More

    ಚಂದ್ರಗಹ್ರಣದ ಲೈವ್​ ನಿಮ್ಮ ಅಂಗೈಗೆ, ಮೊಬೈಲ್​ನಲ್ಲೇ ಲೈವ್​ ನೋಡಲು, ಅದರ ಫೋಟೋ ತೆಗೆಯಲು ಇಲ್ಲಿವೆ ಕೆಲ ಟಿಪ್ಸ್​ಗಳು…..

    ಇನ್ನೇನು ಕೆಲ ಹೊತ್ತಿನಲ್ಲೇ ತೋಳ ಚಂದ್ರಗ್ರಹಣ ನಡೆಯಲಿದೆ.

    ಬಾನಂಗಳದಲ್ಲಿ ನಡೆಯಲಿರುವ ಈ ಅದ್ಭುತವನ್ನು ಅಂಗೈಯಲ್ಲೇ ಲೈವ್​ ಆಗಿ ಕಣ್ತುಂಬಿಕೊಳ್ಳುವುದು ಹೇಗೆ? ಅದರ ಫೋಟೊ ತೆಗೆಯಬೇಕೆ? ನಿಮ್ಮ ಮೊಬೈಲ್​ನಲ್ಲೇ ಲೈವ್​ ನೋಡಲು ಲಿಂಕ್​ ಬೇಕೆ..? ಇಲ್ಲಿದೆ ನೋಡಿ ಮಾಹಿತಿ.

    ಇಂದು ಸಂಭವಿಸಲಿರುವ ಚಂದ್ರಗ್ರಹಣ ಭಾರತ ಸೇರಿ ಏಷ್ಯಾದ ಕೆಲ ಭಾಗಗಳಲ್ಲಿ, ಆಫ್ರಿಕಾ, ಯೂರೋಪಿನಲ್ಲಿ ಗೋಚರಿಸುತ್ತದೆ. 2020ರ ಮೊದಲ ಚಂದ್ರಗ್ರಹಣವನ್ನು ಟೆಕ್ನಲಾಜಿ ಬಳಸಿ ಹೇಗೆ ನೋಡಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

    ಇಂದಿನ ಚಂದ್ರ ಗ್ರಹಣ ಒಟ್ಟು ನಾಲ್ಕು ತಾಸು ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10.37ಕ್ಕೆ ಆರಂಭವಾಗಲಿದ್ದು, ಬೆಳಗಿನ ಜಾವ 2.42ರವರೆಗೆ ಗ್ರಹಣ ನಡೆಯಲಿದೆ.

    ನೀವು ಚಂದ್ರ ಗ್ರಹಣವನ್ನು ಲೈವ್​ ಆಗಿ ನೋಡಬೇಕೆಂದರೆ ಯೂಟ್ಯೂಬ್​ನ CosmoSapiens ಚಾನೆಲ್​ಗೆ ಸರ್ಚ್​ ಮಾಡಿ. ಇಲ್ಲಿ ನಿಮಗೆ ಚಂದ್ರಗ್ರಹಣದ ಲೈವ್​ ವಿಡಿಯೋ ದೊರೆಯುತ್ತದೆ.

    ಫೋಟೋ ಸೆರೆ ಹಿಡಿಯಿರಿ 

    ಚಂದ್ರ ಗ್ರಹಣ ಎಂದರೆ ಆಕಾಶದಲ್ಲಿ ನಡೆಯುವ ಅದ್ಭುತ ಪ್ರಕ್ರಿಯೆ. ಇಂತವು ನಾವೇ ಪೋಟೋ ತೆಗೆದುಕೊಳ್ಳುವ ಖುಷಿಯೇ ಬೇರೆ. ನೇರವಾಗಿ ಈ ಪ್ರಕ್ರಿಯೆ ನೋಡಲು ಅದಕ್ಕೆ ವಿಶೇಷ ಕನ್ನಡಕದ ಅವಶ್ಯವಿದೆ. ಆದರೆ ನೀವೇ ಫೋಟೋ ಸೆರೆ ಹಿಡಿಯಲು ಇಲ್ಲಿವೆ ಕೆಲ ಟಿಪ್ಸ್​ಗಳು.

    • ಆಕಾಶ ಶುದ್ಧವಾಗಿ ಕಾಣುವ ಜಾಗ ಆರಿಸಿಕೊಳ್ಳಿ. ಆ ಸ್ಥಳ ಎತ್ತರವಾಗಿರಲಿ.
    • ನಿಮ್ಮಲ್ಲಿ ಫೋಟೋ ಸ್ಟ್ಯಾಂಡ್​ (ಟ್ರೈಪ್ಯಾಡ್​) ಇದ್ದರೆ ಬಳಸಿ. ಇದರಿಂದ ಸ್ಥಿರ ಚಿತ್ರಣ ಹಿಡಿಯಲು ಅನುಕೂಲವಾಗುತ್ತದೆ.
    • ಸಮಯಕ್ಕೆ ಸರಿಯಾಗಿ ತೆರಳಿ, ನಿಮ್ಮ ಮನಸ್ಸಿಗೆ ಹಿಡಿಸುವಂತಹ ಫೋಟೋ ತೆಗೆಯಬಹುದು.
    • ನಿಮ್ಮ ಸ್ಮಾರ್ಟ್​ ಫೋನಿನಲ್ಲಿ ಎಚ್​ಡಿಆರ್​ ಮೋಡ್​ ಆಯ್ಕೆ ಮಾಡಿಕೊಳ್ಳಿ. ಎಕ್ಸ್​ಪೋಸರ್​ನ್ನು ಆನ್​ ಮಾಡಿಟ್ಟುಕೊಳ್ಳಿ.
    • ಫೋಟೋ ತೆಗೆಯುವಾಗ ಫ್ಲ್ಯಾಶ್​ ಅಥವಾ ಝೂಮ್​ ಬಳಕೆ ಬೇಡ
    • ಸಾಧ್ಯವಾದರೆ ಪ್ರೊ ಮೋಡ್​ಗೆ ಹೋಗಿ. ಅಲ್ಲಿ ನಿಮಗೆ ವಿವಿಧ ಸಾಧ್ಯತೆಗಳನ್ನು ಬಳಸಿ ಫೊಟೋ ತೆಗೆಯಬಹುದು.

    ಕೊನೆಯದಾಗಿ ಎಷ್ಟು ಸಾಧ್ಯವೋ ಅಷ್ಟು ಫೋಟೋ ತೆಗೆಯಿರಿ. ಬೇಡ ಎಂದ ಕೆಲವನ್ನು ಆಮೇಲೆ ಡಿಲಿಟ್​ ಮಾಡಿದರಾಯಿತು.  (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts