ಮನೆ ಬಿಟ್ಟು ಹೋದ ಒಂದು ವಾರದ ಬಳಿಕ ಒಂದೇ ಮರದಲ್ಲಿ ನೇತಾಡುತ್ತಿತ್ತು ಪ್ರೇಮಿಗಳ ಶವ

ಬೆಳಗಾವಿ: ಆಕೆಗೆ ಬಾಲ್ಯದಲ್ಲಿಯೇ ಬೇರೊಬ್ಬನೊಂದಿಗೆ ವಿವಾಹವಾಗಿತ್ತು. ಆದರೆ ಆಕೆ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಳು. ಅವನಿಗೂ ಈಕೆಯ ಮೇಲೆ ಪ್ರೀತಿಯಿತ್ತು. ಈಗ ಆ ಇಬ್ಬರೂ ಪ್ರೇಮಿಗಳು ಒಂದೇ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ನಿವಾಸಿ ಸುಪ್ರೀತಾ (20) ಈಕೆಗೆ ಪಾಲಕರು ಬಾಲ್ಯದಲ್ಲಿಯೇ ವಿವಾಹ ಮಾಡಿದ್ದರು. ಆದರೆ ಸುಪ್ರೀತಾ ಗಂಡನನ್ನು ಬಿಟ್ಟು ಅದೇ ಗ್ರಾಮದ ಇಬ್ರಾಹಿಂ ಸನದಿ (23) ಎಂಬಾತನನ್ನು ಪ್ರೀತಿಸುತ್ತಿದ್ದಳು. ಈಗೊಂದು ವಾರದ ಹಿಂದೆ ಇವರಿಬ್ಬರೂ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದರು.

ಇಂದು ಅವರಿಬ್ಬರ ಶವ ಬನ್ನೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಇಬ್ಬರೂ ಒಂದೇ ಮರಕ್ಕೆ ನೇಣುಬಿಗಿದುಕೊಂಡಿದ್ದಾರೆ. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *