More

  ವಿಷ ಕುಡಿಯುವ ಮುನ್ನ ನಾವು ಪ್ರೀತಿಸಿದ್ದೇ ತಪ್ಪು… ಎಂದು ಕಣ್ಣೀರಿಟ್ಟರು!

  ರಾಯಚೂರು: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪ್ರಾಪ್ತ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈಕೆಯ ಪ್ರಿಯಕರನ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

  ಇಂತಹ ದುರ್ಘಟನೆ ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ಸಂಭವಿಸಿದ್ದು, ಸ್ಥಳದಲ್ಲಿ ಡೆತ್​ನೋಟ್​ ಸಿಕ್ಕಿದೆ. ಜಾಲೇರದೊಡ್ಡಿಯ ಮಹಾದೇವಿ (17) ಮೃತಪಟ್ಟಿದ್ದಾಳೆ. ಪ್ರಿಯಕರ ಯರಜಂತಿ ಗ್ರಾಮದ ನರಸಪ್ಪ (28) ಸ್ಥಿತಿ ಗಂಭೀರವಾಗಿದೆ. ನರಸಪ್ಪನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ. ಆದರೂ ಮಹಾದೇವಿಯನ್ನು ಪ್ರೀತಿಸುತ್ತಿದ್ದ. ಕೆಲ ತಿಂಗಳ ಹಿಂದೆ ಇವರಿಬ್ಬರೂ ಪರಾರಿಯಾಗಿದ್ದರು.

  ವಿವಾಹಿತನೊಂದಿಗೆ ಮಗಳ ಪ್ರೀತಿ ವಿಚಾರ ತಿಳಿದ ಮಹಾದೇವಿ ಪಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ನರಸಪ್ಪನೊಂದಿಗೆ ಪರಾರಿಯಾಗಿದ್ದ ಮಹಾದೇವಿ ಅಪ್ರಾಪ್ತೆ ಆಗಿದ್ದರಿಂದ ಬಾಲ ಮಂದಿರದಲ್ಲಿದ್ದಳು.

  ಆದರೆ, ಶನಿವಾರ ಇವರಿಬ್ಬರೂ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿದ್ದಾರೆ. ಅಲ್ಲದೆ ಇಬ್ಬರ ಕೈ ಮೇಲೂ ಪರಸ್ಪರ ಹೆಸರನ್ನೂ ಬರೆದುಕೊಂಡಿದ್ದಾರೆ. ಅಲ್ಲದೆ ಮಹಾದೇವಿ ಅಂಗೈಯಲ್ಲಿ ‘ನಮ್ಮ ಸಾವಿಗೆ ನಾವೇ ಕಾರಣ’ ಎಂದಿದೆ.

  ‘ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವೇ ಕಾರಣ. ಯಾರಿಗೂ ತೊಂದರೆ ಮಾಡಬೇಡಿ, ನಾವು ಪ್ರೀತಿ ಮಾಡಿದ್ದೆ ತಪ್ಪು. ನನ್ನ ಗಂಡ(ನರಸಿಂಹ)ನ ಜೇಬಿನಲ್ಲಿ 8680 ರೂಪಾಯಿ ಇದೆ. ಈ ಎಟಿಎಂ ಕಾರ್ಡ್​ನಲ್ಲೂ ಹಣ ಇದೆ (ಪಾಸ್​ವರ್ಡ್​ ಬರೆಯಲಾಗಿದೆ). ಇದನ್ನು ನಮ್ಮ ಮಕ್ಕಳಿಗೆ ದಯವಿಟ್ಟು ತಲುಪಿಸಿ. ಬೈಕ್​ ಅನ್ನೂ ಅವರಿಗೇ ಕೊಡಿ. ನಮ್ಮಿಬ್ಬರನ್ನು ಯರಜಂತಿಯಲ್ಲಿ ನಮ್ಮ ಮಾವನ ಗುಡಿ ಅತ್ತಿರ ಇಡಬೇಕು. ಒಂದೇ ಜಾಗದಲ್ಲಿ ಇಡಬೇಕು. ಮುಂದಿನ ಜನ್ಮದಲ್ಲಿ ಹುಟ್ಟಿದರೆ ನಾವಿಬ್ಬರೂ ಗಂಡ-ಹೆಂಡತಿಯಾಗಿ ಬಾಳುತ್ತೇವೆ’ ಎಂದು ಡೆತ್​ ನೋಟ್​ನಲ್ಲಿ ಬರೆದು ಇಬ್ಬರೂ ಸಹಿ ಮಾಡಿದ್ದಾರೆ.

  ಮಹಾದೇವಿಗೆ 18 ವರ್ಷ ತುಂಬಿದ ಬಳಿಕ ವಿವಾಹ ಮಾಡಿಸುವದಾಗಿ ಮಹಿಳಾ ಸಾಂತ್ವನ ಕೇಂದ್ರದವರು ತಿಳಿಸಿದ್ದರು ಎನ್ನಲಾಗಿದೆ.

  ನರ್ಸ್​ಗಳ ಬೆತ್ತಲೆ ಚಿತ್ರವನ್ನ ಕದ್ದುಮುಚ್ಚಿ ಸರೆಹಿಡಿಯುತ್ತಿದ್ದ ಯುವತಿ! ಅದನ್ನು ನೋಡುತ್ತಿದ್ದ ಪ್ರಿಯಕರನ ಕಥೆ ಏನಾಯ್ತು?

  ಜೈಲಿಂದ ಹೊರ ಬಂದ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

  ಸ್ಕೆಚ್​ ಹಾಕಿ ಕುಮಾರಸ್ವಾಮಿ ಸರ್ಕಾರವನ್ನ ಕೆಡವಿದ್ದು ನಾನೇ… ಎಂದ ಯೋಗೇಶ್ವರ್​ ಆಡಿಯೋ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts