ಮಾರಮ್ಮ ದೇವಿ ಕೊಂಡೋತ್ಸವ

ಮದ್ದೂರು: ಪಟ್ಟಣದ ಚನ್ನೇಗೌಡನ ದೊಡ್ಡಿ ಗ್ರಾಮದಲ್ಲಿ ಮಾರಮ್ಮ ದೇವಿ, ಮಹದೇಶ್ವರ ಸ್ವಾಮಿ ಕೊಂಡೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.
ದೇಗುಲದ ಆವರಣದಲ್ಲಿ ಕೆಂಡದ ಮೇಲೆ ದೇವರ ಪಟವನ್ನು ಹೊತ್ತು ಪ್ರಧಾನ ಆರ್ಚಕ ಕೊಂಡ ಹಾಯ್ದರು. ಇದಕ್ಕೆ ಸಾವಿರಾರು ಭಕ್ತಾಧಿಗಳು ಸಾಕ್ಷಿಯಾದರು.
ಕೊಂಡೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಸುತ್ತುಮತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ವಿಶೇಷ ಪೂಜೆ ಮಾಡಿಸಿ ದೇವರ ಕೃಪೆಗೆ ಪಾತ್ರರಾದರು.