ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟದ ಮಧ್ಯೆ ಕಳೆದ ಬಾಲ್​: ಕೊನೆಗೆ ಸಿಕ್ಕಿದ್ದೆಲ್ಲಿ ಗೊತ್ತಾ?

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಕಳೆದುಹೋದ ಬಾಲ್​ಗಾಗಿ ಉಭಯ ತಂಡದ ಆಟಗಾರರೆಲ್ಲಾ ಹುಡುಕಾಟ ನಡೆಸಿದ ಅಪರೂಪದ ಘಟನೆ ನಡೆದಿದೆ.

ಆರ್​ಸಿಬಿ ಬ್ಯಾಟಿಂಗ್​ ನಡೆಸುತ್ತಿದ್ದಾಗ 14ನೇ ಓವರ್​ನ ನಂತರ ಸ್ಟಾಟರ್ಜಿಕ್​ ಟೌಮ್​ ಔಟ್​ ನೀಡಲಾಗಿತ್ತು. ನಂತರ ಪಂಜಾಬ್​ನ ಅಂಕಿತ್​ ರಜಪೂತ್​ 15ನೇ ಓವರ್​ ಆರಂಭಿಸಲು ಸಿದ್ಧರಾದರು. ಆದರೆ ಅವರು ಬಾಲ್​ ನೀಡುವಂತೆ ಸಹ ಆಟಗಾರರಿಗೆ ಮತ್ತು ಅಂಪೈರ್​ಗೆ ಕೇಳಿದರು. ಆದರೆ ಯಾರ ಬಳಿಯೂ ಬಾಲ್​ ಇರಲಿಲ್ಲ. ಎಲ್ಲರೂ ಬಾಲ್​ ಎಲ್ಲಿ ಹೋಯಿತು ಎಂದು ಹುಡುಕಾಡಲು ಪ್ರಾರಂಭಿಸಿದರು. ಸ್ವಲ್ಪ ಸಮಯ ಮೈದಾನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೊನೆಗೆ ಬಾಲ್​ ಸಿಗದಿದ್ದಾಗ ಅಪೈರ್​ಗಳು ಹೊಸ ಬಾಲ್​ ತರುವಂತೆ ಸೂಚಿಸಿದರು. ಸಿಬ್ಬಂದಿ ಹೊಸ ಬಾಲ್​ ಹೊತ್ತು ಮೈದಾನಕ್ಕೆ ಬರುತ್ತಿದ್ದಂತೆ ಅಂಪೈರ್​ ಸಿ. ಶಂಶುದ್ದೀನ್​ ಅವರಿಗೆ ಬಾಲ್​ ತಮ್ಮ ಬಳಿಯೇ ಇರುವುದು ನೆನಪಾಗಿದೆ. ತಕ್ಷಣ ಅವರು ತಮ್ಮ ಜೇಬಿನಿಂದ ಬಾಲ್​ ಹೊರತೆಗೆದು ಬೌಲರ್​ಗೆ ನೀಡಿ ಆಟ ಮುಂದುವರಿಸಲು ಸೂಚಿಸಿದರು.

ಈ ಗೊಂದಲಕ್ಕೆ ಕಾರಣವೇನೆಂದರೆ 14ನೇ ಓವರ್​ ಮುಕ್ತಾಯವಾದ ನಂತರ ಅಂಪೈರ್​ ಬ್ರೂಸ್​ ಆಕ್ಸೆನ್​ಫೋರ್ಡ್​ ಬಾಲ್​ ಪಡೆದು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ವೇಳೆ ಬ್ರೂಸ್​ ಬಳಿ ಬಂದ ಶಂಶುದ್ದೀನ್​ ಅವರು ಬಾಲ್​ನ್ನು ಪಡೆದು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದರು. ಆದರೆ ಸ್ಟಾಟರ್ಜಿಕ್​ ಟೌಮ್​ ಔಟ್​ ಮುಗಿಯುವ ವೇಳೆಗೆ ಬಾಲ್​ ತಮ್ಮ ಬಳಿ ಇರುವುದನ್ನು ಅವರು ಮರೆತಿದ್ದರಿಂದ ಈ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. (ಏಜೆನ್ಸೀಸ್​)

One Reply to “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟದ ಮಧ್ಯೆ ಕಳೆದ ಬಾಲ್​: ಕೊನೆಗೆ ಸಿಕ್ಕಿದ್ದೆಲ್ಲಿ ಗೊತ್ತಾ?”

Comments are closed.