ಮದ್ದೂರಿನ ವಿವಿಧೆಡೆ ಮಹಿಳಾ ದಿನಾಚರಣೆ

ಮದ್ದೂರು: ಪಟ್ಟಣದ ವಿವಿಧೆಡೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಶಿವಪುರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಇಒ ರೇಣುಕಮ್ಮ, ಮಹಿಳೆಯನ್ನು ಸಮಾಜ ಪೂಜ್ಯ ಭಾವನೆಯಿಂದ ನೋಡಬೇಕು ಎಂದರು. ಕ್ರೀಡಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ, ಕಾರ್ಯದರ್ಶಿ ಅನಂತೇಗೌಡ, ಶಿಕ್ಷಕರಾದ ಪುಟ್ಟಸ್ವಾಮಿ, ಲೋಕೇಶ್, ಸತೀಶ್, ಪುಟ್ಟನಾಯಕ್, ರಮೇಶ್ ಇತರರು ಹಾಜರಿದ್ದರು.

ರಕ್ತದಾನ ಶಿಬಿರ: ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೋಟರಿ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲ ಬಿ.ವಿ.ಎಸ್.ಶೇಂಡಿಗೆ ಮಾತನಾಡಿ, ರಕ್ತದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಉಪನ್ಯಾಸಕರಾದ ಶಂಕರೇಗೌಡ, ಪ್ರಕಾಶ್, ಶ್ರುತಿ, ಜಯವರ್ಧನ್, ಅಂದಾನಿಗೌಡ, ವಿಜಯ್, ಮಾಜಿ ಸೈನಿಕ ಕುಮಾರ್ ಇತರರು ಹಾಜರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಕಚೇರಿ: ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

4 ನೇ ಅಪರ ಸಿವಿಲ್ ನ್ಯಾಯಾಧೀಶರಾದ ಕುಮಾರಿ ತೃಪ್ತಿಧರಣಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಾನಂದ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಎನ್. ಪಿ.ಎಂ.ಬಾಲುಸುಬ್ರಮಣಿ, 1ನೇ ಅಪರ ಸಿವಿಲ್ ನ್ಯಾಯಾಧೀಶ ಕೆ.ಎನ್.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯ, ಕಾರ್ಯದರ್ಶಿ ಶಿವಣ್ಣ, ಸಿಡಿಪಿಒ ಚೇತನ್‌ಕುಮಾರ್ ಇದ್ದರು.

ಜನ ಅಭಿವೃದ್ಧಿ ಸಂಸ್ಥೆ: ಜನ ಅಭಿವೃದ್ಧಿ ಮಹಿಳಾ ಸಂಸ್ಥೆ ವತಿಯಿಂದ ಮಹಿಳಾ ದಿನ ಆಚರಣೆ ಮಾಡಲಾಯಿತು. ಒಡಿಪಿ ಸಂಸ್ಥೆಯ ಸ್ಟೆಲ್ಲ ಮಾತನಾಡಿದರು. ಮಾ. 12 ರಂದು ಮೈಸೂರಿನಲ್ಲಿ ನಡೆಯಲಿರುವ ಮಹಿಳಾ ಮಹಾಒಕ್ಕೂಟದ 35ನೇ ವಾರ್ಷಿಕೋತ್ಸವ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ಸೆಲ್ವಿ ಮುರಗೇಶ್, ಮೇರಿ ಲಾಲಪ್, ಲವೇರಾ, ಭಾಗ್ಯ, ಜಯಮ್ಮ, ಲಕ್ಷ್ಮಮ್ಮ, ಶಶಿಕಲಾ, ಗಾಯತ್ರಿ ಇತರರು ಇದ್ದರು.