಿಂಡು ಪದೇಪದೆ ದಾಳಿ ನಡೆಸುತ್ತಿವೆ. ಕಾಫಿ ಗಿಡಗಳನ್ನು ಮುರಿದು ಹಾನಿ ವುಂಟು ಮಾಡುತ್ತಿವೆ. ಕಾಫಿ ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆಂದು ಅಜ್ಜಮಾಡ ಇಮ್ಮಿ ಉತ್ತಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಸಮಸ್ಯೆಯಿಂದ ಬೆಳೆಗಾರರು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಊರಿನಲ್ಲಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಮತ್ತು ಮರಳಿ ಊರಿಗೆ ಬರದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕಾಡಾನೆ ಸಮಸ್ಯೆಯನ್ನು ಇಲಾಖಾಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *