ಸಮಾಜವನ್ನು ಸಂಘಟಿಸಲು ಮುಂದಾಗಿ

ವಿಜಯವಾಣಿ ಸುದ್ದಿಜಾಲ ಭಾಲ್ಕಿ
ಪಟ್ಟಣದ ಇಂದಿರಾ ನಗರದ ಸಮುದಾಯ ಭವನದಲ್ಲಿ ಬುಧವಾರ ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ, ಜಿಲ್ಲಾಧ್ಯಕ್ಷ ಪ್ರದೀಪ ಹೆಗಡೆ ನೇತೃತ್ವದಲ್ಲಿ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳ ನೇಮಕ ಸಭೆ ಜರುಗಿತು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ ಮಾತನಾಡಿ, ಸಂಘಟನೆಗೆ ನೇಮಕಗೊಂಡ ಎಲ್ಲ ಪದಾಧಿಕಾರಿಗಳು ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದಿಗ ಸಮುದಾಯ ಸಂಘಟಿಸುವುದರ ಜತೆಗೆ ಸಮಾಜದಲ್ಲಿನ ಸಮಸ್ಯೆಗಳನ್ನು ಸಕರ್ಾರಕ್ಕೆ ಎಚ್ಚರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜಕುಮಾರ ಡಾವರಗಾಂವ, ವಿಲಾಸ ಮೋರೆ, ಅಶೋಕ ಗಾಯಕವಾಡ್, ಜೈಪಾಲ ಬೋರಾಳೆ, ಪರಮೇಶ್ವರ ದುಬಲಗುಂಡಿ, ಮನೋಹರ ಮೇತ್ರೆ, ವಿಜಯಕುಮಾರ ವಾಗಮಾರೆ, ರಾಜಕುಮಾರ ಭಟಾರೆ, ಅಲೀಯಾಸ್ ಜ್ಯಾಂತೆ, ಸತೀಶ ಮಾಳಗೆ ಸೇರಿದಂತೆ ಮುಂತಾದವರು ಇದ್ದರು. ಮಹೇಶ ಹೀರಮನೆ ನಿರೂಪಿಸಿದರು. ಸಚೀನ ನಿಟ್ಟೂರೆ ವಂದಿಸಿದರು.

ಪದಾಧಿಕಾರಿಗಳ ನೇಮಕ: ದತ್ತಾತ್ರಿ ಎಸ್ ಜ್ಯೋತಿ (ತಾಲೂಕು ಅಧ್ಯಕ್ಷ), ಸಂಜೀವಕುಮಾರ ಮಾಳಗೆ (ಗೌರವಾಧ್ಯಕ್ಷ), ಸಚೀನ ಅಂಬೆಸಾಂಗವಿ (ಉಪಾಧ್ಯಕ್ಷ), ಲಕ್ಷ್ಮಣ ಮುದಾಳೆ (ಪ್ರಧಾನ ಕಾರ್ಯದಶರ್ಿ), ಪುಟರಾಜ ನೇಳಗೆ (ಸಹ ಕಾರ್ಯದರ್ಶಿ ), ರಮೇಶ ಸಾಗರ್ (ಖಜಾಂಚಿ) ಹಾಗೂ ಭಾಲ್ಕಿ ನಗರಕ್ಕೆ ಮನೋಹರ ಬಂಗಾರೆ (ಅಧ್ಯಕ್ಷ), ಸಚೀಶ ನಿಟ್ಟೂರೆ (ಪ್ರಧಾನ ಕಾರ್ಯದರ್ಶಿ ), ಶಾಲಿವಾನ (ಕಾರ್ಯದರ್ಶಿ ) ಮತ್ತು ಡೇವಿಡ್ ಕೆಂಪೆ ತಾಲೂಕು ವಿದ್ಯಾರ್ಥಿ ಘಟಕಕ್ಕೆ ಪದಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.