ಗೃಹ ಸಚಿವ ಎಂ.ಬಿ. ಪಾಟೀಲ್​ ಒಬ್ಬ ಹುಚ್ಚ; ಅದಕ್ಕೆ ಆತ ಪ್ರತ್ಯೇಕ ಧರ್ಮ ಹೋರಾಟ ನಡೆಸುತ್ತಿದ್ದಾನೆ: ರೇಣುಕಾಚಾರ್ಯ

ಹೊನ್ನಾಳಿ: ಗೃಹ ಸಚಿವ ಎಂ.ಬಿ. ಪಾಟೀಲ್​ಗೆ ಬುದ್ಧಿಭ್ರಮಣೆಯಾಗಿದೆ. ಅವನೊಬ್ಬ ಹುಚ್ಚ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಎಂ.ಬಿ. ಪಾಟೀಲ್​ ಅವರ ನಿಲುವನ್ನು ಖಂಡಿಸಿ ರೇಣುಕಾಚಾರ್ಯ ಈ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಬಂದಾಗ ಮಾತ್ರ ಧರ್ಮದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಗೆ ಹಿಂದೂ ಧರ್ಮ ಒಂದೇ. ಎಂದೆಂದಿಗೂ ಅದು ಧರ್ಮ ವಿಭಜಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
1.600 ಕೆ.ಜಿ. ಬೆಳ್ಳಿ ಖಡ್ಗ ಉಡುಗೊರೆ

ಹೊನ್ನಾಳಿಯಲ್ಲಿ ರೋಡ್​ ಶೋ ನಡೆಸಲು ಆಗಮಿಸಲಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರಿಗೆ 1 ಕೆ.ಜಿ. 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಉಡುಗೊರೆಯಾಗಿ ನೀಡಲು ರೇಣುಕಾಚಾರ್ಯ ನಿರ್ಧರಿಸಿದ್ದಾರೆ. ಹೊನ್ನಾಳಿಯ ಖಾಸಗಿ ಬಸ್​ ನಿಲ್ದಾಣದ ಎದುರಿಗಿನ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಈ ಉಡುಗೊರೆ ನೀಡಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)