ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಮಧ್ಯಾಹ್ನವರೆಗಿನ ಶೇಕಡಾವಾರು ಮತದಾನ ಹೀಗಿದೆ

ಭೋಪಾಲ್: ಕಾಂಗ್ರೆಸ್​ ಮತ್ತು ಬಿಜೆಪಿಯ ಪ್ರತಿಷ್ಠೆ ಕಣವಾಗಿರುವ ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಯ ಮತದಾನವು ಬಿರುಸಿನಿಂದ ನಡೆಯುತ್ತಿದ್ದು ಮಧ್ಯಪ್ರದೇಶದಲ್ಲಿ ಮಧ್ಯಾಹ್ನದವರೆಗೆ ದಾಖಲೆಯ ಮತದಾನವಾಗಿದೆ.

ಮಧ್ಯಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ ಶೇ. 31.33 ರಷ್ಟು ದಾಖಲೆಯ ಮತದಾನವಾಗಿದ್ದು, ಸಾಕಷ್ಟು ಮತದಾರರು ಇನ್ನು ಮತಗಟ್ಟೆಗಳತ್ತ ಧಾವಿಸಿ ಬರುತ್ತಿದ್ದಾರೆ. ಮಿಜೋರಾಂನಲ್ಲಿ ಮಧ್ಯಾಹ್ನ ಒಂದು ಗಂಟೆವರೆಗೆ 49% ರಷ್ಟು ಮತದಾನವಾಗಿದೆ.

ಮಧ್ಯಪ್ರದೇಶದ 230 ಹಾಗೂ ಮಿಜೋರಾಂನ 40 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 2,899 ಅಭ್ಯರ್ಥಿಗಳು ಮಧ್ಯಪ್ರದೇಶದ ಚುನಾವಣಾ ಕಣದಲ್ಲಿದ್ದು, 7,70,395 ಮತದಾರರಿದ್ದಾರೆ. ಮಿಜೋರಾಂನಲ್ಲಿ 209 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ ಮತದಾನ ಆರಂಭ

ಕಮಲ, ಕಾಂಗ್ರೆಸ್ ಪ್ರತಿಷ್ಠೆಯ ರಣಕಣ