ಸೆ. 2ಕ್ಕೆ ಲಕ್ಕಿಮ್ಯಾನ್​; ದೇವರಾದ ಪುನೀತ್ ರಾಜಕುಮಾರ್

ಬೆಂಗಳೂರು: ಪುನೀತ್ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’, ಅ. 28ಕ್ಕೆ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಈಗ ಪುನೀತ್ ಅಭಿನಯದ ಇನ್ನೊಂದು ಚಿತ್ರದ ಬಿಡುಗಡೆ ಬಹುತೇಕ ಪಕ್ಕಾ ಆದಂತಿದೆ. ಅದೇ ‘ಲಕ್ಕಿ ಮ್ಯಾನ್’. ಪ್ರಭುದೇವ ಸಹೋದರ ‘ಚಿತ್ರ’ ಖ್ಯಾತಿಯ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರವು ಆಗಸ್ಟ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಮೂಲಗಳ ಪ್ರಕಾರ, ಸೆ. 02ರಂದು ‘ಲಕ್ಕಿ ಮ್ಯಾನ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ‘ಲಕ್ಕಿ ಮ್ಯಾನ್’, ತಮಿಳಿನ ‘ಓ ಮೈ ಕಡುವುಳೇ’ ಚಿತ್ರದ ರೀಮೇಕ್. … Continue reading ಸೆ. 2ಕ್ಕೆ ಲಕ್ಕಿಮ್ಯಾನ್​; ದೇವರಾದ ಪುನೀತ್ ರಾಜಕುಮಾರ್