ಐಒಸಿಯಿಂದ 1.2 ಕೋಟಿ ಕುಟುಂಬಕ್ಕೆ ಎಲ್ಪಿಜಿ ಸಂಪರ್ಕ

ಚೆನ್ನೈ: ಇತ್ತೀಚೆಗೆ ಚೆನ್ನೈನಲ್ಲಿ ಆಯೋಜನೆಗೊಂಡಿದ್ದ ಗ್ರಾಹಕರ ದಿನಚರಣೆಯಂದು ಇಂಡಿಯನ್ ಆಯಿಲ್ ಕಾಪೋರೇಷನ್ (ಐಒಸಿ) 4 ಸಾವಿರ ಹೊಸ ಗ್ರಾಹಕರಿಗೆ ಅಡುಗೆ ಅನಿಲ ವಿತರಿಸಿತು. ಈ ಮೂಲಕ ತಮಿಳುನಾಡಿನಲ್ಲಿ 867 ವಿತರಕರ ಮೂಲಕ 1.2 ಕೋಟಿ ಗ್ರಾಹಕರಿಗೆ ಅಡುಗೆ ಅನಿಲ ವಿತರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

ಗ್ರಾಹಕರಿಗೆ ಅಗತ್ಯ ಸೌಲಭ್ಯಗಳ ಕುರಿತು ಐಒಸಿ ಸಂಸ್ಥೆಯು ಮೊದಲು ಅಧ್ಯಯನ ನಡೆಸುತ್ತದೆ. ಬಳಿಕ ಆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದು ಭಾರತ ರತ್ನ ಪುರಸ್ಕೃತ ಚಿದಂಬರಂ ಸುಬ್ರಹ್ಮಣ್ಯ ಮೊಮ್ಮಗ ಎಸ್.ಎಸ್. ರಾಜಶೇಖರ್ ಹೇಳಿದರು.

ಆರೋಗ್ಯ ಶಿಬಿರ: ಗ್ರಾಹಕರ ದಿನಾಚರಣೆ ಅಂಗವಾಗಿ ಐಒಸಿ ರಾಜ್ಯಾದ್ಯಂತ ಉಚಿತ ಆರೋಗ್ಯ ಶಿಬಿರ ಆಯೋಜಿಸಿತ್ತು. ಶಿಬಿರದಲ್ಲಿ ಲಕ್ಷಾಂತರ ಗ್ರಾಹಕರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮನೆಯಲ್ಲಿ ಅಡುಗೆ ಅನಿಲದ ನಿರ್ವಹಣೆ ಮತ್ತು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿತರಕರು ಗ್ರಾಹಕರಿಗೆ ಹಲವು ಮಾಹಿತಿಗಳನ್ನು ನೀಡಿದರು. ಚೆನ್ನೈ, ಕೊಯಮತ್ತೂರು, ಮಧುರೈ ಮತ್ತು ತಿರುಚ್ಚಿಯಲ್ಲಿ ಗ್ರಾಹಕರ ಸೇವಾ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಐಒಸಿಎಲ್​ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಲಲಿತ್​ಕುಮಾರ್ ಚೌಹಾಣ್, ಉಪ ಪ್ರಧಾನ ವ್ಯವಸ್ಥಾಪಕ ಎಸ್. ಕುಮಾರ್ ಹಾಗೂ ರಾಜ್ಯದ ಎಲ್ಲ ಜಿಲ್ಲೆಯ ವಿತರಕರು, ಕ್ಷೇತ್ರ ಅಧಿಕಾರಿಗಳು ಮತ್ತು ಐಒಸಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇಂಡಿಯನ್ ಆಯಿಲ್ ಕಾಪೋರೇಷನ್ ಅಧಿಕಾರಿಗಳು ಮತ್ತು ವಿತರಕರು 10 ವರ್ಷಗಳಿಂದ ಗ್ರಾಹಕರ ಮನೆಗೆ ಭೇಟಿ ನೀಡಿ ಅಡುಗೆ ಅನಿಲದ ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ ಸಿಲಿಂಡರ್​ಗಳ ಆನ್​ಲೈನ್ ಬುಕಿಂಗ್ ಸೇರಿ ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದ್ದಾರೆ.

| ಡಾ.ಎನ್. ಗೋಪಾಲಸ್ವಾಮಿ ಕೇಂದ್ರದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ

Leave a Reply

Your email address will not be published. Required fields are marked *