More

    ಲಸ್ಟ್ ಸ್ಟೋರಿ 2 ಟೀಸರ್ ರಿಲೀಸ್; 4 ಕಿರು ಕಥೆಯನುಳ್ಳ ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ ಗೊತ್ತಾ?

    ಮುಂಬೈ: 4 ಕಿರು ವಿವಿಧ ಕಥೆಗಳನ್ನು(Anthology) ಒಂದು ಚಿತ್ರವಾಗಿ ರೂಪಿಸಿರುವ ಲಸ್ಟ್ ಸ್ಟೋರಿಸ್ 2(Lust Stories 2) ಚಿತ್ರದ ಟೀಸರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡಿದೆ.

    ಇದನ್ನೂ ಓದಿ:  ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವುದು ಈ ಕುಟುಂಬದ ಸಂಪ್ರದಾಯವಂತೆ!

    ಆರ್. ಬಾಲ್ಕಿ, ಕೊಂಕಣ ಸೇನ್ ಶರ್ಮ, ಸುಜಯ್ ಗೋಶ್ ಮತ್ತು ಅಮಿತ್ ರವಿಂದ್ರನಾಥ್ ಶರ್ಮ ನಿರ್ದೇಶನದಲ್ಲಿ ಮೂಡಿಬಂದಿರುವ ಲಸ್ಟ್ ಸ್ಟೋರಿಸ್ ಚಿತ್ರವನ್ನು ನೆಟ್​ಫ್ಲಿಕ್ಸ್(Netflix) ಇಂದು ಅಧಿಕೃತವಾಗಿ ಘೋಷಿಸಿದೆ.
    ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟಿ ಕಾಜೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ನೀನಾ ಗುಪ್ತಾ, ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ(Tamannaah Bhatia), ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಅಂಗದ್ ಬೇಡಿ, ಅಮೃತಾ ಶುಭಾಷ್, ತಿಲೋಟಮಾ ಶೋಮ್ ಮತ್ತು ಕುಮುದ್ ಮಿಶ್ರಾ ಸೇರಿದಂತೆ ಖ್ಯಾತ ನಟ-ನಟಿಯರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಇಂದು ಬಿಡುಗಡೆಗೊಂಡಿರುವ ಲಸ್ಟ್ ಸ್ಟೋರಿಸ್ 2 ಚಿತ್ರದ ಟೀಸರ್ ಸಿನಿಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದು, ಟೀಸರ್ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 1 ನಿಮಿಷದ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಶೀಘ್ರವೇ ಲಸ್ಟ್ ಸ್ಟೋರಿಸ್ 2 ನಿಮ್ಮ ಮುಂದೆ ಹಾಜರಾಗಲಿದೆ ಕೇವಲ ನೆಟ್​ಫ್ಲಿಕ್ಸ್​ನಲ್ಲಿ ಮಾತ್ರ ಎಂದು ನೆಟ್​ಫ್ಲಿಕ್ಸ್ ಘೋಷಿಸಿದೆ.

    ಮದ ಇಳಿಯೋದಕ್ಕೆ-ಇಳ್ಸೋದಕ್ಕೆ ಬಹಳ ಕಾಲ ಬೇಕಾಗಲ್ಲ: ಸಿ.ಟಿ. ರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts