ಬಾಲಿವುಡ್ ನಟಿ ಸಾರಾ ಅಲಿಖಾನ್ಗೆ ಈ ವರ್ಷ ಅದೃಷ್ಟ ಖುಲಾಯಿಸಿದೆ. ಸಾಲು ಸಾಲು ಸಿನಿಮಾ ಆಫರ್ಗಳು ಸಾರಾ ಅವರನ್ನು ಅರಸಿ ಬರುತ್ತಿವೆ. ಸದ್ಯ ಎರಡು ಸಿನಿಮಾಗಳಲ್ಲಿ ಬಿಜಿ ಆಗಿರುವ ಈ ಸುಂದರಿಗೆ ‘ಅತರಂಗಿ ರೇ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.
ಹೌದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ತಮಿಳು ನಟ ಧನುಷ್ ಅಭಿನಯದ ಈ ಚಿತ್ರದಲ್ಲಿ ಸಾರಾ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೊಂದು ವಿಶೇಷ ಅಂದರೆ ಸಾರಾಗೂ ಪ್ರೇಮಿಗಳ ದಿನಕ್ಕೂ ನಂಟು ಇರುವಂತಿದೆ. ಇವರ ಅಭಿನಯದ ‘ಲವ್ ಆಜ್ ಕಲ್’ ಚಿತ್ರ ಈ ವರ್ಷ ಫೆ.14ಕ್ಕೆ ಬಿಡುಗಡೆ ಆಗುತ್ತಿದ್ದರೆ, ಈಗ ಒಪ್ಪಿಕೊಂಡಿರುವ ‘ಅತರಂಗಿ ರೇ’ ಸಿನಿಮಾ ಕೂಡ 2021ರ ಫೆ.14ರಂದೇ ಬಿಡುಗಡೆ ಆಗಲಿರುವುದು ವಿಶೇಷ.
‘ಅತರಂಗಿ ರೇ’ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಾರಾ, ‘ನನ್ನ ಲಕ್ ಬಗ್ಗೆ ನನಗೆ ನಂಬಿಕೆ ಇಲ್ಲ. ಈ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ಇದರಲ್ಲಿ ಅಭಿನಯಿಸಲು, ಚಿತ್ರತಂಡದ ಜತೆ ಕೆಲಸ ಮಾಡಲು ಕಾತರಳಾಗಿದ್ದೇನೆ’ ಎಂದಿದ್ದಾರೆ.
ಚಿತ್ರಕ್ಕೆ ಹಿಮಾಂಶು ಶರ್ಮಾ ಚಿತ್ರಕಥೆ ಬರೆದಿದ್ದು, ಆನಂದ್ ಎಲ್. ರೈ ನಿರ್ದೇಶನ ಮಾಡಲಿದ್ದಾರೆ. ಭೂಷಣ್ ಕುಮಾರ್ ಜತೆಗೆ ಆನಂದ್ ಕೂಡ ಚಿತ್ರದ ನಿರ್ವಪಕರು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಮಾ.1ರಿಂದ ಚಿತ್ರದ ಶೂಟಿಂಗ್ ಆರಂಭ ಆಗಲಿದೆ.
ಅಭಿಷೇಕ್ ಕಪೂರ್ ಆಕ್ಷನ್-ಕಟ್ ಹೇಳಿದ್ದ ರೊಮ್ಯಾಂಟಿಕ್ ಡ್ರಾಮಾ ಕಥಾನಕದ ‘ಕೇದಾರನಾಥ’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಸಾರಾ, ಮೊದಲ ಚಿತ್ರದಲ್ಲೇ ‘ಬೆಸ್ಟ್ ಫಿಮೇಲ್ ಡೆಬ್ಯೂ’ ಫಿಲ್ಮ್ಫೇರ್ ಅವಾರ್ಡ್ ಪಡೆದಿದ್ದರು. ಬಳಿಕ ರಣವೀರ್ ಸಿಂಗ್ಗೆ
ಜತೆಯಾಗಿ ‘ಸಿಂಬಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ವರುಣ್ ಧವನ್ ನಟನೆಯ ‘ಕೂಲಿ ನಂ.1’ ಸಿನಿಮಾದಲ್ಲಿ ಬಿಜಿ ಆಗಿದ್ದಾರೆ. ಈಗ ಇವರ ಸಿನಿಮಾ ಡಲಿಸ್ಟ್ಗೆ ‘ಅತರಂಗಿ ರೇ’ ಹೊಸ ಸೇರ್ಪಡೆ. ಅಂದಹಾಗೆ ಸಾರಾ ಬಾಲಿವುಡ್ನ ಖ್ಯಾತನಟ ಸೈಫ್ ಅಲಿಖಾನ್ ಪುತ್ರಿ. (ಏಜೆನ್ಸೀಸ್)