ಎಲ್​ಪಿಜಿ ದರ ಏರಿಕೆ

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್​ಪಿಜಿ) ದರ ಪ್ರತಿ ಸಿಲಿಂಡರ್​ಗೆ -ಠಿ; 2.08 ಹೆಚ್ಚಳವಾಗಿದೆ. ಸಬ್ಸಿಡಿಯೇತರ ಸಿಲಿಂಡರ್ ಬೆಲೆ -ಠಿ; 42.50 ಏರಿಕೆಯಾಗಿದೆ. ಮೂರು ತಿಂಗಳ ನಂತರ ಎಲ್​ಪಿಜಿ ದರ ಪರಿಷ್ಕೃತವಾಗಿದೆ. ಇಂಧನದ ಮೇಲಿನ ತೆರಿಗೆ ಹೆಚ್ಚಳ ಬೆಲೆ ಏರಿಕೆಗೆ ಕಾರಣ ಎಂದು ಇಂಡಿಯನ್ ಆಯಿಲ್ ಕಾರ್ಪೆರೇಷನ್ (ಐಒಸಿ) ತಿಳಿಸಿದೆ. ಸರ್ಕಾರ ವರ್ಷಕ್ಕೆ 12 ಸಿಲಿಂಡರ್​ಗಳನ್ನು (14.2 ಕೆ.ಜಿ) ಸಬ್ಸಿಡಿ ದರದಲ್ಲಿ ನೀಡುತ್ತದೆ. ಆದರೆ, ಇಂಧನ ತೆರಿಗೆಯನ್ನು ಮಾರುಕಟ್ಟೆ ದರದಲ್ಲೆ ಪಾವತಿಸಬೇಕು. ಫೆಬ್ರವರಿಯಲ್ಲಿ ಸಿಲಿಂಡರ್​ಗೆ -ಠಿ; 165.47 ಸಬ್ಸಿಡಿ ನೀಡಲಾಗಿತ್ತು. ಮಾರ್ಚ್​ನಲ್ಲಿ ಈ ಮೊತ್ತ -ಠಿ; 205.89 ಆಗಿದೆ ಎಂದು ಐಒಸಿ ಹೇಳಿದೆ.

ಪೆಟ್ರೋಲ್, ಡೀಸೆಲ್ ಕೂಡ ಹೆಚ್ಚಳ

ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಎರಡನೇ ದಿನವೂ ಪರಿಷ್ಕೃತಗೊಂಡಿದ್ದು, ದೇಶದ ನಾಲ್ಕು ಮೆಟ್ರೊ ಮಹಾನಗರಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್​ಗೆ 8ರಿಂದ 9 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್​ಗೆ 12ರಿಂದ 13 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 8 ಪೈಸೆ ಏರಿಕೆಯಾಗಿ -ಠಿ; 71.81, ಡೀಸೆಲ್ ದರ ಬೆಲೆ 12 ಪೈಸೆ ಹೆಚ್ಚಳವಾಗಿ -ಠಿ; 67.12 ಆಗಿದೆ. ಮುಂಬೈನಲ್ಲೂ ಪೆಟ್ರೋಲ್​ಗೆ 8 ಪೈಸೆ ಹೆಚ್ಚಳವಾಗಿದ್ದು, -ಠಿ; 77.44, ಡೀಸೆಲ್ ದರ 13 ಪೈಸೆ ಏರುವ ಮೂಲಕ -ಠಿ; 70.31ಕ್ಕೆ ತಲುಪಿದೆ.