Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಪ್ರೀತಿಸ್ತೀನಿ ಅಂತಾ ಮದುವೆಯಾದವಳು ಪೊಲೀಸರಿಗೆ ದೂರು ಕೊಟ್ಟಳು: ನಂಬಿ ಕೈ ಹಿಡಿದವನು ಆತ್ಮಹತ್ಯೆ ಮಾಡಿಕೊಂಡ

Monday, 13.08.2018, 9:18 AM       No Comments

ತುಮಕೂರು: ಪ್ರೀತಿ ಮಾಡಿದಳು. ಆತನನ್ನೇ ಮದುವೆಯಾದಳು. ಕೊನೆಗೆ ಬಲವಂತವಾಗಿ ಕರೆದೊಯ್ದಿದ್ದ ಎಂದು ಪೊಲೀಸರಿಗೆ ದೂರು ಕೊಟ್ಟಳು. ಆತ ಮನನೊಂದು ಫೇಸ್​ಬುಕ್​ ಲೈವ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ತುರುವೇಕೆರೆಯ ಮೋಹನ್​ ಗೌಡ(25) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮೋಹನ್​ ಐದು ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ಪ್ರೀತಿಸುತ್ತಿದ್ದು ಇಬ್ಬರೂ ವಿವಾಹವಾಗಿದ್ದರು.

ಮದುವೆಯ ಬಳಿಕ ಯುವತಿಯ ಪಾಲಕರು ಆಕೆಯ ಮನವೊಲಿಸಿ ಮನೆಗೆ ಕರೆದೊಯ್ದಿದ್ದರು. ಬಳಿಕ ಆ ಯುವತಿ ಯುವಕನೇ ಮೋಸಮಾಡಿ ಕರೆದೊಯ್ದಿದ್ದ ಎಂದು ತುರುವೇಕೆರೆ ಠಾಣೆಯಲ್ಲಿ ದೂರು ನೀಡಿದ್ದಳು. ಹಾಗಾಗಿ ಮದುವೆ ಡಿವೋರ್ಸ್​ ಹಂತಕ್ಕೆ ತಲುಪಿತ್ತು.
ಮನನೊಂದ ಯುವಕ ಫೇಸ್​ಬುಕ್​ ವಿಡಿಯೋದಲ್ಲಿ ತನ್ನೆಲ್ಲ ನೋವನ್ನೂ ಹೇಳಿಕೊಂಡು ಕೊಠಡಿಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

Leave a Reply

Your email address will not be published. Required fields are marked *

Back To Top