17 C
Bangalore
Friday, December 13, 2019

ಏರ್​ಪೋರ್ಟ್​ನಲ್ಲಿ ಕತ್ರೀನಾ ಕೈಫ್​ ನಡೆದುಕೊಂಡ ರೀತಿ ನೋಡಿ ಸಿಕ್ಕಾಪಟೆ ಹೊಗಳುತ್ತಿರುವ ನೆಟ್ಟಿಗರು…

Latest News

ಸಂಭ್ರಮದ ಅಮೃತೇಶ್ವರ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೊಷಗಳ ಮಧ್ಯ ಸಡಗರ, ಸಂಭ್ರಮದಿಂದ ಜರುಗಿತು.

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೇಡ

ವಿಜಯವಾಣಿ ಸುದ್ದಿಜಾಲ ಧಾರವಾಡ 2020ರ ಜ. 26ರ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಬರುತ್ತಿರುವುದನ್ನು ರೈತ ಸಂಘ...

ಡಿಸಿಪಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ವರ್ಗವಾಗಿ ಬಂದಿರುವ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಬಿ.ಎಸ್. ನೇಮಗೌಡ ಗುರುವಾರ...

ಸೇವೆ ಸ್ಥಗಿತಗೊಳಿಸಿ ಧರಣಿ

ವಿಜಯವಾಣಿ ಸುದ್ದಿಜಾಲ ಕುಂದಗೋಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತಾಲೂಕಾಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರು ಗುರುವಾರ ಸೇವೆ...

ಜ್ಞಾನ ಸಂಸತ್ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್​ನಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ. 14ರಂದು ಸಂಜೆ 4ಕ್ಕೆ...

ನವದೆಹಲಿ: ಬಾಲಿವುಡ್​ ನಟಿ ಕತ್ರೀನಾ ಕೈಫ್​ ಮಾಡಿದ ಇದೊಂದು ಕೆಲಸ ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಸಿಕ್ಕಾಪಟೆ ಹೊಗಳಿ ಕಾಮೆಂಟ್​ ಮಾಡುತ್ತಿದ್ದಾರೆ.
ಕತ್ರೀನಾ ಕೈಫ್​ ಏರ್​ಪೋರ್ಟ್​ನಿಂದ ಹೊರಡುವಾಗ ಅವರನ್ನು ಕೆಲವು ಪುರುಷ ಅಭಿಮಾನಿಗಳು ಸುತ್ತುವರಿದರು. ಸಾಮಾನ್ಯವಾಗಿ ಹೀಗಾದಾಗ ಸೆಲೆಬ್ರಿಟಿಗಳು ಕಿರಿಕಿರಿ ಅನುಭವಿಸುತ್ತಾರೆ. ಅವರ ಜತೆಗಿರುವ ಬಾಡಿಗಾರ್ಡ್​ಗಳು ಸುತ್ತುವರಿದವರನ್ನು ಬದಿಗೆ ಸರಿಸುತ್ತಾರೆ. ಆದರೆ ಕತ್ರೀನಾ ಸ್ವಲ್ಪ ವಿಭಿನ್ನವಾಗಿ ವರ್ತಿಸಿದರು.ಈ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದ್ದು ಕತ್ರೀನಾಗೆ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತಿದೆ.

ಏರ್​ಪೋರ್ಟ್​ನಿಂದ ಹೊರಗೆ ಹೊರಟಿದ್ದ ಕತ್ರೀನಾ ಅವರನ್ನು ಅನೇಕರು ಸುತ್ತುವರಿದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅದರಲ್ಲಿ ಓರ್ವ ಕತ್ರೀನಾ ಅವರ ತೀರ ಸಮೀಪ ಬಂದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ. ಅದನ್ನು ನೋಡಿದ ಕತ್ರೀನಾ ಅವರ ಬಾಡಿಗಾರ್ಡ್​ ಆ ಅಭಿಮಾನಿಯನ್ನು ದೂರಸರಿಸಲು ಪ್ರಯತ್ನಿಸಿದ. ಆದರೂ ಆತ ಮತ್ತೆ ಫೋಟೋ ತೆಗೆದುಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದ. ಹಾಗೇ ಆತ ತನ್ನ ತಾಳ್ಮೆ ಕಳೆದುಕೊಂಡ ರೀತಿ ವರ್ತಿಸಿದ. ಅದನ್ನು ನೋಡಿದ ಕತ್ರೀನಾ ಆ ಅಭಿಮಾನಿ ಬಳಿ, ನಿಧಾನವಾಗಿ, ಸ್ವಲ್ಪ ದೂರ ಸರಿದು ಫೋಟೋ ತೆಗೆದುಕೊಳ್ಳಿ ಎಂದು ಹೇಳಿ ಫೋಟೋಕ್ಕೆ ಪೋಸ್​ ನೀಡಿದರು.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ಕತ್ರೀನಾ ಅವರ ನಡೆಯನ್ನು ಶ್ಲಾಘಿಸಿದ್ದಾರೆ. ನಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಹತ್ತಿರದಿಂದ ನೋಡಿದಾಗ ನಾವೂ ಎಕ್ಸೈಟ್​ ಆಗುವುದು ತುಂಬ ಸಹಜ. ಹಾಗಂತ ಹೋಗಿ ಅವರ ಮೇಲೆ ದಾಂಗುಡಿ ಇಡುವುದು ಸರಿಯಲ್ಲ. ಆದರೂ ಕತ್ರೀನಾ ಕೈಫ್​ ಸನ್ನಿವೇಶವನ್ನು ಶಾಂತಿಯುತವಾಗಿ ನಿಭಾಯಿಸಿದ್ದಾರೆ ಎಂದು ನೆಟ್ಟಿಗರೋರ್ವರು ಕಾಮೆಂಟ್​ ಮಾಡಿದ್ದಾರೆ. ವೆಲ್​ ಡನ್​ ಕತ್ರೀನಾ ಎಂದು ಇನ್ನೋರ್ವರು ಹೊಗಳಿದ್ದಾರೆ.

Stay connected

278,749FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...