More

    ಕೆಳಮಟ್ಟದಲ್ಲಿ ಹಾರಾಡುತ್ತಿದೆ ವಿಮಾನ -ಅನೇಕ ಊಹಾಪೋಹಗಳಿಗೆ ಕಾರಣ

    ಕುರುಗೋಡು: ಕಳೆದ ಎರಡ್ಮೂರು ದಿನಗಳಿಂದ ಸಣ್ಣ ಗಾತ್ರದ ವಿಮಾನವೊಂದು ಪಟ್ಟಣ ತಾಲೂಕಿನ ಕೆಲ ಹಳ್ಳಿಗಳ ಮೇಲೆ ತೀರಾ ಕೆಳ ಮಟ್ಟದಲ್ಲಿ ಹಾರಾಡುತ್ತಿದ್ದು ಜನರ ಕುತೂಹಲ ಹೆಚ್ಚಿಸಿದೆ.

    ಇದನ್ನೂ ಓದಿ: ಬೆಳಗಾವಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ; ಇಬ್ಬರಿಗೆ ಗಾಯ

    ಬಿಳಿ ಮತ್ತು ಕಡು ನೀಲಿ ಬಣ್ಣದ, ಸುಮಾರು 8 ರಿಂದ 10 ಆಸನ ಹೊಂದಿರಬಹುದಾದ ವಿಮಾನ ದಿನಕ್ಕೆ 5 ರಿಂದ 6 ಬಾರಿ ಸಂಚಾರ ನಡೆಸುತ್ತಿದೆ. ನಿರಂತರ ಹಾಗೂ ಕೆಳಮಟ್ಟದಲ್ಲಿನ ಹಾರಾಟಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ. ವಿಮಾನ ಚಾಲನಾ ತರಬೇತಿ ಪಡೆಯುತ್ತಿರಬಹುದು. ಚಿನ್ನ ಇಲ್ಲವೇ ಬೇರೆ ನಿಕ್ಷೇಪ ಪತ್ತೆಗಾಗಿ ತುಂಬ ಕೆಳ ಮಟ್ಟದಲ್ಲಿ ವಿಮಾನ ಹಾರಾಟ ನಡೆಸುತ್ತಿರಬಹುದು ಎಂದು ಜನರು ಅಂದಾಜಿಸಿದ್ದಾರೆ.

    ವಿಮಾನ ಕೆಳಮಟ್ಟದಲ್ಲಿ ಹಾರಾಡುತ್ತಿರುವುದು ಜನರ ಮನರಂಜನೆಗೂ ಕಾರಣವಾಗಿದೆ. ಜನರು ಮಕ್ಕಳೊಂದಿಗೆ ಮನೆಯಿಂದ ಹೊರ ಬಂದು ವೀಕ್ಷಿಸುತ್ತಿದ್ದಾರೆ. ಸಮೀಪದ ಮುಷ್ಟಗಟ್ಟೆ, ಸಿರಿಗೇರಿ, ತೆಕ್ಕಲಕೋಟೆ, ಬಲಕುಂದಿ ಗ್ರಾಮಗಳ ಮೇಲೆ ಕಳೆದ ಮಾರ್ಚ್, ಏಪ್ರಿಲ್‌ನಲ್ಲಿ ದಿನಕ್ಕೆ ಐದಾರು ಬಾರಿ ಹಾರಾಟ ನಡೆಸಿದೆ. ಈ ಪ್ರದೇಶಗಳೆಲ್ಲ ಗುಡ್ಡಗಾಡು ಹೊಂದಿವೆ.

    ಕುರುಗೋಡು ಹಾಗೂ ಸುತ್ತಲಿನ ಗ್ರಾಮಗಳ ಮೇಲೆ ಮಿನಿ ವಿಮಾನ ಕೆಳ ಮಟ್ಟದಲ್ಲಿ ಹಾರಾಡುತ್ತಿರುವುದು ಗಮನಕ್ಕೆ ಇಲ್ಲ. ಈ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ. ಸಾರ್ವಜನಿಕರು ಹೇಳಿದ ಮೇಲೆ ಗೊತ್ತಾಗಿದೆ. ಮೇಲಧಿಕಾರಿಗಳು ಹಾಗೂ ಹತ್ತಿರದ ಜಿಂದಾಲ್ ಏರ್‌ಪೋರ್ಟ್‌ನಿಂದ ಮಾಹಿತಿ ಪಡೆಯುತ್ತೇವೆ.
    | ಸಣ್ಣ ಈರೇಶ, ಪಿಎಸ್‌ಐ, ಕುರುಗೋಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts