ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಸೇರಿ ಹಲವರಿಂದ ಸಾಂತ್ವನ

1 Min Read
ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಸೇರಿ ಹಲವರಿಂದ ಸಾಂತ್ವನ
ಡಾ.ಸೌಂದರ್ಯಾ, ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಅವರ ಆತ್ಮಹತ್ಯೆಗೆ ದೇಶಾದ್ಯಂತ ಹಲವಾರು ಗಣ್ಯರಿಂದ ಸಂತಾಪ ವ್ಯಕ್ತವಾಗಿದೆ.

ಡಾ. ಸೌಂದರ್ಯ ಇಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾದ ಆಘಾತದ ಸುದ್ದಿಯ ಬೆನ್ನಿಗೇ ಪಕ್ಷಾತೀತವಾಗಿ ಶೋಕ ವ್ಯಕ್ತವಾಗಿದೆ. ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳ ನಾಯಕರೂ ಬಿಎಸ್​ವೈ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ನಿತ್ಯ ಹಿಂಸಿಸುತ್ತಿದ್ದ ಗಂಡ; ಮಗನ ಸಹಿತ ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ

ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಿಎಂ ಬಿಎಸ್​ವೈ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಲ್ಲದೆ ಸಾಂತ್ವನ ಹೇಳಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ದೂರವಾಣಿ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲದೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಿಎಸ್​​ವೈಗೆ ಕರೆ ಮಾಡಿ ಶೋಕ ವ್ಯಕ್ತಪಡಿಸಿ ಸಂತೈಸಿದ್ದಾರೆ.

ಬಿಎಸ್​ವೈ ಮೊಮ್ಮಗಳು ಡಾ.ಸೌಂದರ್ಯ ಸಾವಿಗೆ ಕಾರಣ ಇದೇನಾ?

ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ: ಡಾ.ಸೌಂದರ್ಯ ಸಾವಿನ ಮನೆಯ ಕದ ತಟ್ಟಿದ ಆ ಕ್ಷಣ…

See also  ಮ್ಯಾಚ್​ಗೂ ಮುನ್ನ ರೋಹಿತ್ ಶರ್ಮಾಗೆ ಸಿಕ್ತು ಮೋದಿ ಕೈಯಿಂದ ವಿಶೇಷ ಟೋಪಿ!
Share This Article