ನವದೆಹಲಿ: ಲಾರ್ಸನ್ ಅಂಡ್ ಟೂಬ್ರೊ ಅಧ್ಯಕ್ಷ( L&T Chairman) ಎಸ್ ಎನ್ ಸುಬ್ರಹ್ಮಣ್ಯನ್ ಅವರು ನೀಡಿರುವ ಹೇಳಿಕೆಯು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಸಿಬ್ಬಂದಿಗೆ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡುವಂತೆ ಹಾಗೂ ಶನಿವಾರವೂ ಕೆಲಸ ಮಾಡುವಂತೆ ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರವು ಸುಬ್ರಹ್ಮಣ್ಯನ್ ಅವರು, ವಾಸ್ತವವಾಗಿ ವಾರಂತ್ಯದಲ್ಲಿ ಕೆಲಸ ಮಾಡಲು ಹಿಂಜರಿಯಬಾರದು ಎಂದು ಹೇಳಿದರು. ಕೊನೆಯಲ್ಲಿ ನೀವು ನಿಮ್ಮ ಹೆಂಡತಿಯನ್ನು ಎಷ್ಟು ದಿನ ನೋಡುತ್ತೀರಿ?. ಹೆಂಡತಿಯರು ತಮ್ಮ ಗಂಡನನ್ನು ಎಷ್ಟು ದಿನ ನೋಡಬಹುದು? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“How long will you stare at your wife?”
L&T chairman wants you to work on Sundays also!
You agree? pic.twitter.com/4MEGG408gd
— NextBigWhat.com (@nextbigwhat) January 9, 2025
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆಗಳು ಬರುತ್ತಿವೆ. ಸರ್ ನಿಮ್ಮ ಉದ್ಯೋಗಿಗಳು ಭಾನುವಾರದಂದು ತಮ್ಮ ಹೆಂಡತಿಯರನ್ನು ನೋಡದಿದ್ದರೆ ಬೇರೆಯವರು ಅವರನ್ನು ನೋಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಭಾರತ್‌ಪೇನ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಅವರ ಫೋಟೋ ಬಳಿಸಕೊಂಡು ಮಿಮ್ಗಳನ್ನು ಮಾಡಿ ವೈರಲ್ ಮಾಡುತ್ತಿದ್ದಾರೆ.
Narayan murthy after watching statement of subrahmanyan pic.twitter.com/eX9J2Q6JnR
— Qasim Husain 🇮🇳 (@qasim_says_) January 9, 2025
‘How long can you stare at your wife?’ L&T Chairman advocates 90 hour work week
Corporate Employees: pic.twitter.com/1kwO7hQ0BD
— Chai Kadak ☕ (@Chai_n_love) January 9, 2025
ಕಂಪನಿ ಕೊಟ್ಟ ಸ್ಪಷ್ಟನೆ ಹೀಗಿದೆ
ಈ ಹೇಳಿಕೆಯಲ್ಲಿ ರಾಷ್ಟ್ರ ನಿರ್ಮಾಣವು ನಮ್ಮ ಆದೇಶದ ತಿರುಳು ಎಂದು ಹೇಳಲಾಗಿದೆ. 8 ದಶಕಗಳಿಗೂ ಹೆಚ್ಚು ಕಾಲ ನಾವು ಭಾರತದ ಮೂಲಸೌಕರ್ಯ, ವ್ಯಾಪಾರ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ನವೀಕರಿಸುವಲ್ಲಿ ತೊಡಗಿದ್ದೇವೆ. ಈ ದಶಕ ಭಾರತಕ್ಕೆ ಸೇರಿದ್ದು ಎಂದು ನಾವು ನಂಬುತ್ತೇವೆ. ಬೆಳವಣಿಗೆಯನ್ನು ಮತ್ತಷ್ಟು ಕೊಂಡೊಯ್ಯಲು ಪ್ರಯತ್ನಗಳನ್ನು ಮಾಡಬಹುದಾದ ಸಮಯ ಇದು, ಕೆಲಸದ ಸಂಸ್ಕೃತಿಗೆ ಸಂಬಂಧಿಸಿದಂತೆ ಎಲ್ & ಟಿ ಅಧ್ಯಕ್ಷ ಸುಬ್ರಮಣಿಯನ್ ಅವರು ಮಾಡಿದ ಕಾಮೆಂಟ್‌ಗಳಿಗೆ ಕಂಪನಿಯು ಸ್ಪಷ್ಟೀಕರಣವನ್ನು ನೀಡಿದೆ.
ನಮ್ಮ ಅಧ್ಯಕ್ಷರ ಕಾಮೆಂಟ್ ಬೆಳವಣಿಗೆಗೆ ಸಂಬಂಧಿಸಿದೆ ಎಂದು ಎಲ್ & ಟಿ ಕಂಪನಿ ಹೇಳಿದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ನಾವು ಅಸಾಧಾರಣ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂಬುದು ಅದರ ಅರ್ಥ. ಕಂಪನಿಯಲ್ಲಿ ಉತ್ಸಾಹವಿರುವ ಕೆಲಸದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ. ಇದರಿಂದ ಗುರಿಗಿಂತ ಹೆಚ್ಚಿನದನ್ನು ಸಾಧಿಸಬಹುದು ಎಂದು ಹೇಳಿದೆ.
L&T ಚೇರ್ಮನ್ ಸುಬ್ರಮಣಿಯನ್ ಅವರು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದಾರೆ. ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನಾರಾಯಣ ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಸೂಚಿಸಿದರು. ಇದು ಬಾರಿ ವಿವಾದವನ್ನು ಉಂಟುಮಾಡಿತ್ತು.(ಏಜೆನ್ಸೀಸ್)