ನಾನು ಸಾಮಾನ್ಯಳು, ಪ್ರಜ್ಞಾ ಸಿಂಗ್​ರೊಂದಿಗೆ ನನ್ನ ಹೋಲಿಸಬೇಡಿ ಎಂದ್ರು ಕೇಂದ್ರ ಸಚಿವೆ ಉಮಾ ಭಾರತಿ

ಕಾಟ್ನಿ: ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್ ಅವರು ಮಧ್ಯಪ್ರದೇಶದ ರಾಜಕಾರಣದಲ್ಲಿ ಕೇಂದ್ರ ಸಚಿವೆ, ಬಿಜೆಪಿ ಹಿರಿಯ ಮುಖಂಡೆ ಉಮಾ ಭಾರತಿಯವರನ್ನೂ ಮೀರಿಸುತ್ತಾರಾ ಎಂಬ ಪ್ರಶ್ನೆಗೆ ಉಮಾ ಭಾರತಿಯವರು, ನನ್ನನ್ನು ಸಾಧ್ವಿಯೊಂದಿಗೆ ಹೋಲಿಸಬೇಡಿ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಓರ್ವ ಸಾಮಾನ್ಯಳು ಹಾಗೂ ಅಜ್ಞಾನಿ. ಪ್ರಜ್ಞಾ ಸಿಂಗ್​ ಠಾಕೂರ್ ಮಹಾನ್​ ಸನ್ಯಾಸಿನಿ ಎಂದು ಹೇಳಿದ್ದಾರೆ. ಅವರೊಂದಿಗೆ ನನ್ನ ಹೋಲಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಭೋಪಾಲ್​ ಲೋಕಸಭಾ ಅಭ್ಯರ್ಥಿಯಾಗಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್​ ಸ್ಪರ್ಧಿಸುತ್ತಿದ್ದಾರೆ.

ಈ ಬಾರಿ ಉಮಾ ಭಾರತಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಸಾಧ್ವಿಯವರಿಗೆ ಬಿಜೆಪಿ ಟಿಕೆಟ್​ ಕೊಟ್ಟಾಗಿನಿಂದಲೂ ಅವರು ಮಧ್ಯಪ್ರದೇಶ ರಾಜಕಾರಣದಲ್ಲಿ ಉಮಾ ಭಾರತಿಯವರನ್ನು ಮೀರಿಸುತ್ತಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಮೇ 12ರಂದು ಭೋಪಾಲ್​ನಲ್ಲಿ ಚುನಾವಣೆ ನಡೆಯಲಿದೆ.