More

  ಅ.1 ರಿಂದ ಮದ್ಯವರ್ಜನ ಶಿಬಿರ ಆಯೋಜನೆ

  ಮುದ್ದೇಬಿಹಾಳ : ಕುಟುಂಬಗಳ ನೆಮ್ಮದಿ ಹಾಳು ಮಾಡುವ ಸಾಮಾಜಿಕ ಪಿಡುಗು ಕುಡಿತದ ಚಟ ಜನರಲ್ಲಿ ಸಂಪೂರ್ಣ ನಿರ್ಮೂಲನೆ ಮಾಡಲು ಮದ್ಯವರ್ಜನ ಶಿಬಿರವನ್ನು ಅ.1 ರಿಂದ 8 ರವರೆಗೆ ಮುದ್ದೇಬಿಹಾಳ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎನ್.ಪಿ. ನಾಗೇಶ ಹೇಳಿದರು.

  ಪಟ್ಟಣದ ವಿದ್ಯಾನಗರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

  ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾ ಭವನದಲ್ಲಿ ಶಿಬಿರವನ್ನು ಅಖಿಲ ಕರ್ನಾಟಕ ಜನಜಾಗತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ನಿಯಂತ್ರಣ ಮಂಡಳಿ, ವಿಜಯಪುರ ಜಿಲ್ಲಾ ಜನಜಾಗೃತಿ ಸಮಿತಿ, ಮದ್ಯವರ್ಜನಾ ವ್ಯವಸ್ಥಾಪನಾ ಸಮಿತಿ ಮುದ್ದೇಬಿಹಾಳ, ಸಾರ್ವಜನಿಕ ಆಸ್ಪತ್ರೆ, ಆರಕ್ಷಕ ಠಾಣೆ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಸಂಶೋಧನಾ ಕೇಂದ್ರ ಇದರ ವಿಸ್ತಾರಣಾ ಕಾರ್ಯಕ್ರಮದ ಅಂಗವಾಗಿ 1735ನೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

  ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ವಿರೇಶ ಪಾಟೀಲ ಮಾತನಾಡಿ, ಶಿಬಿರದಲ್ಲಿ ಒಟ್ಟು 100 ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ.

  ಎಂಟು ದಿನವೂ ಶಿಬಿರಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಅ.1 ರಂದು ಶಿಬಿರದ ಉದ್ಘಾಟನೆಯನ್ನು ಶಾಸಕ ಸಿ.ಎಸ್. ನಾಡಗೌಡ ಮಾಡಲಿದ್ದಾರೆ.

  ಅ.8ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಭಾಗವಹಿಸುವರು ಎಂದರು.

  ಶಿಬಿರಾರ್ಥಿಗಳಿಗೆ ಯಾವುದೇ ಮಾತ್ರೆಗಳನ್ನು ನೀಡುವುದು, ಹೊಡೆಯುವುದಾಗಲಿ ಮಾಡುವುದಿಲ್ಲ. ಡಾ. ವೀರೇಂದ್ರ ಹೆಗ್ಗಡೆ ಅವರು 1991 ರಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರವನ್ನು ಆರಂಭಿಸಿದರು. ಕುಡಿತಕ್ಕೆ ದಾಸರಾದವರನ್ನು ಮನಃಪರಿವರ್ತನೆ ಮಾಡಲಾಗುತ್ತದೆ.

  ತಿನಿತ್ಯ ಯೋಗ, ವ್ಯಾಯಾಮ, ಶ್ರಮದಾನ, ಮಾಡಿಸಲಾಗುತ್ತದೆ. ಈಗಾಗಲೇ ಶಿಬಿರದಲ್ಲಿ ಪಾಲ್ಗೊಂಡು ಕುಡಿತ ಬಿಟ್ಟ ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಮಹಿಳೆಯರಿಗೆ ಕೌಟುಂಬಿಕ ಸಲಹೆ ನೀಡಲಾಗುತ್ತದೆ ಎಂದರು.

  ಪುರಸಭೆ ಸದಸ್ಯೆ ಸಹನಾ ಬಡಿಗೇರ, ಶಿಬಿರದ ಜನಜಾಗೃತಿ ವೇದಿಕೆಯ ಸಂಗೀತಾ ನಾಡಗೌಡ, ಶ್ರೀಶೈಲ ದೊಡಮನಿ, ರವೀಂದ್ರ ಬಿರಾದಾರ, ಎಸ್.ಬಿ. ಚಲವಾದಿ, ಅಕ್ಷತಾ ಚಲವಾದಿ, ಗುರುಬಾಯಿ ಹೊಸಮನಿ, ವೀರೇಶ ಢವಳಗಿ, ಮಧು ಭೋವಿ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts