ಇಂದು ಸಂಪೂರ್ಣ ಚಂದ್ರಗ್ರಹಣ: ಇದು ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ? Lunar Eclipse

Lunar Eclipse

Lunar Eclipse : ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಚಂದ್ರನಿಗೆ ಪ್ರಮುಖ ಸ್ಥಾನವಿದೆ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ.

ಚಂದ್ರನ ಮೇಲೆ ನಡೆಯುವ ಪ್ರತಿಯೊಂದು ಘಟನೆಯೂ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಗ್ರಹಣಗಳು ಸಹ ಪರಿಣಾಮ ಬೀರುತ್ತವೆ. ಇಂದು, ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಇದನ್ನು ಬ್ಲಡ್​ ಮೂನ್​ ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಹೋಳಿ ದಿನದಂದೇ ಚಂದ್ರಗ್ರಹಣ ಸಂಭವಿಸುವುದರಿಂದ ಇದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಹಾಗಾದರೆ, ಚಂದ್ರಗ್ರಹಣದ ಪರಿಣಾಮ ಭಾರತದ ಮೇಲೆ ಇರುತ್ತದೆಯೇ? ಈ ಪ್ರಶ್ನೆಗೆ ನಾವೀಗ ಉತ್ತರ ಕಂಡುಕೊಳ್ಳೋಣ.

ಇಂದು ಫಾಲ್ಗುಣ ಪೂರ್ಣಿಮೆ. ಅಲ್ಲದೆ, ಇಂದು ಹೋಳಿ ಹಬ್ಬದ ದಿನವೂ ಹೌದು. ಈ ಪವಿತ್ರ ಹೋಳಿ ಹಬ್ಬದ ಸಂದರ್ಭದಲ್ಲಿ, ಸೂರ್ಯನು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಚಂದ್ರನು ಇಂದು ಮಧ್ಯಾಹ್ನ 12.27ಕ್ಕೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಮತ್ತು ಬೇರೆ ರಾಶಿಯನ್ನು ಪ್ರವೇಶಿಸುತ್ತಾನೆ. ಈ ವರ್ಷದ ಮೊದಲ ಚಂದ್ರಗ್ರಹಣ ಇದಾಗಿದ್ದು, ಇಂದು (ಮಾ.14) ಸಿಂಹ ರಾಶಿಯಾದ ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ಗ್ರಹಣ ಸಂಭವಿಸುತ್ತದೆ.

ಇದನ್ನೂ ಓದಿ: ಒಂದು ಕಾಲದಲ್ಲಿ ಟೀಮ್​ ಇಂಡಿಯಾ ಬೌಲರ್​ ಆಗಿದ್ದ ಈತ ಇಂದು ಕೆಕೆಆರ್​ ತಂಡದ ನೆಟ್​ ಬೌಲರ್! IPL 2025 ​

ಇಂದಿನ ಚಂದ್ರಗ್ರಹಣವು ಬೆಳಗ್ಗೆ 9.29 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.29 ರವರೆಗೆ ಇರುತ್ತದೆ. ಈ ಚಂದ್ರಗ್ರಹಣವು ಬೆಳಗ್ಗೆ ಸಂಭವಿಸುತ್ತಿರುವುದರಿಂದ, ಅದು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಅದರ ಪರಿಣಾಮ ಭಾರತದಲ್ಲಿ ಇರುವುದಿಲ್ಲ ಎಂದು ವಿದ್ವಾಂಸರು ಹೇಳುತ್ತಾರೆ.

ಈ ಚಂದ್ರಗ್ರಹಣವು ರಕ್ತ ಚಂದ್ರನಂತೆ ಕಾಣಿಸಿಕೊಳ್ಳುವುದರಿಂದ ಇದನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಚಂದ್ರಗ್ರಹಣವು ಉತ್ತರ ಮತ್ತು ದಕ್ಷಿಣ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾದಲ್ಲಿ ಗೋಚರಿಸಲಿದೆ. ಚಂದ್ರಗ್ರಹಣದ ಯಾವುದೇ ಪರಿಣಾಮವಿಲ್ಲದ ಕಾರಣ ಭಾರತದಲ್ಲಿ ಜನರು ಸಾಮಾನ್ಯ ಜೀವನವನ್ನು ನಡೆಸಬಹುದು. ಗರ್ಭಿಣಿಯರು ಚಿಂತಿಸಬೇಕಾಗಿಲ್ಲ ಎಂದು ತಜ್ಞರು ಸೂಚಿಸುತ್ತಾರೆ.

ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು… Coconut water

ಹಣದ ಸಮಸ್ಯೆಗಳಿಂದ ಮುಕ್ತಿ ಪಡೆಯಲು 1 ದಿನ: ಈ ದಿವಸ ನೀವಿದನ್ನು ಮಾಡಿದ್ರೆ ದುಡ್ಡಿನ ತೊಂದರೆ ಮಾಯ! Money Problems

Share This Article

ಚಿನ್ನದ ಉಂಗುರ ಧರಿಸಲು ಯಾವ ಬೆರಳು ಉತ್ತಮ! ನೀವು ಖಂಡಿತವಾಗಿಯೂ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು..Astro Tips

Astro Tips: ಸಾಮಾನ್ಯವಾಗಿ, ನಮ್ಮಲ್ಲಿ ಹೆಚ್ಚಿನವರು ಚಿನ್ನದ ಉಂಗುರಗಳನ್ನು ಇಷ್ಟಪಡುತ್ತೇವೆ. ಕೆಲವರು ಕೇವಲ ಎರಡು ಉಂಗುರಗಳನ್ನು…

ಈ 3 ರಾಶಿಯವರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದ್ರೂ ಮಾಡ್ತಾರಂತೆ! ಅವರು ಯಾರೆಂದು ನಿಮಗೆ ಗೊತ್ತಾ? Zodiac Signs

Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು…

ಪ್ರಿ-ಡಯಾಬಿಟಿಸ್​ ಇರುವವರು ಈ ಆಹಾರದಿಂದ ಅಂತರ ಕಾಯ್ದುಕೊಳ್ಳಿ; ಮಿಸ್​ ಆದ್ರೆ ಅಪಾಯ ತಪ್ಪಿದ್ದಲ್ಲ | Health Tips

ಇಂದಿನ ಕಾಲದಲ್ಲಿ ಮಧುಮೇಹವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು ಅದನ್ನು ಗುಣಪಡಿಸಲಾಗದು. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು…