ಗ್ರಹಣ ಪರಿಣಾಮ ಪರಿಹಾರ

Latest News

ಇಂದಿನಿಂದ ಬಾಬಾ ರಾಮ್‌ದೇವ್ ಯೋಗೋತ್ಸವ

ಉಡುಪಿ: ಐದು ದಿನಗಳ ಯೋಗೋತ್ಸವಕ್ಕೆ ಕೃಷ್ಣನೂರು ಉಡುಪಿ ಸಜ್ಜುಗೊಂಡಿದ್ದು, ನಗರ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿದೆ. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನ.16ರಿಂದ 20ರ ವರೆಗೆ ಬೃಹತ್ ಯೋಗ...

ಉದ್ಯಮಿಯಿಂದ 5 ಹುಲಿಮರಿ ದತ್ತು

ಗುರುಪುರ: ಕೊಲ್ಲಿ ರಾಷ್ಟ್ರ ಅಬುಧಾಬಿಯ ಪ್ರಸಿದ್ಧ ಉದ್ಯಮಿ, ಮೂಲತಃ ಮಂಗಳೂರಿನ ರಾಮದಾಸ ಕಾಮತ್ ಮತ್ತು ಅವರ ಪತ್ನಿ ಜಯಶ್ರೀ ಕಾಮತ್ ಪಿಲಿಕುಳ ಉದ್ಯಾನದ ಅಭಿವೃದ್ಧಿ ಕಾರ್ಯಗಳಿಗೆ...

ರೈತರ ಬಂದೂಕು ಪೊಲೀಸರ ವಶಕ್ಕೆ; ಬೆಳೆ ಉಳಿಸಿಕೊಳ್ಳಲು ಪರದಾಟ

ರಾಜೇಂದ್ರ ಶಿಂಗನಮನೆ ಶಿರಸಿ: ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಯಲ್ಲಿ ಬಂದೂಕುಗಳನ್ನು ಪೊಲೀಸ್ ಠಾಣೆಯವರು ವಶಕ್ಕೆ ಪಡೆದಿರುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಇದರಿಂದ ವಿನಾಯಿತಿ...

‘ಪವಿತ್ರ ಆರ್ಥಿಕತೆ’ಗಾಗಿ ಅಸಹಕಾರ ಚಳವಳಿ: ರಂಗಕರ್ಮಿ ಪ್ರಸನ್ನ ಹೆಗ್ಗೋಡು

ಮಂಗಳೂರು: ಸಣ್ಣ ಕೈಗಾರಿಕೆಗಳಿಗೆ ಚೈತನ್ಯ ತುಂಬುವ ಉದ್ದೇಶದಿಂದ ‘ಪವಿತ್ರ ಆರ್ಥಿಕತೆ’ ಹೆಸರಿನಲ್ಲಿ ಡಿ.1ರಿಂದ ಕೇಂದ್ರ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ರಂಗಕರ್ಮಿ ಪ್ರಸನ್ನ...

ಬಲಿಗಾಗಿ ಕಾದಿವೆ ಕಬ್ಬಿಣದ ರಾಡ್‌ಗಳು..!

ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಿಂದ ರಾಘವೇಂದ್ರ ಮಠಕ್ಕೆ ತೆರಳುವ ಪುರಸಭೆ ಹಿಂಭಾಗದಲ್ಲಿರುವ ರಸ್ತೆಗೆ ವಾಹನ ಸವಾರರು ಎಚ್ಚರಿಕೆಯಿಂದ ಮುಂದೆ ಸಾಗಬೇಕು. ಇಲ್ಲದಿದ್ದರೆ ಅವರ ಪ್ರಾಣಕ್ಕೆ...

ಉತ್ತರಾಷಾಢ ನಕ್ಷತ್ರ ಮಕರ ರಾಶಿಯಲ್ಲಿ ಸಂಭವಿಸುವ ಇಂದಿನ ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣ ಆಸ್ತಿಕರ ಪಾಲಿಗೆ ಒಂದು ಪರ್ವಕಾಲ ಎನ್ನಬಹುದು. ಈ ಪುಣ್ಯಕಾಲದ ಸದುಪಯೋಗ ನಮ್ಮ ಕೈಲೇ ಇದೆ. ಚಂದ್ರ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಉಂಟಾಗುವ ಪ್ರಭಾವ ಹಾಗೂ ಪರಿಹಾರ ಕುರಿತು ಇಲ್ಲಿ ವಿವರಿಸಲಾಗಿದೆ. ಅಂದಹಾಗೆ, ಇದರ ಪರಿಣಾಮಗಳು ಗ್ರಹಣದ ಮುಂಚಿನ 15 ದಿನದಿಂದ ಗ್ರಹಣ ನಂತರದ ಎರಡು ತಿಂಗಳವರೆಗೂ ಇರುತ್ತವೆ.

| ಆಚಾರ್ಯ ವಿಠ್ಠಲ ಭಟ್ ಕೆಕ್ಕಾರು

ಮೇಷ: ಖಗ್ರಾಸ ಚಂದ್ರಗ್ರಹಣದ ಶುಭ ಫಲ ನೀಡುವ ನಾಲ್ಕು ರಾಶಿಗಳಲ್ಲಿ ಮೊದಲನೆಯದು ಮೇಷ. ಈ ರಾಶಿಯವರು ಈ ಗ್ರಹಣದಿಂದಾಗಿ ಸುಖ ಸಂತೋಷ ಹಾಗೂ ನೆಮ್ಮದಿ ಕಾಣುತ್ತಾರೆ. ಶುಭ ಸುದ್ದಿ ಬರಬಹುದು. ತಾಯಿಯೊಂದಿಗೆ ಇರುವ ಭಿನ್ನಾಭಿಪ್ರಾಯ ಅಥವಾ ಮನೆಯಲ್ಲಿನ ಮನಸ್ತಾಪಗಳು ದೂರವಾಗಿ ನೆಮ್ಮದಿ ಕಾಣಬಹುದು. ಯಾವುದೋ ಕೆಲಸ ಅಪೂರ್ಣ ಆಗಿದ್ದು ಅದರಿಂದಾಗಿ ಚಿಂತೆ ಕಾಡುತ್ತಿದ್ದಲ್ಲಿ ಆ ಕಾರ್ಯ ಸಿದ್ಧಿಸುವುದು. ಉದ್ಯೋಗ ಸ್ಥಾನದಲ್ಲಿ ಬಡ್ತಿ ಅಥವಾ ಕಾಯಂ ಆಗದೇ ತೂಗುಯ್ಯಾಲೆ ಪರಿಸ್ಥಿತಿ ಇದ್ದಲ್ಲಿ ಆ ಸಮಸ್ಯೆಗಳು ಪರಿಹಾರ ಆಗುತ್ತವೆ.

ವೃಷಭ: ನಿಮಗೆ ಈ ಗ್ರಹಣ ಮಿಶ್ರಫಲವನ್ನು ಸೂಚಿಸುತ್ತದೆ. ಇನ್ನು ನಿಮ್ಮ ರಾಶಿಯಿಂದ ಭಾಗ್ಯ ಸ್ಥಾನ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಸ್ವಲ್ಪ ಅವಮಾನ ಆಗುವ ಸಾಧ್ಯತೆ ಇದೆ. ನಿಮಗೆ ಬರಬೇಕಿರುವ ಕೆಲ ಅವಕಾಶಗಳು ಅಥವಾ ನಿಮ್ಮ ಪಾಲಾಗಬೇಕಿರುವ ಲಾಭ ಅನ್ಯರ ಪಾಲಾಗುವ ಸಾಧ್ಯತೆ ಇದೆ. ಆದರೆ ಅದರಿಂದಾಗಿ ನಿಮಗೆ ಆಗಬಹುದಾದ ಕೆಲ ಆರ್ಥಿಕ ನಷ್ಟ ಸ್ವಲ್ಪ ತಪ್ಪುತ್ತದೆ ಅಥವಾ ಅಂಥ ಅವಕಾಶ ಸಿಕ್ಕಿದ್ದರಿಂದ ನಿಮ್ಮ ಮೇಲೆ ಬೀಳಬಹುದಾದ ಆರ್ಥಿಕ ಹೊರೆ ತಪ್ಪಬಹುದು. ಒಂದು ಅವಕಾಶ ತಪ್ಪಿದರೆ ಬೇಸರ ಬೇಡ. ಹಾಗಾಗಿದ್ದು ಒಳ್ಳೆಯದಕ್ಕೆ ಎಂದು ಭಾವಿಸಬೇಕು.

ಮಿಥುನ: ಚಂದ್ರಗ್ರಹಣ ಅಶುಭ ಫಲ ರಾಶಿಗಳಲ್ಲಿ ಮೊದಲನೆಯದು ಮಿಥುನ. ನಿಮ್ಮ ರಾಶಿಯಿಂದ ಅಷ್ಟಮದಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಅನಿವಾರ್ಯವಲ್ಲದ ವಿನಾ ಯಾವುದೇ ದೂರ ಪ್ರಯಾಣ ಬೇಡ. ನಿಮ್ಮ ವೃತ್ತಿ ಅಥವಾ ವ್ಯಾಪಾರದ ಮೇಲೂ ಗ್ರಹಣದ ದುಷ್ಪ್ರಭಾವ ಬೀಳಲಿದೆ. ಆದುದರಿಂದ ವ್ಯಾಪಾರದಲ್ಲಿ ದುಡ್ಡು ತೆಗೆದುಕೊಳ್ಳದೆ ಸಾಲ ಎಂದು ವಸ್ತುಗಳನ್ನು ಕೊಡಬೇಡಿ ಹಾಗೂ ಹೂಡಿಕೆ ಮಾಡಲು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಬೇಡಿ.

ಕಟಕ: ಫಲ ವಿಚಾರದಲ್ಲಿ ನಿಮಗೆ ಮಿಶ್ರಫಲ ಸಾಧ್ಯತೆ. ಗ್ರಹಣ ನಿಮ್ಮ ರಾಶಿಯಿಂದ ಸರಿಯಾಗಿ ಏಳನೆಯ ರಾಶಿಯಲ್ಲಿ ಆಗುತ್ತಿರುವುದರಿಂದ ಸ್ನೇಹಿತರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ, ಅವರೊಂದಿಗೆ ವಾಗ್ವಾದ ಬೇಡ. ವಿವಾಹಿತರು ಬಾಳಸಂಗಾತಿಯೊಂದಿಗೆ ಕಲಹ ಆಗದಂತೆ ಎಚ್ಚರವಹಿಸಿ. ಸ್ತ್ರೀಯರಿಗೆ ಮೊದಲಿನಿಂದ ಯಾವುದಾದರೂ ಗುಪ್ತ ಕಾಯಿಲೆ ಇದ್ದಲ್ಲಿ ಅದು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಚ್ಚರವಹಿಸಿ. ಪುರುಷರು ಸ್ತ್ರೀ ಸಂಬಂಧಿತ ವಿಚಾರಗಳು ಹಾಗೂ ವಿವಾದಗಳಿಂದ ಆದಷ್ಟು ದೂರ ಇರಿ. ಇನ್ನು ಯಾರಿಗೂ ಗೊತ್ತಾಗದಂತೆ ಮಾಡಿದ ವ್ಯವಹಾರಗಳು ತೊಂದರೆ ಕೊಡುವ ಸಮಯ. ಏನೇ ಕಷ್ಟ ಬಂದರೂ ಒಬ್ಬರ ಸಹಾಯ ನಿಮಗೆ ಲಭಿಸುತ್ತದೆ.

ಸಿಂಹ: ಮೊದಲೇ ಪಂಚಮ ಶನಿಕಾಟದಿಂದ ತತ್ತರಿಸಿರುವವರು ನೀವು. ಆದರೆ ನಿಮಗೆ ಈ ಖಗ್ರಾಸಗ್ರಹಣ ಶುಭ ಫಲ ನೀಡುತ್ತಿದೆ. ‘ನನ್ನ ಸಾಲ ತೀರಿಸು’ ಎಂದು ನಿಮ್ಮ ಕುತ್ತಿಗೆ ಮೇಲೆ ಯಾರಾದರೂ ಕೂತಿದ್ದಲ್ಲಿ ಸಾಲ ತೀರಿಸಲು ಅಥವಾ ಅವರಿಗೆ ಸ್ವಲ್ಪವಾದರೂ ದುಡ್ಡು ಕೊಟ್ಟು ಸಮಾಧಾನ ಪಡಿಸಲು ನಿಮಗೆ ಅವಕಾಶ ಲಭಿಸುತ್ತದೆ. ಇನ್ನು ಹೊರಗೆ ಯಾರಿಗೋ ಸಾಲ ಕೊಟ್ಟು ಹಿಂತಿರುಗಿ ಪಡೆಯಲು ಕಷ್ಟಪಡುತ್ತಿದ್ದಲ್ಲಿ ಪೂರ್ಣ ಅಲ್ಲದಿದ್ದರೂ ಸ್ವಲ್ಪ ಭಾಗ ನಿಮ್ಮ ಕೈ ಸೇರಲಿದೆ. ಶುಭ ಸಮಾಚಾರ ಕೇಳಿ ಬಹಳ ದಿನ ಆಯಿತು ಎಂದು ಚಿಂತಿಸುತ್ತಿದ್ದರೆ ಒಳ್ಳೆಯ ಸುದ್ದಿ ಕೇಳುತ್ತೀರಿ. ತೀವ್ರ ತರನಾದ ಆರೋಗ್ಯಬಾಧೆ ಅದರಲ್ಲಿಯೂ ವಿಶೇಷವಾಗಿ ಬೆನ್ನುನೋವು ಇರುವವರಿಗೆ ಇಷ್ಟು ದಿನ ಔಷಧ ಸಹ ಕೆಲಸ ಮಾಡುತ್ತ ಇರಲಿಲ್ಲ, ಈಗ ಔಷಧ ಕೆಲಸ ಮಾಡುತ್ತದೆ.

ಕನ್ಯಾ: ಗ್ರಹಣದ ಫಲ ನಿಮಗೆ ಮಿಶ್ರ ಇದೆ. ನಿಮ್ಮ ರಾಶಿಯಿಂದ ಐದನೇ ರಾಶಿಯಲ್ಲಿ ಗ್ರಹಣ ಆಗುತ್ತಿರುವುದರಿಂದ ನಿಮ್ಮ ಮಕ್ಕಳ ವಿಚಾರದಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ನಿಮ್ಮ ಮಕ್ಕಳು ಸ್ವತಂತ್ರವಾಗಿ ಶಾಲಾ ಕಾಲೇಜುಗಳಿಗೆ ನಿತ್ಯ ಹೋಗುತ್ತಿದ್ದಲ್ಲಿ ಇನ್ನೊಂದು 15-20 ದಿನ ನೀವೇ ಅವರನ್ನು ಕರೆದುಕೊಂಡು ಹೋಗಿ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ನಾನಿದ್ದೇನೆ ನಾನು ಮಾಡಿಕೊಡುತ್ತೇನೆ ಎಂದು ಒಪ್ಪಿಕೊಳ್ಳ ಬೇಡಿ. ನ್ಯಾಯಾಲಯದಲ್ಲಿ ನಿಮಗೆ ಸ್ವಲ್ಪ ಹಿನ್ನಡೆ ಆಗಬಹುದು. ಇನ್ನು ಧನಾಗಮನದ ವಿಚಾರದಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲ. ನಿಮ್ಮ ಊಹೆಗೂ ಕಡಿಮೆ ಬರಬಹುದು ಅಥವಾ ಎರಡು ದಿನ ತಡವಾಗಿ ಬರಬಹುದು. ಆದರೆ ಧನಪ್ರಾಪ್ತಿ ಆಗುತ್ತದೆ. ಯಾವುದಕ್ಕೂ ದೂರ ಪ್ರಯಾಣ ಮುಂದೂಡಿ.

ತುಲಾ: ನಿಮ್ಮ ರಾಶಿಗೆ ಸ್ಪಷ್ಟವಾಗಿ ಅಶುಭ ಫಲವನ್ನು ಹೇಳಲಾಗಿದೆ. ಆದುದರಿಂದ ನಿಮ್ಮ ಉದ್ಯೋಗ ಅಥವಾ ವ್ಯಾಪಾರ ವ್ಯವಹಾರ ಸ್ಥಳ ಎಲ್ಲೆಡೆ ಎಚ್ಚರವಾಗಿರಿ. ನೀವು ವಾಸಿಸುವ ಸುತ್ತಮುತ್ತ, ಎಲ್ಲೆಡೆ ನಿಮ್ಮ ಮಾತಿಗೆ ಗೌರವ ಇದೆ ನಿಮ್ಮ ಮಾತು ಕೇಳುತ್ತಾರೆ ಎಂದು ನಿಮ್ಮ ಕಚೇರಿಯ ಅನವಶ್ಯಕ ಜಗಳಗಳಲ್ಲಿ ಅಥವಾ ಸಹೋದ್ಯೋಗಿಗಳ ಮಧ್ಯದ ವ್ಯವಹಾರಗಳಲ್ಲಿ ಮೂಗು ತೂರಿಸಬೇಡಿ. ಅವರಾಗಿ ನಿಮ್ಮನ್ನು ಕರೆದರೂ ಹೋಗಬೇಡಿ. ನಿತ್ಯದ ವ್ಯವಹಾರದಲ್ಲೂ ಹೆಜ್ಜೆ ಹೆಜ್ಜೆಗೂ ಸಹ ಎಚ್ಚರಿಕೆ ಅವಶ್ಯ. ವಿವಾಹಿತ ಸ್ತ್ರೀಯರು ತವರುಮನೆಯಿಂದ ಅಸಹಕಾರ ಅಥವಾ ಅವಮಾನ ನೋಡಬೇಕಾಗಬಹುದು. ಆದರೆ ಅದು ಸ್ವಲ್ಪ ದಿನ ಮಾತ್ರ. ನಂತರ ಎಲ್ಲ ಸರಿ ಹೋಗುತ್ತದೆ. ಭಯ ಬೇಡ.

ವೃಶ್ಚಿಕ: ಗೋಚಾರದಲ್ಲಿ ವ್ಯಯಸ್ಥಾನದಲ್ಲಿ ಗುರು ಹಾಗೂ ಧನಸ್ಥಾನದಲ್ಲಿ ಶನಿ ಸ್ಥಿತರಿರುವುದರಿಂದ ಹಲವು ತಿಂಗಳುಗಳಿಂದ ನೀವು ಕಷ್ಟನಷ್ಟಗಳನ್ನು ಅನುಭವಿಸುತ್ತ ಬಂದಿದ್ದೀರಿ. ಆದರೆ ಈ ಕಷ್ಟಗಳನ್ನು ತಾತ್ಕಾಲಿಕವಾಗಿ ಬಿಡಿಸುವ ಅಥವಾ ಕಡಿಮೆ ಮಾಡುವ ಉತ್ತಮ ಫಲ ನೀಡುವ ಗ್ರಹಣವಿದು. ಸುತ್ತಮುತ್ತಲಿನ ಸನ್ನಿವೇಶಗಳು ನಿಮಗೆ ಅನುಕೂಲಕರ ಆಗುತ್ತದೆ. ಕೆಲ ದಿನಗಳ ತನಕ ಕೈಯಲ್ಲಿ ದುಡ್ಡು ಕಾಸು ಚೆನ್ನಾಗಿ ಓಡಾಡುತ್ತದೆ. ಬುದ್ಧಿವಂತರಾದರೆ ಆ ದುಡ್ಡು ವ್ಯಯಿಸದೆ ಹಾಗೆ ಉಳಿಸಿಕೊಂಡು ಮುಂದಿನ ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಬಹುದು. ಬಂಡವಾಳ ಹೂಡಿ ಬಹಳ ದಿನಗಳಾಗಿ ಲಾಭ ಸಿಗದ ವ್ಯಾಪಾರಿಗಳಿಗೆ ಲಾಭ ಸಾಧ್ಯತೆ ಇದೆ. ಸ್ತ್ರೀಯರಿಗೆ ಸಹೋದರರ ನೆರವು ಸುಲಭವಾಗಿ ಲಭಿಸಿ ಸಮಸ್ಯೆ ಪರಿಹಾರ ಆಗುತ್ತದೆ.

ಧನು: ನಿಮ್ಮ ರಾಶಿಯಿಂದ ಎರಡನೇ ರಾಶಿಯಲ್ಲಿ ಗ್ರಹಣ ಸಂಭವಿಸುವುದು. ಆದುದರಿಂದ ಹಣ, ಆರ್ಥಿಕ ವಿಚಾರಗಳಲ್ಲಿ ಎಚ್ಚರ ಅವಶ್ಯ. ವಿಶೇಷವಾಗಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರು ಅಥವಾ ಹೆಚ್ಚಿನ ಬಂಡವಾಳ ಹೂಡಿ ಚಲನಚಿತ್ರ ನಿರ್ಮಾಣ ಮಾಡುತ್ತಿರುವವರು ನಷ್ಟ ಅಥವಾ ಕಡಿಮೆ ಲಾಭ ನೋಡಬೇಕಾದೀತು. ಆದುದರಿಂದ ಒಂದೆರಡು ತಿಂಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಡಿ. ಈ ಎರಡು ಕ್ಷೇತ್ರ ಎಂದಲ್ಲ, ರಿಸ್ಕ್ ಇರುವ ಯಾವ ಕ್ಷೇತ್ರದಲ್ಲಿಯೂ ಸದ್ಯ ಕೆಲ ದಿನ ಹೂಡಿಕೆ ಬೇಡ. ನಷ್ಟ ಅನುಭವಿಸಬೇಕಾದೀತು. ಇನ್ನು ನಿಮ್ಮ ಮನೆಯಲ್ಲಿ ಕುಟುಂಬದವರಲ್ಲಿ ಸಹ ಜಗಳ ಮನಸ್ತಾಪ ಆಗಬಹುದು. ಯಾವುದೂ ಎಲ್ಲೆ ಮೀರದಂತೆ ಎಚ್ಚರವಹಿಸಿ.

ಮಕರ: ನಿಮ್ಮ ರಾಶಿಯಲ್ಲಿಯೇ ಗ್ರಹಣ ಆಗುತ್ತಿರುವುದರಿಂದ ನೀವು ಜಾಗೃತರಾಗಿ ಇರಬೇಕು. ಹೆಲ್ಮೆಟ್ ಧರಿಸದೆ ಬೇಜವಾಬ್ದಾರಿಯಿಂದ ವಾಹನ ಚಾಲನೆ ಅಥವಾ ನದಿ, ಸಮುದ್ರ ಇತ್ಯಾದಿ ಜಾಗಗಳಲ್ಲಿ ಈಜುವುದು, ಮರ ಇತ್ಯಾದಿ ಎತ್ತರ ಸ್ಥಳಗಳನ್ನು ಹತ್ತುವುದು ಮಾಡಬೇಡಿ. ಗ್ರಹಣ ಸಮಯದ ಎಲ್ಲ ಆಚರಣೆ ಹಾಗೂ ನಿಯಮಾವಳಿ ಸರಿಯಾಗಿ ಪಾಲಿಸಿ. ಅನಾರೋಗ್ಯ ವೃದ್ಧಿ ಯೋಗ ಇರುವುದರಿಂದ ಔಷಧ ಉಪಚಾರ ಮಾಡುವ ವಿಚಾರದಲ್ಲಿ ಆಲಸ್ಯ ಅಥವಾ ಉಡಾಫೆ ಮಾಡಬೇಡಿ. ನ್ಯಾಯಾಲಯದಲ್ಲಿ ಹಿನ್ನಡೆ, ರಾಜಕೀಯವಾಗಿ ಹಿನ್ನಡೆ ಇತ್ಯಾದಿ ಸಾಮಾನ್ಯ. ಸ್ವಲ್ಪ ತಾಳ್ಮೆ ಹಾಗೂ ಮೌನದಿಂದ ನಿಮಗೆ ನೆರವು.

ಕುಂಭ: ನೀವು ಇನ್ನು 2-3 ತಿಂಗಳು ಆಹಾರ ಸೇವನೆ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸರಿಯಾದ ಸಮಯಕ್ಕೆ ಊಟ ಹಾಗೂ ಗುಣಮಟ್ಟದ ಆಹಾರ ಸೇವನೆ ಹೀಗೆ ಕ್ರಮಬದ್ಧವಾದ ಜೀವನ ಸಾಗಿಸಬೇಕು. ಎಲ್ಲೆಂದರಲ್ಲಿ ಊಟ ಮಾಡುವುದು, ಯಾವ ನೀರು ಸಿಕ್ಕಿದರೂ ಕುಡಿಯುವುದು ಮಾಡಬಾರದು. ಇಷ್ಟೆಲ್ಲ ಹೇಳಲು ಮೂಲ ಕಾರಣ ಆಹಾರ ವಿಚಾರದಲ್ಲಿ ಎಡವಟ್ಟಾಗಿ ಅಜೀರ್ಣ ಹಾಗೂ ಅಸಿಡಿಟಿ ಹೆಚ್ಚಾಗಿ ಉದರ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲಿನಿಂದಲೇ ಸಮರ್ಪಕ ಆಹಾರ ಪದ್ಧತಿ ಇಟ್ಟುಕೊಂಡರೆ ಸಮಸ್ಯೆ ಕಡಿಮೆ. ಇನ್ನು ವಿದೇಶ ಪ್ರಯಾಣದ ಯೋಚನೆ ಇದ್ದಲ್ಲಿ ದುಡುಕಬೇಡಿ. ಸಾವಧಾನವಾಗಿ ಅಲ್ಲಿ ವಿದೇಶದಲ್ಲಿ ನಿಮಗೆ ಸಿಗಬಹುದಾದ ಸವಲತ್ತಿನ ಬಗ್ಗೆ ತಿಳಿದುಕೊಳ್ಳಿ.

ಮೀನ: ಈ ಗ್ರಹಣದ ಹೆಚ್ಚಿನ ಶುಭ ಫಲಗಳನ್ನು ಅನುಭವಿಸುವ ರಾಶಿಗಳಲ್ಲಿ ನೀವೂ ಒಬ್ಬರು. ಧನಲಾಭ ಆಗುತ್ತದೆ. ಅದರ ಜೊತೆಯಲ್ಲಿ ವಿಶೇಷವಾಗಿ ಭೂಮಿಯ ಲಾಭ ಆಗುವ ಸಾಧ್ಯತೆ ಇದೆ. ಹಾಗೆಂದು ಸುಖಾಸುಮ್ಮನೆ ಅಲ್ಲ. ಕೆಲ ದಿನಗಳಿಂದ ಭೂಮಿ ಖರೀದಿ ಸಂಬಂಧ ಪ್ರಯತ್ನಿಸುತ್ತಿದ್ದಲ್ಲಿ ಅದು ಸಾಧ್ಯವಾಗುತ್ತದೆ. ಏನೇ ಆಗಲಿ ಎಷ್ಟೇ ಶುಭ ಫಲ ಹೇಳಿರಲಿ ಆತುರದ ಹೂಡಿಕೆ ಬೇಡ. ಅನಿರೀಕ್ಷಿತವಾಗಿ ಕೆಲ ವ್ಯಕ್ತಿಗಳಿಂದಾಗಿ ಲಾಭ ಆಗುತ್ತದೆ. ಆ ಲಾಭ ತಾನಾಗಿಯೇ ಆಗುವುದು; ನಿಮ್ಮ ಪ್ರಯತ್ನ ಬೇಡ. ಬಹಳ ದಿನಗಳಿಂದ ಆರೋಗ್ಯಬಾಧೆ ಇದ್ದಲ್ಲಿ ಗುಣಮುಖರಾಗುತ್ತೀರಿ. ಏನಿಲ್ಲವೆಂದರೂ, ಇಷ್ಟು ದಿನ ಕೆಲಸ ಮಾಡದ ಔಷಧ ಈಗ ಕೆಲಸ ಮಾಡುತ್ತಿರುವ ನೋವು ಕಡಿಮೆ ಆಗುತ್ತಿರುವ ಅನುಭವ ಆಗುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ್ದ ಉಪಕಾರ ಈಗ ನಿಮ್ಮ ಸಹಾಯಕ್ಕೆ ಬರುತ್ತದೆ.

 

ಆಚರಣೆ ಹೀಗಿರಲಿ

  • ಧರ್ಮಾಚರಣೆ ವಿಚಾರ ಬಂದಾಗ ಗ್ರಹಣ ಸಮಯದಲ್ಲಿ ಮಲಗುವುದು ಹಾಗೂ ಅನ್ನಾದಿ ಸೇವನೆ ವರ್ಜಿಸಲಾಗಿದೆ.
  • ಶಾಸ್ತ್ರ ಪ್ರಕಾರ- ಇಷ್ಟ ದೈವ ಹಾಗೂ ಕುಲದೇವರ ನಾಮಜಪ, ಗುರು ಮುಖೇನ ಉಪದೇಶ ಇರುವ ಮಂತ್ರಗಳ ಅನುಷ್ಠಾನ ಇತ್ಯಾದಿ
  • ಗ್ರಹಣ ಪುಣ್ಯ ಕಾಲದಲ್ಲಿ ತರ್ಪಣ ಮಾಡಬಯಸುವವರು ಗ್ರಹಣ ಮಧ್ಯಕಾಲ ಅಂದರೆ 01-51ರ ನಂತರ ಮಾಡ ಬಹುದು.

 

ಪರಿಹಾರ

ಮಿಶ್ರಫಲ ಇರುವ ರಾಶಿಗಳ ಜೊತೆ ತುಲಾ, ಮಿಥುನ, ಮಕರ ಮತ್ತು ಕುಂಭ ಈ ನಾಲ್ಕೂ ರಾಶಿಗಳಿಗೆ ಈ ಗ್ರಹಣದ ಅಶುಭ ಫಲ ಹೇಳಿರುವುದರಿಂದ ಅವರು ಗ್ರಹಣ ಕಾಲದಲ್ಲಿ ಭತ್ತ ಅಥವಾ ಅಕ್ಕಿ, ಹುರುಳಿ ಕಾಳು, ತೊಗರಿ ಬೇಳೆ ಹಾಗೂ ಬೆಳ್ಳಿಯ ಚಂದ್ರಬಿಂಬವನ್ನು ಗ್ರಹಣ ಕಾಲದಲ್ಲಿ ಬೇರೆ ಬೇರೆಯಾಗಿ ತೆಗೆದಿಟ್ಟು ಅದನ್ನು ಮುಟ್ಟಿಕೊಂಡು ಈ ಶ್ಲೋಕ ಹೇಳುತ್ತ ಪ್ರಾರ್ಥನೆ ಮಾಡುವುದು ಹಾಗೂ ಮರುದಿನ ಬೆಳಗ್ಗೆ ದಾನ ಮಾಡುವುದು-

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ|

ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು||

ಯೋ ಸೌ ಶೂಲ ಧರೋ ದೇವಃ ಪಿನಾಕಿ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹ ಪೀಡಾಂ ವ್ಯಪೋಹತು||

ಇನ್ನು ಶಾಂತಿ ಹವನ ಪೂಜೆ ಮಾಡಿಸುವವರು ನಿಮ್ಮ ಜನ್ಮ ನಕ್ಷತ್ರ ಶಾಂತಿ ಹವನ ಸಹಿತ ಚಂದ್ರ ಕೇತು ಕುಜ ಈ ಗ್ರಹಗಳಿಗೆ ಶಾಂತಿ ಹವನ ಮಾಡಿಸಿ. ಅಭಿಮಂತ್ರಿತ ವ್ಯಾಘ್ರ ನೇತ್ರ ರತ್ನಮಾಲೆಯನ್ನು ಗ್ರಹಣ ಸಮಯದಲ್ಲಿ ಹಾಗೂ ಗ್ರಹಣ ನಂತರ ಧರಿಸುವುದು ಸಹ ಉತ್ತಮ.

 

ಬರಿಗಣ್ಣಿನಲ್ಲಿ ನೋಡಬಹುದು

ಬರಿಗಣ್ಣಿನಲ್ಲಿ ಚಂದ್ರ ಗ್ರಹಣ ವೀಕ್ಷಿಸಬಹುದು. ಇದರಿಂದ ಕಣ್ಣಿಗೆ ಯಾವುದೇ ಹಾನಿ ಇಲ್ಲ. ಕೆಂಪು ಬಣ್ಣದ ಚಂದ್ರ ಹಾಗೂ ಅದರ ಕೆಳಗೆ ಕೆಂಪು ಬಣ್ಣದ ಮಂಗಳ ಗ್ರಹ ಪ್ರಕಾಶಮಾನವಾಗಿ ಬೆಳಗಲಿರುವುದು ಈ ಬಾರಿಯ ವಿಶೇಷ.

| ಪ್ರಮೋದ್ ಜಿ. ಗಲಗಲಿ, ಜವಾಹರ್​ಲಾಲ್ ನೆಹರು ತಾರಾಲಯದ ನಿರ್ದೇಶಕ

- Advertisement -

Stay connected

278,480FansLike
565FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...