ಹನುಮಂತ ಕ್ರೀಡಾಪಟುವಾಗಿದ್ದ: ಮಾಜಿ ಕ್ರಿಕೆಟಿಗ ಚೇತನ್​ ಚೌಹಾಣ್​

ಉತ್ತರಪ್ರದೇಶ: ಹನುಮಂತನ ಜಾತಿ ಬಗ್ಗೆ ಹಲವಾರು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಚೇತನ್​ ಚೌಹಾಣ್ ಹನುಮಂತ ಕ್ರಿಕೆಟಿಗ, ಆತನ ಜಾತಿ ಬಗ್ಗೆ ಯಾರೂ ಚರ್ಚಿಸಬೇಡಿ ಎಂದಿದ್ದಾರೆ. ​

ಹನುಮಂತ ಶತ್ರುಗಳ ಜತೆ ಕುಸ್ತಿ ಆಡುತ್ತಿದ್ದ. ಹಾಗಾಗಿ ಅವನು ಕ್ರೀಡಾಪಟುವಾಗಿದ್ದ ಎಂದು ನಾವು ನಂಬಿದ್ದೇವೆ. ನಮ್ಮ ದೇಶದ ಎಲ್ಲ ಕ್ರೀಡಾಪಟುಗಳು ಹನುಮಂತನನ್ನು ಪೂಜಿಸುತ್ತಾರೆ. ಪಂದ್ಯಗಳಲ್ಲಿ ಗೆಲುವು ಸಾಧಿಸಲು ಹನುಂತನ ಶಕ್ತಿ ಬರಲಿ ಎಂದು ಬೇಡಿಕೊಳ್ಳುತ್ತಾರೆ ಹೊರತು ಅವನ ಜಾತಿ ನೋಡಿ ಪೂಜಿಸುವುದಿಲ್ಲ ಎಂದರು.

ಸಂತನಿಗೆ ಯಾವುದೇ ಜಾತಿ ಇಲ್ಲ, ಅಧ್ಯಾತ್ಮಕ್ಕೆ ಯಾವುದೇ ಜಾತಿ. ಅದೇ ರೀತಿ ಹನುಮಂತನಿಗೂ ಯಾವುದೇ ಜಾತಿ ಇಲ್ಲ. ನಾನು ಅವನನ್ನು ದೇವರೆಂದು ಪರಿಗಣಿಸುತ್ತೇನೆ. ಆತನನ್ನು ಜಾತಿ ಜಾಲದಲ್ಲಿ ಸಿಲುಕಿಸಲು ನನಗೆ ಇಷ್ಟವಿಲ್ಲ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕಳೆದ ತಿಂಗಳು ದೇವರಾದ ಹನುಮಂತ ದಲಿತನಾಗಿದ್ದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. (ಏಜೆನ್ಸೀಸ್)