ಒಲವೋ ಒಡೆತನವೋ?

Latest News

ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಚ್ಚರಿ ನಡೆಗೆ ಬಿಜೆಪಿಯಲ್ಲಿ ಆತಂಕ

ಹಿರೇಕೆರೂರ ಕ್ಷೇತ್ರದ ಉಪಚುನಾವಣೆಯಲ್ಲಿ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ. ಉಪ ಚುನಾವಣೆ...

ಬಿ ಫಾರಂ ಮರೆತಿದ್ದ ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ

ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಂತ ಮೊದಲು ನಾಮಪತ್ರ ಸಲ್ಲಿಸಲು ತೆರಳಿದ್ದ ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಬರಿಗೈಯಲ್ಲಿ ಆಗಮಿಸಿ ದ್ದರು. ನಂತರ ಆಪ್ತ ಸಹಾಯಕ...

ಬಿಆರ್​ಟಿಎಸ್​ಗೆ ರಾಷ್ಟ್ರೀಯ ಪುರಸ್ಕಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್​ಗೆ ಉತ್ತಮ ನಗರ ಸಮೂಹ ಸಾರಿಗೆ ಯೋಜನೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು, ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಂದ್ರೀಯ ವಸತಿ ಮತ್ತು...

ಬಂಪರ್​ ಸಿನಿಮಾದಲ್ಲಿ ಭಾರಿ ಬದಲಾವಣೆ!

ಬೆಂಗಳೂರು: ‘ಬಜಾರ್’ ಮೂಲಕ ಧೂಳೆಬ್ಬಿಸಿದ್ದ ನಟ ಧನ್ವೀರ್ ಗೌಡ ಎರಡನೇ ಸಿನಿಮಾ ‘ಬಂಪರ್’ಗೆ ಸಂಬಂಧಿಸಿದ ಕೆಲಸಗಳು ಚುರುಕು ಪಡೆದುಕೊಂಡಿವೆ. ಚಿತ್ರದ ನಾಯಕ ಧನ್ವೀರ್ ಜನ್ಮದಿನಕ್ಕೆ...

ರೇಮೊ ಸಿನಿಮಾ ತಂಡ ಸೇರಲಿದ್ದಾರೆ ಬಹುಭಾಷಾ ನಟ ಶರತ್​ಕುಮಾರ್

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾ ಹಲವು ಕಾರಣಗಳಿಂದ ಕುತೂಹಲ ಮೂಡಿಸುತ್ತಿದೆ. ‘ಗೂಗ್ಲಿ’ ಬಳಿಕ ಪಕ್ಕಾ ಲವ್​ಸ್ಟೋರಿ ಕಥೆ ಹಿಡಿದು ಬಂದಿರುವುದು ಒಂದೆಡೆಯಾದರೆ,...

ಪ್ರೀತಿ ಎನ್ನುವುದು ಒಂದು ಅದ್ಭುತ ಶಕ್ತಿ. ವ್ಯಕ್ತಿಗಳನ್ನು ಬೆಳೆಸುತ್ತದೆ, ಹರುಷದ ಹೊಳೆ ಹರಿಸುತ್ತದೆ. ದೀರ್ಘಕಾಲಿಕ ಲಾಭಗಳನ್ನು ತಂದು ಕೊಡುತ್ತದೆ. ಪ್ರೀತಿಯ ಈ ಹಿರಿಮೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಪಕ್ವತೆ ಬರುವ ತನಕ, ಬೆಳೆಯುವ ನಂಟುಗಳಿಗೆ, ಉಂಟಾಗುವ ಆಕರ್ಷಣೆಗಳಿಗೆ ಶಾಶ್ವತ ರೂಪ ಕೊಡದೆ ಇರುವುದು ಲೇಸು. ಇಷ್ಟಪಡುವ ಹುಡುಗ/ಹುಡುಗಿ ಇನ್ಯಾರ ಜತೆಗೂ ಸ್ನೇಹದಿಂದಿರಬಾರದು, ಮಾತನಾಡಬಾರದು ಎಂಬ ಭಾವನೆ ಬೆಳೆಸಿಕೊಳ್ಳುವುದು ಅಪಾಯಕರ.

| ಆರ್​ ಶ್ರೀನಾಗೇಶ್​ 

ಆಕೆ ಕೀಳರಿಮೆಯಿಂದ ನರಳುತ್ತಿದ್ದಳು. ಬುದ್ಧಿವಂತ ಗೆಳತಿಯರ ಸಹವಾಸ ಬಯಸಿದಳು. ಕೀಳರಿಮೆಯಿಂದ ಹೊರಬರಲು ಹಿತೈಷಿಯೊಬ್ಬರ ನೆರವು ಪಡೆದುಕೊಂಡಳು. ಕ್ರಮೇಣ ವಿವಿಧ ಚಟುವಟಿಕೆಗಳಲ್ಲಿ, ಚಾರಣಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವವನ್ನು ಅರಳಿಸಿಕೊಂಡಳು. ಇದ್ದಕ್ಕಿದ್ದಂತೆ ಅವಳಿಗೊಬ್ಬ ಪ್ರೇಮಿ ಹುಟ್ಟಿಕೊಂಡ. ಕ್ರಮೇಣ ಅವಳನ್ನು ಎಲ್ಲರಿಂದ ದೂರ ಮಾಡಿ ಏಕಾಂಗಿಯಾಗಿಸಿದ. ಆ ಹಿತೈಷಿಯಿಂದಲೂ ದೂರ ಮಾಡುವ ಪ್ರಯತ್ನ ಮಾಡಿದ. ಅವಳು ಒಪ್ಪದಿದ್ದಾಗ, ನಿನಗೂ ಅವನಿಗೂ ದೈಹಿಕ ಸಂಬಂಧವಿದೆ ಅಂತ ಸುದ್ದಿ ಹರಡಿಸುತ್ತೇನೆ ಎಂದು ಬೆದರಿಸಿದ.

ಇನ್ನೊಬ್ಬ ತುಂಬ ಸಭ್ಯಸ್ಥ ಮನೆತನದ ಹುಡುಗ. ವಯೋಸಹಜವಾಗಿಯೇ ಹುಡುಗಿಯೊಬ್ಬಳ ಜತೆ ಪ್ರೀತಿ ಬೆಳೆಯಿತು. ಆದರೆ ಅವಳು ಸಂಶಯ ಪಿಶಾಚಿ. ಪದೇಪದೆ ಇವನ ಫೋನ್ ತಪಾಸಣೆ ಮಾಡುವುದು, ಭೇಟಿಗೆ ಬರುವುದು ತಡವಾದರೆ ಅರಚಾಡುವುದು, ಸಮಾಧಾನ ಮಾಡಲು ಬಂದರೆ ಅವನನ್ನು ದೂರ ತಳ್ಳುವುದು, ಕೊನೆಗೆ ಬೇಸರಗೊಂಡು ಅವನು ಮನೆಗೆ ಹೋದ ನಂತರ, ಫೋನ್ ಮಾಡಿ ತಾನು ಮಾಡಿದ್ದು ತಪ್ಪಾಯಿತು ಎಂದು ಕ್ಷಮೆ ಕೇಳುವುದು. ಇದು ನಡೆಯುತ್ತಲೇ ಇರುತ್ತಿತ್ತು.

ಒಂದು ಕಾಲೇಜಿನ ಸಮೀಪ ನಾಲ್ಕೈದು ಹುಡುಗರು ಕ್ರಿಕೆಟ್ ಬ್ಯಾಟ್ ಹಿಡಿದು ಹೊಡೆದಾಡುತ್ತಿದ್ದರು. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಒಂದು ಹುಡುಗಿಯ ಗೆಳೆತನಕ್ಕಾಗಿ ಅವರೆಲ್ಲ ಹೊಡೆದಾಡುತ್ತಿದ್ದಾರೆ ಎಂಬುದು ಗೊತ್ತಾಯಿತು. ಯಾವುದೋ ಹುಡುಗ ಇಷ್ಟ ಪಟ್ಟ ಹುಡುಗಿಯನ್ನು ಬೇರೆ ಯಾರೂ ಮಾತನಾಡಿಸಬಾರದು ಎಂಬ ಕಟ್ಟುಪಾಡು ಹಾಕುವುದಲ್ಲದೆ, ಅಂತಹ ಹುಡುಗಿಯಲ್ಲಿ ಬೇರೆ ಯಾರಾದರೂ ಆಸಕ್ತಿ ತೋರಿದರೆ, ಅವರ ಮೇಲೆ ನಡುರಸ್ತೆಯಲ್ಲೇ ದೈಹಿಕ ಹಲ್ಲೆ ನಡೆಸುತ್ತಾರೆ ಎನ್ನುವುದು ಕಳವಳ ಮೂಡಿಸುವಂತಹ ವಿಚಾರ. ಅದಕ್ಕಾಗಿ ಹುಡುಗರ ಗೆಳೆಯರು ಸ್ನೇಹನಿಷ್ಠೆ ತೋರಿಸಿ ಅವನೊಡನೆ ಇವರೂ ಹೊಡೆದಾಡುತ್ತಾರೆ!

ಇವು ಕಲ್ಪಿತ ಪ್ರಕರಣಗಳಲ್ಲ. ನೈಜ ಉದಾಹರಣೆಗಳು. ಇಂದು ನವಯೌವನಿಗರಲ್ಲಿ ಪ್ರೇಮ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಪ್ಪು ಎನ್ನಲಾಗದು. ಆದರೆ ಪ್ರೀತಿಯಲ್ಲಿ ಇಂತಹ ಘಟನೆಗಳು ಯಾಕೆ ಸಂಭವಿಸುತ್ತವೆ? ಹುಡುಗಿಗಾಗಿ ಹೊಡೆದಾಡಿದ ಇಬ್ಬರಿಗೂ ಆ ಹುಡುಗಿಯ ಮನಸ್ಸಿನಲ್ಲಿ ಏನಿರಬಹುದು ಎನ್ನುವುದರತ್ತ ಕ್ಷಣಕಾಲವಾದರೂ ಗಮನ ಹರಿಯಿತೇ?

ಇದು ಪ್ರೀತಿಗೂ, ಒಡೆತನಕ್ಕೂ ಇರುವ ಒಂದು ಸೂಕ್ಷ್ಮ ಅಂತರ. ಯುವ ಪೀಳಿಗೆಯವರು ಹಲವು ರೀತಿಯ ಅಭದ್ರತೆಗಳಲ್ಲಿ ಸಿಲುಕಿದ್ದಾರೆ. ಕೌಟುಂಬಿಕ ಸನ್ನಿವೇಶಗಳು, ವ್ಯಕ್ತಿತ್ವ ದೋಷಗಳು, ನಡವಳಿಕೆಗೆ ಒಂದು ನೀತಿಯ ಚೌಕಟ್ಟು ಇಲ್ಲದಿರುವುದು ಇವೇ ಮುಂತಾದವು ಈ ರೀತಿಯ ಆಭದ್ರತೆ ಸೃಷ್ಟಿಸಿವೆ. ಜತೆಗೆ ವ್ಯಾಪಕವಾಗಿ ಲಭ್ಯವಿರುವ ಅಂತರ್ಜಾಲ ತಾಣಗಳು, ದೃಶ್ಯ ಮಾಧ್ಯಮಗಳು ಹಾಗೂ ಇತರ ಪ್ರಭಾವಿ ವಲಯಗಳು ಆಸೆಗಳನ್ನು ಮೂಡಿಸುತ್ತವೆ. ಅವುಗಳನ್ನು ಈಡೇರಿಸಿಕೊಳ್ಳುವ ತುಡಿತವನ್ನು ಹೆಚ್ಚಿಸುತ್ತವೆ. ಸಂಬಂಧಗಳ ಪ್ರಶ್ನೆ ಬಂದಾಗ, ತಮಗೆ ಬೇಕಾದುದು ಆಗಬೇಕು ಎಂದು ಹಠ ಹಿಡಿಯುವ, ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗುವ ಯುವ ಪೀಳಿಗೆಯನ್ನು ಸೃಷ್ಟಿಸುತ್ತವೆ.

ಸಂಬಂಧಗಳು ವ್ಯಕ್ತಿಗಳ ನಡುವೆ ಬೆಳೆಯುವ ಸೇತುವೆ. ರಕ್ತ ಸಂಬಂಧಗಳು ಸ್ವಯಂ ಆಗುವಂಥವು. ಆದರೆ ಇಬ್ಬರು ವ್ಯಕ್ತಿಗಳ ನಡುವೆ ಬೆಳೆಯುವ ಪ್ರೀತಿ ಎರಡು ಹೃದಯಗಳ ನಂಟು. ಇದು ಏಕಪಕ್ಷೀಯವಾಗಿ ಆಗುವಂತಹುದಲ್ಲ, ಒತ್ತಾಯದಿಂದ ಆಗುವಂತಹುದಲ್ಲ. ಎರಡು ಜೀವಿಗಳ ನಡುವೆ ಬೆಳೆಯಬೇಕಾಗಿರುವ ಭಾವನಾತ್ಮಕ ನಂಟಿನ ಮೇಲೆ ಒಡೆತನ ಸ್ಥಾಪಿಸುವ ಹಠ ಯಾಕೆ?

ಮತ್ಸರವೋ ಮಾಲೀಕತ್ವವೋ?

ಕೆಲವೊಮ್ಮೆ ಎರಡರ ನಡುವೆ ಗೊಂದಲ ಮೂಡಬಹುದು. ತನ್ನ ಬಳಿ ಇಲ್ಲದ್ದು ಬೇರೆಯವರ ಬಳಿ ಇದೆ ಎನ್ನುವ ಕಾರಣಕ್ಕೆ ಮತ್ಸರ ಉಂಟಾಗಬಹುದು. ಇದು ನಂಟಿಗೂ ಅನ್ವಯ ವಾಗಬಹುದು. ಮತ್ಸರದಲ್ಲಿ ನಿಯಂತ್ರಿಸುವುದಕ್ಕಿಂತ ಕೊರಗುವಿಕೆ ಹೆಚ್ಚಾಗಿರುತ್ತದೆ ಎನ್ನಬಹುದು. ಮಾಲೀಕತ್ವದಲ್ಲಿ ತಮ್ಮ ಕೊರಗಿನ ನಿವಾರಣೆಗೆ ಮತ್ತೊಬ್ಬರನ್ನು ಸಂಕಷ್ಟದಲ್ಲಿ ಸಿಲುಕಿಸುವ ಹುನ್ನಾರ ಎದ್ದು ಕಾಣುತ್ತದೆ.

ಕೀಳರಿಮೆ, ಆತ್ಮೀಯತೆಯ ಕೊರತೆ, ನಿರಾಕರಣೆಯ ಭಯ, ಆ ನಂಟಿನಿಂದ ಖುದ್ದಾಗಿ ಪಡೆದುಕೊಳ್ಳುತ್ತಿರುವ ಲಾಭಗಳನ್ನು ಕಳೆದುಕೊಂಡು ಬಿಟ್ಟರೆ ತಮ್ಮ ವ್ಯಕ್ತಿತ್ವಕ್ಕೆ ಉಂಟಾಗಬಹುದಾದ ಧಕ್ಕೆ ಇಂತಹವು ಪೊಸೆಸಿವ್​ನೆಸ್​ನ ಭಾವನೆಗಳನ್ನು ಯುವಕ ಯುವತಿಯರಲ್ಲಿ ಸೃಷ್ಟಿಸಬಹುದು. ಕೀಳರಿಮೆ, ಅಭದ್ರತೆ, ಶೀಘ್ರ ಕೋಪ, ಭಾವುಕತೆಯ ಏರಿಳಿತಗಳು ವಾಸಿಯಾಗದಂತಹ ರೋಗಗಳಲ್ಲ. ತಜ್ಞರು ಅವುಗಳಿಂದ ಆಚೆ ಬರಲು ನೆರವಾಗಬಲ್ಲರು. ಅವುಗಳನ್ನು ನಿವಾರಿಸಿಕೊಂಡಾಗ ಅದ್ಭುತ ಸಾಧನೆಗಳನ್ನು ಮಾಡಬಲ್ಲ ಚೈತನ್ಯ ನಿಮ್ಮಲ್ಲಿ ಬೆಳೆಯುತ್ತ ಹೋಗುತ್ತದೆ.

ಪೊಸೆಸಿವ್​ನೆಸ್ ಲಕ್ಷಣಗಳು

ನಿಮ್ಮ ಚಲನವಲನಗಳ ಮೇಲೆ ಕ್ಷಣಕ್ಷಣಕ್ಕೂ ನಿಗಾ ಇಟ್ಟು, ನೀವು ಯಾರೊಡನೆ ಬೆರೆಯಬೇಕು, ಯಾರಿಂದ ದೂರವಾಗಬೇಕು ಎಂಬ ನಿರ್ಧಾರಗಳನ್ನು ನಿಮ್ಮ ಪ್ರೇಮಿ/ಸ್ನೇಹಿತ ನಿಮ್ಮ ಮೇಲೆ ಹೇರುತ್ತಿದ್ದರೆ (ಪ್ರೀತಿಯಿಂದ ಅಥವಾ ಒತ್ತಾಯದಿಂದ), ಅದು ಅಪಾಯದ ಕರೆಗಂಟೆ. ಪ್ರೀತಿಯಲ್ಲಿ ವೈಯಕ್ತಿಕ ಭಾವನೆಗಳಿಗೆ ಗೌರವ ಕೊಡಲಾಗುತ್ತದೆ, ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗೆ ಗೌರವ ಕೊಡಲಾಗುತ್ತದೆ. ಪ್ರೇಮಿ ಹೀಗೆ ಮಾಡಿದಾಗ, ಅವನಿಗೆ ನನ್ನ ಬಗ್ಗೆ ಎಷ್ಟೊಂದು ಕೇರ್ ಇದೆ ಎಂದು ಸಂಭ್ರಮಿಸುವ ಹುಡುಗಿಯರೇ ಅವರ ತಂದೆಯೋ ತಾಯಿಯೋ ಅದನ್ನೇ ಮಾಡಿದಾಗ ನನ್ನ ಮೇಲೆ ನಂಬಿಕೆಯೇ ಇಲ್ಲ. ಹದ್ದಿನ ಕಣ್ಣು ಇಟ್ಟು ಗೂಢಚರ್ಯು ಮಾಡುತ್ತಾರೆ ಎಂದು ತಮ್ಮ ಪ್ರೇಮಿಗೇ ಹೇಳಿದ ಪ್ರಕರಣಗಳು ಅವೆಷ್ಟೋ!

ಭಾವನಾತ್ಮಕ ಬ್ಲ್ಯಾಕ್​ವೆುೕಲ್

ಅವರ (ಸಂಗಾತಿ/ಸ್ನೇಹಿತ) ಮಾತು ಕೇಳದಿದ್ದರೆ, ತಾನು ತನ್ನ ಜೀವಕ್ಕೆ ಅಪಾಯ ತಂದುಕೊಳ್ಳುವ ಬೆದರಿಕೆ, ದೈಹಿಕವಾಗಿ ಘಾಸಿ ಮಾಡಿಕೊಳ್ಳುವ ನಡವಳಿಕೆ (ಕೈ ಕುಯ್ದುಕೊಳ್ಳುವುದು, ಅಧಿಕ ಮಾತ್ರೆಗಳನ್ನು ಸೇವಿಸುವುದು, ಅತಿ ಮದ್ಯಸೇವನೆ ಇತ್ಯಾದಿ) ಆ ವ್ಯಕ್ತಿಯಲ್ಲಿ ಇರಬಹುದಾದ ವ್ಯಕ್ತಿತ್ವ ದೋಷಗಳಿಗೆ ಕನ್ನಡಿ. ಆಪ್ತಸಮಾಲೋಚನೆಯ ನೆರವಿನಿಂದ ಇಂತಹ ನಡವಳಿಕೆಯಿಂದ ಹೊರಬರುವಂತೆ ಉತ್ತೇಜನದ ಮೂಲಕವೋ, ಅದೇ ಭಾವನಾತ್ಮಕ ಬ್ಲ್ಯಾಕ್​ವೆುೕಲ್ ಬಳಸಿಯೋ ಪ್ರಯತ್ನಿಸುವುದು ಉತ್ತಮ.

ಮಾನಸಿಕ ಗುಲಾಮರಾಗಬೇಡಿ

ಸಾರ್ವಜನಿಕವಾಗಿ, ಅದರಲ್ಲಿಯೂ ಗೆಳೆಯರ ಮುಂದೆ ನೀವು ಅವರ ಮಾತಿಗೆ ಎಷ್ಟು ವಿಧೇಯರಾಗಿದ್ದೀರಿ ಎಂದು ತೋರಿಸಿ ಕೊಳ್ಳುವುದನ್ನು ಪದೇಪದೆ ಮಾಡುತ್ತಿದ್ದರೆ, ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳದಿದ್ದರೆ, ಮಾನಸಿಕವಾಗಿ ನೀವು ಅವರ ಗುಲಾಮರು ಎಂದು ಸಾಬೀತು ಪಡಿಸುವ ಹುನ್ನಾರ ಎಂದು ಅರ್ಥ ಮಾಡಿಕೊಂಡು ಆ ಮಾನಸಿಕ ಗುಲಾಮಗಿರಿಯಿಂದ ಅಚೆ ಬರುವುದು ಕ್ಷೇಮಕರ.

ಅಸಭ್ಯ ಪದಗಳ ಬಳಕೆ

ಕೆಲವು ವೇಳೆ ತಮ್ಮ ಭಾವುಕತೆಯನ್ನು ನಿಯಂತ್ರಿಸಿಕೊಳ್ಳಲಾಗದೆ ಪ್ರೀತಿಸಿದವರನ್ನು ಅವಹೇಳನಕಾರಿ ಪದಗಳಿಂದ ನಿಂದಿಸಬಹುದು. ಇದರಿಂದ ನಿಂದಿತರು ಖಿನ್ನತೆಗೆ ಜಾರುತ್ತಾರೆ. ಯಾರದೋ ತಪ್ಪಿಗೆ ನಾವು ಯಾಕೆ ಶಿಕ್ಷೆ ಅನುಭವಿಸಬೇಕು ಎನ್ನುವುದು ಕೇಳಿಕೊಳ್ಳಬೇಕಾದ ಪ್ರಶ್ನೆ. (ಲೇಖಕರು ಆಪ್ತಸಲಹೆಗಾರರು)

- Advertisement -

Stay connected

278,594FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...