ಅಧಿಕಾರಿಗಳಿಂದ ಕೋಟ್ಯಂತರ ರೂ. ಲೂಟಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೂವರು ಸರ್ಕಾರಿ ನೌಕರರ ಕಚೇರಿ ಹಾಗೂ ಮನೆಗಳ ಮೇಲೆ ಬುಧವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಅದರ ವಿವರ ಬಿಡುಗಡೆ ಮಾಡಿದ್ದಾರೆ.

ಯಾರದ್ದು ಎಷ್ಟು ಆಸ್ತಿ?: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರೊಫೆಸರ್ ಕಲ್ಲಪ್ಪ ಎಂ ಹೊಸಮಾಯಿ ಮತ್ತು ಕುಟುಂಬದ ಹೆಸರಿನಲ್ಲಿ ಧಾರವಾಡದಲ್ಲಿ 1 ಮನೆ, 1 ನಿವೇಶನ, ವಿವಿಧ ಸ್ಥಳಗಳಲ್ಲಿ ಒಟ್ಟು 40 ಎಕರೆ ಕೃಷಿ ಜಮೀನು, 200 ಗ್ರಾಂ ಚಿನ್ನ, 1.148 ಕೆಜಿ ಬೆಳ್ಳಿ, 2 ಕಾರ್, 2 ದ್ವಿಚಕ್ರವಾಹನ, 1 ಟ್ರಾ್ಯಕ್ಟರ್, 15 ಲಕ್ಷ ಠೇವಣಿ ಮತ್ತು ವಿಮೆ ಪಾಲಿಸಿ, 17 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಇ ಮಹದೇವಪ್ಪ ಮತ್ತು ಕುಟುಂಬಸ್ಥರ ಹೆಸರಿನಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ 1 ಮನೆ, 1 ನಿವೇಶನ, ಹೆಸರಘಟ್ಟದಲ್ಲಿ 1 ನಿವೇಶನ, ಚಿಕ್ಕಮಗಳೂರಿನಲ್ಲಿ 15 ಎಕರೆ ಹಾಗೂ ಚಿತ್ರದುರ್ಗದಲ್ಲಿ 3 ಎಕರೆ ಕೃಷಿ ಜಮೀನು, 112 ಗ್ರಾಂ ಚಿನ್ನ, 4.4 ಕೆಜಿ ಬೆಳ್ಳಿ, 1 ಕಾರು, 1 ದ್ವಿಚಕ್ರ ವಾಹನ, 3.11 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 6.49 ಲಕ್ಷ, 12 ಲಕ್ಷ ಠೇವಣಿಗಳು, 2150 ಯು.ಎಸ್ ಡಾಲರ್​ಗಳು, 4800 ಹಾಂಗ್​ಕಾಂಗ್ ಡಾಲರ್​ಗಳು ಮತು 5 ಲಕ್ಷ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ. ಉತ್ತರ ಕನ್ನಡದ ಜೋಯಿಡಾ ಸಬ್​ಡಿವಿಷನ್​ನ ಎಇಇ ಉದಯ ಡಿ ಚಬ್ಬಿ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 3 ಮನೆ,

300 ಗ್ರಾಂ ಚಿನ್ನ, 1 ಕಾರು, 1 ದ್ವಿಚಕ್ರ ವಾಹನ, 11 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 31.43 ಲಕ್ಷ ಹಾಗೂ 2 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

Leave a Reply

Your email address will not be published. Required fields are marked *