More

    ಗ್ರಾಮೀಣ ಕ್ರೀಡಾಕೂಟದಲ್ಲಿ ಮಕ್ಕಳ ಸಂಭ್ರಮ

    ಮದ್ದೂರು: ತಾಲೂಕಿನ ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಮತ್ತು ಸರ್ಕಾರಿ ಮಹಿಳಾ ಕಾಲೇಜಿನ ವತಿಯಿಂದ ಬುಧವಾರ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.
    ಕ್ರೀಡಾಕೂಟದಲ್ಲಿ ಕೆಸರುಗದ್ದೆ ಓಟ, ಕೂಸುಮರಿ, ಹಿಮ್ಮಖ ಓಟ, ಹಗ್ಗ ಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. 200ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
    ವಿಜೇತರ ವಿವರ: ಕೆಸರು ಗದ್ದೆ ಓಟ ಶಾಲಿನ (ಪ್ರ), ಚಂದನಾ (ದ್ವಿ), ಕಾವ್ಯಾ (ತೃ). ಕೆಸರು ಗದ್ದೆ ಹಿಮ್ಮುಖ ಓಟ ಚೈತ್ರಾ (ಪ್ರ), ಶಾಲಿನ (ದ್ವಿ), ಸಹನಾ (ತೃ). ಯುವಕರ ಕೆಸರು ಗದ್ದೆ ಓಟ ಪ್ರಮೋದ (ಪ್ರ), ದರ್ಶನ್ (ದ್ವಿ), ಪ್ರಶಾಂತ (ತೃ). ಹಗ್ಗ ಜಗ್ಗಾಟ ಯುವತಿಯರ ವಿಭಾಗದಲ್ಲಿ ಕದಂಬ ತಂಡ (ಪ್ರ) ಹಾಗೂ ತುಂಗಾ ತಂಡದ (ದ್ವಿ) ಬಹುಮಾನಗಳನ್ನು ಪಡೆದುಕೊಂಡಿತು.
    ಕ್ರೀಡಾಕೂಟಕ್ಕೆ ವಿಶ್ವ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್‌ಕುಮಾರ್ ಚಾಲನೆ ನೀಡಿದರು. ಸಂಘದ ಕಾರ್ಯದರ್ಶಿ ಲಾರಾ ಪ್ರಸನ್ನ, ಎನ್.ಎಸ್.ಎಸ್. ಅಧಿಕಾರಿಗಳಾದ ಸುರೇಶ್ ಬಾಬು, ನಮ್ರತಾ ಮುಖಂಡರಾದ ಮಹೇಶ್ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts