ಚಂದ್ರಗ್ರಹಣ ಸಮಯದಲ್ಲಿ ಎಂಟು ಅಂಗಡಿಗಳನ್ನು ದೋಚಿದ ಖದೀಮರು

ಮೈಸೂರು: ಚಂದ್ರ ಗ್ರಹಣ ಸಮಯದಲ್ಲೇ ಖದೀಮರು ಕೈಚಳಕ ತೋರಿದ್ದು ಕನಕದಾಸ ನಗರದ ಒಟ್ಟೂ ಎಂಟು ಅಂಗಡಿಗಳನ್ನು ದೋಚಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.

ರಾತ್ರಿ ಚಂದ್ರ ಗ್ರಹಣದ ಸಮಯದಲ್ಲಿ ಮೆಡಿಕಲ್​ ಸ್ಟೋರ್​, ಸ್ಟೇಶನರಿ ಅಂಗಡಿ, ಪ್ರಾವಿಷನ್​ ಸ್ಟೋರ್​ಗಳಲ್ಲಿ ಕಳವು ಮಾಡಿದ್ದು ಸಿಕ್ಕಿದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಮೈಸೂರಿನಲ್ಲಿ ಗ್ರಹಣ ಕಾಲದಲ್ಲಿ ಯಾರೂ ಹೊರಗೆ ಬಂದಿರಲಿಲ್ಲ. ಇದನ್ನೇ ಅನುಕೂಲವನ್ನಾಗಿಸಿಕೊಂಡ ಕಳ್ಳರು ಎಂಟು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.