More

    ಅಂಧ ಮಕ್ಕಳ ಶಾಲೆಗೆ ಕಂಪ್ಯೂಟರ್ ಲ್ಯಾಬ್ ಕೊಡುಗೆ

    ಮೈಸೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯು ಸಿಗ್ನಿಫೈ ಕಂಪನಿಯ ಸಹಯೋಗದಲ್ಲಿ ಸಿಎಸ್‌ಆರ್ ಯೋಜನೆಯಡಿ ತಿಲಕ್‌ನಗರದ ಸರ್ಕಾರಿ ಅಂಧರ ಮಕ್ಕಳ ಪಾಠಶಾಲೆಗೆ ಗುರುವಾರ ಕಂಪ್ಯೂಟರ್ ಲ್ಯಾಬ್ ಕೊಡುಗೆಯಾಗಿ ನೀಡಲಾಯಿತು.
    ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಮೋಹನ್ ಮಾತನಾಡಿ, ವಿಕಲಚೇತನರು ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ತಂತ್ರಜ್ಞಾನ ವಿಕಲಚೇತನರ ಶೈಕ್ಷಣಿಕ ವೃದ್ಧಿಗೆ ಸಹಕಾರಿಯಾಗುತ್ತದೆ. ಇದರ ಬಳಕೆ ಎಲ್ಲರಿಗೂ ದೊರಕಬೇಕು. ಐತಿಹಾಸಿಕ ಅಂಧರ ಶಾಲೆಗೆ ಕಂಪ್ಯೂಟರ್ ಲ್ಯಾಬ್ ನೀಡಿರುವುದಕ್ಕೆ ಸಮರ್ಥನಂ ಸಂಸ್ಥೆ ಹಾಗೂ ಸಿಗ್ನಿಪೈ ಕಂಪನಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
    ಸಮರ್ಥನಂ ಸಂಸ್ಥೆಯ ಮುಖ್ಯಸ್ಥ ಶಿವರಾಂ ದೇಶಪಾಂಡೆ ಮಾತನಾಡಿ, ಸಮರ್ಥನಂ ಅಂಗವಿಕಲರ ಸಂಸ್ಥೆ ದೇಶಾದ್ಯಂತ 16 ಅಂಧ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಮಾಡಲಾಗಿದೆ. ದೇಶಾದ್ಯಂತ 10 ಸಾವಿರಕ್ಕಿಂತ ಹೆಚ್ಚು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಸತಿ ಯೋಜನೆ, ಸಾಧನ ಸಲಕರಣೆಗಳನ್ನು ನೀಡಿ ಅವರ ಉನ್ನತ ಶಿಕ್ಷಣಕ್ಕೆ ನೆರವು ನೀಡುತ್ತಿದೆ. ಅಲ್ಲದೆ ದೃಷ್ಟಿ ವಿಕಲಚೇತನರ ಮತ್ತು ಅವಕಾಶ ವಂಚಿತರ ಅಭಿವೃದ್ಧಿಗೆ ತಾರತಮ್ಯ ರಹಿತ ಅವಕಾಶಗಳನ್ನು ಒದಗಿಸುವ ಕ್ರೋಡೀಕೃತ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂದರು.
    ಮನ್ನಾರ್ ಗ್ರೂಪ್ಸ್ ಮಾಲೀಕ ರಮಣ ಮನ್ನಾರ್ ಮಾತನಾಡಿ, ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ನೀಡುವ ಯೋಜನೆ ಅಥವಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
    ಅಂಧರ ಶಾಲೆಯ ಅಧೀಕ್ಷಕ ಸತೀಶ್ ಕ್ಯಾತನಹಳ್ಳಿ ಮಾತನಾಡಿ, ದಿನೇ ದಿನೆ ಬೆಳೆಯುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಕಲಚೇತನರು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ ಬಳಸಿಕೊಂಡು ಬದುಕಿನಲ್ಲಿ ಸಾಧನೆ ಮಾಡಬೇಕು ಎಂದರು.
    ಸಿಗ್ನಿಫೈ ಕಂಪನಿಯ ಇಮ್ರಾನ್ ಖಾನ್, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗೀಯ ಸಂಯೋಜಕ ಶಿವರಾಜು, ಸದ್ರನ್ ಸ್ಟಾರ್ ಕಂಟ್ರಕ್ಷನ್‌ನ ಭರತ್, ಶ್ರೀಲೀಲಾ , ಭ್ರಮರಾಂಬ, ಪದ್ಮಾ, ಬೃಂದಾಬಾಯಿ, ಶಿಕ್ಷಕ ಅರುಣ್ ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts