ಪಾರ್ಕ್​ನಲ್ಲಿ ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

ಚಿಕ್ಕಮಗಳೂರು: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಪಾರ್ಕ್​ವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನ ಗಾಂಧಿ ಪಾರ್ಕಿನಲ್ಲಿ ಘಟನೆ ನಡೆದಿದ್ದು, ಮಧು (20) ಮತ್ತು ಅಮೂಲ್ಯ (18) ಮೃತ ಪ್ರೇಮಿಗಳು.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೊದಲು ಯುವಕ ವಿಷ ಸೇವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಯುವತಿಯೂ ವಿಷ ಕುಡಿದಿದ್ದಾಳೆ. ಘಟನೆ ನೋಡಿದವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಸಹ ಒಂದು ಗಂಟೆ ಬಳಿಕ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ರೂಪಾಳನ್ನು ಚಿಕ್ಕಮಗಳೂರಿನ ಶಂಕರಪುರದ ನಿವಾಸಿ ಮತ್ತು ಮಧುವನ್ನು ಗಾಳಿಗಂಡಿ ನಿವಾಸಿ ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಮುಂದೆ ಮೃತ ಪ್ರೇಮಿಗಳ ಪಾಲಕರ ಕಣ್ಣೀರು ಮುಗಿಲು ಮುಟ್ಟಿದೆ. (ದಿಗ್ವಿಜಯ ನ್ಯೂಸ್)