ಪೊಲೀಸ್​ ಅಕಾಡೆಮಿಗೆ ಮಧುಕರ​ ಶೆಟ್ಟಿ ಹೆಸರಿಡಿ, ಮುಖ್ಯಮಂತ್ರಿ ಪದಕವನ್ನೂ ಅವರ ಹೆಸರಲ್ಲೇ ಕೊಡಿ: ಬಿಎಸ್​ವೈ

ಬೆಂಗಳೂರು: ಮಧುಕರ​ ಶೆಟ್ಟಿ ಅವರ ಅಕಾಲಿಕ ಮರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಕೆಲ ನಿರ್ಧಾರಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ” ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್​ ಅಕಾಡೆಮಿ, ಯಲಹಂಕದ ಸಶಸ್ತ್ರ ಪೊಲೀಸ್​ ತರಬೇತಿ ಕೇಂದ್ರ, ಚನ್ನಪಟ್ಟಣದ ಪೊಲೀಸ್​ ತರಬೇತಿ ಶಾಲೆ ಈ ಮೂರರಲ್ಲಿ ಯಾವುದಾದರೂ ಒಂದಕ್ಕೆ ಮಧುಕರ ಶೆಟ್ಟಿ ಹೆಸರನ್ನು ಇಡುವಂತೆಯೂ, ಉನ್ನತ ಸೇವೆಗಾಗಿ ಪೊಲೀಸರಿಗೆ ಪ್ರತಿ ವರ್ಷ ನೀಡುವ ಮುಖ್ಯಮಂತ್ರಿ ಪದಕವನ್ನು ಮಧುಕರ್​ ಶೆಟ್ಟಿ ಹೆಸರಲ್ಲಿ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದ ಐಪಿಎಸ್​ ಅಧಿಕಾರಿ ಮಧುಕರ​ ಶೆಟ್ಟಿ ಅವರು ಶುಕ್ರವಾರವಷ್ಟೇ ಹೈದರಾಬಾದ್​ನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.