Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಕಾಣುತಿದೆ ಕಲ್ಲುಕಲ್ಲಿನಲಿ ಹನುಮನ ಗುಡಿ!

Wednesday, 20.06.2018, 3:04 AM       No Comments

ಇತಿಹಾಸದ ಕಾಲಗರ್ಭದಲ್ಲಿ ಅಡಗಿ ಹೋಗಿದ್ದ ಸತ್ಯವೊಂದು ‘ಗೋಡೆ’ ದಾಟಿ ಹೊರಬಂದಿದೆ! ಟಿಪು್ಪ ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣದಲ್ಲಿರುವ ಜುಮ್ಮಾ ಮಸೀದಿಯನ್ನು ಹನುಮನ ದೇಗುಲವನ್ನು ಕೆಡವಿ ನಿರ್ವಿುಸಲಾಗಿತ್ತೆಂಬ ಪುರಾತತ್ವ ಇಲಾಖೆ ವರದಿ ಪುಷ್ಟೀಕರಿಸುವಂತೆ ಸಾಕ್ಷ್ಯಾಧಾರಗಳು ಗೋಚರಿಸಿವೆ. ಈ ವಿಷಯದ ಬೆನ್ನತ್ತಿ ಈ ವಿಶೇಷ ವರದಿ ಸಿದ್ಧಪಡಿಸಲಾಗಿದೆ. ಇದು ವಿಜಯವಾಣಿ, ದಿಗ್ವಿಜಯ ನ್ಯೂಸ್ 247 ವಿಶೇಷ.

ಗಂಗರು, ಚೋಳರು, ವಿಜಯನಗರ ಅರಸರಿಂದ ಹಿಡಿದು ಟಿಪು್ಪ ಸುಲ್ತಾನ್ ಆಳ್ವಿಕೆವರೆಗೆ ಇತಿಹಾಸದ ನಂಟು ಬೆಸೆದುಕೊಂಡಿರುವ ಕಾವೇರಿ ತೀರದ ಶ್ರೀರಂಗಪಟ್ಟಣ ಕರ್ನಾಟಕಕ್ಕಷ್ಟೇ ಅಲ್ಲ ಇಡೀ ಭಾರತದ ಹೆಮ್ಮೆ. ಗತಕಾಲದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಒಡಲಲ್ಲಿಟ್ಟುಕೊಂಡಿರುವ ಈ ಪಟ್ಟಣದ ಹನುಮ ದೇಗುಲ ರಹಸ್ಯ ಶತಮಾನದ ಬಳಿಕ ಬಯಲಾಗಿದೆ. ಇಲ್ಲಿನ ಜುಮ್ಮಾ ಮಸೀದಿಯ ಗೋಡೆ, ಕಂಬಗಳಲ್ಲಿ ಪದ್ಮಾವತಿ, ಶಾರ್ದೂಲ, ನಾಗಬಂಧ ಗೋಚರಿಸಿರುವುದು ಹನುಮ ದೇಗುಲದ ಕುರಿತಂತೆ ಪುರಾತತ್ವ ಇಲಾಖೆಯ ವರದಿಗೆ ಪುಷ್ಟಿ ನೀಡಿದೆ. ಮೈಸೂರು ಪುರಾತತ್ವ ಇಲಾಖೆ ಸ್ವಾತಂತ್ರ್ಯಕ್ಕೂ 12 ವರ್ಷ ಮೊದಲೇ

1935ರಲ್ಲಿ ಮುದ್ರಿಸಿರುವ ವಾರ್ಷಿಕ ವರದಿಯ ಪುಟ 61ರಲ್ಲಿ ಜುಮ್ಮಾ ಮಸೀದಿ ಇರುವ ಜಾಗದಲ್ಲಿ ಹನುಮ ಮಂದಿರವಿತ್ತೆಂಬುದು ಉಲ್ಲೇಖವಾಗಿದೆ.

ಗೋಡೆ, ಕಂಬಗಳೇ ಸಾಕ್ಷ್ಯ

ಮಸೀದಿಯ ಎಡಭಾಗದ ಕಂಬದಲ್ಲಿ ನಾಗಬಂಧ ಈಗಲೂ ಗೋಚರಿಸುತ್ತದೆ. ಬಲಭಾಗದ ಕಂಬದಲ್ಲಿ ಪದ್ಮಾವತಿ ಚಕ್ರವಿದೆ. ಸುಣ್ಣ ಬಳಿದಿರುವ ಕಂಬದ ಮೇಲೆ ಶಾರ್ದೂಲ ಚಿತ್ರ ಕಾಣುತ್ತದೆ. ಹಿಂದೂ ದೇಗುಲಗಳನ್ನು ಹೋಲುವ ಗರ್ಭಗುಡಿ ಅಸ್ತಿತ್ವ ಇಂದಿಗೂ ಇದೆ. ಈ ಮೊದಲು ಕೆಲ ಸಂಶೋಧಕರು, ಇತಿಹಾಸಕಾರರು ಹನುಮ ದೇಗುಲದ ವಿವರ ಉಲ್ಲೇಖಿಸಿದ್ದರು. ಇದೀಗ ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿಯಲ್ಲೂ ಉಲ್ಲೇಖವಾಗಿರುವುದು ಚರ್ಚೆಗೆ ಕಾರಣವಾಗಿದೆ.

ಸದ್ಯ ಕೇಂದ್ರ ಪುರಾತತ್ವ ಇಲಾಖೆ ಜುಮ್ಮಾ ಮಸೀದಿಯನ್ನು ಐತಿಹಾಸಿಕ ಸ್ಮಾರಕ ಎಂದು ಪರಿಗಣಿಸಿ ತನ್ನ ಸುಪರ್ದಿಯಲ್ಲಿಟ್ಟುಕೊಂಡಿದೆ. ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗಿದ್ದರೂ ಈಗಲೂ ಒಂದು ಧರ್ಮದ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ಇತಿಹಾಸ ಏನು ಹೇಳುತ್ತದೆ

ಟಿಪ್ಪು ಸುಲ್ತಾನ್ ಬಾಲಕನಾಗಿದ್ದಾಗ ‘ನೀನು ಮಂದಿರವನ್ನು ನೆಲಸಮ ಮಾಡಿ ಮಸೀದಿ ನಿರ್ವಿುಸು. ಇದರಿಂದ ಮತ್ತಷ್ಟು ಖ್ಯಾತಿ ಗಳಿಸುತ್ತೀಯ’ ಎಂದು ಫಕೀರನೊಬ್ಬ ಹೇಳಿದ್ದನಂತೆ. ಅದನ್ನು ಪಾಲಿಸಿದ್ದ ಟಿಪ್ಪು 1787ರಲ್ಲಿ ಶ್ರೀರಂಗಪಟ್ಟಣದ ಆಂಜನೇಯ ದೇಗುಲ ಧ್ವಂಸಗೊಳಿಸಿ ಅದರ ಮೇಲೆಯೇ ಎರಡು ಗೋಪುರದ ಮಸೀದಿಯನ್ನು ನಿರ್ವಿುಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿಯಲ್ಲಿ ಉಲ್ಲೇಖವಾಗಿದೆ. ನೆಲಸಮಗೊಂಡ ದೇಗುಲದಲ್ಲಿದ್ದ ಆಂಜನೇಯ ಮೂರ್ತಿಯನ್ನು ಸ್ಥಳೀಯರು ರಕ್ಷಿಸಿ, ಟಿಪ್ಪು ಮರಣದ ನಂತರ ಪುಟ್ಟ ಮನೆಯೊಂದರಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದೇ ಮೂರ್ತಿ ಇಂದು ಮೂಡಲ ಆಂಜನೇಯ ಸ್ವಾಮಿಯಾಗಿ ಖ್ಯಾತಿ ಪಡೆದಿದೆ.

ಶಾಪ ತಟ್ಟಿತ್ತೇ?

ಹನುಮ ಮಂದಿರ ನಾಶ ಮಾಡಿದ್ದ ಟಿಪು್ಪವಿಗೆ ‘ನೀನು ನನ್ನ ಕಣ್ಣೆದುರಲ್ಲಿ ಸಾಯ್ತೀಯ’ ಎಂದು ಆಂಜನೇಯ ಸ್ವಾಮಿ ಶಾಪ ನೀಡಿದ್ದನಂತೆ. ಕಾಕತಾಳೀಯ ಎಂಬಂತೆ ಟಿಪ್ಪು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೋರಾಡುವ ವೇಳೆ ಶ್ರೀರಂಗಪಟ್ಟಣದಲ್ಲಿ ಸಾಮಾನ್ಯ ಸೈನಿಕನಂತೆ ಸಾವನ್ನಪ್ಪಿದ್ದ. ಸದ್ಯ ಇರುವ ದೇಗುಲದ ನೇರಕ್ಕೆ 300 ಮೀಟರ್ ದೂರದಲ್ಲಿಯೇ ಟಿಪ್ಪು ಶವ ಬಿದ್ದಿತ್ತು ಎಂದು ಸ್ಥಳೀಯರು ಹನುಮ ದೇಗಲದ ದಂತಕಥೆಯನ್ನು ಹೇಳುತ್ತಾರೆ.

ಕಾನೂನು ಸಮರ

ಮೈಸೂರು ಪುರಾತತ್ವ ಇಲಾಖೆ ವಾರ್ಷಿಕ ವರದಿ, ಮಸೀದಿ ಮೇಲಿರುವ ಕುರುಹುಗಳನ್ನು ಆಧರಿಸಿ ಕೇಂದ್ರ ಪುರಾತತ್ವ ಇಲಾಖೆಗೆ ಆರ್​ಟಿಐ ಕಾರ್ಯಕರ್ತ ಭಾಸ್ಕರನ್ ದೂರು ನೀಡಿದ್ದಾರೆ. ಹನುಮ ದೇಗುಲವನ್ನು ಪುನರ್ ಸ್ಥಾಪಿಸಬೇಕು. ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಜುಮ್ಮಾ ಮಸೀದಿಯಲ್ಲಿ ಅದರ ಅಸಲಿ ಇತಿಹಾಸವನ್ನು ಬರೆದು ಪ್ರಕಟಿಸಬೇಕು. ಪ್ರತಿಯೊಬ್ಬರಿಗೂ ಸತ್ಯ ಗೊತ್ತಾಗಬೇಕು. ಇದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಈ ನಿಟ್ಟಿನಲ್ಲಿ ಕಾನೂನು ಸಮರ ಮಾಡಲು ಸಿದ್ಧತೆ ನಡೆದಿದೆ ಎಂದು ಭಾಸ್ಕರನ್ ತಿಳಿಸಿದ್ದಾರೆ.

ಶ್ರೀರಂಗಪಟ್ಟಣದ ಆರಾಧ್ಯ ದೈವ ಹನುಮಾನ್ ವಿಗ್ರಹ ಭಗ್ನಗೊಳಿಸಿ ಟಿಪ್ಪು ಅದರ ಮೇಲೆ ಗುಮ್ಮಟ ನಿರ್ವಿುಸಿದ್ದಾನೆ. ಮೂಲ ಹನುಮಾನ್ ವಿಗ್ರಹವನ್ನು ಶ್ರೀರಂಗಪಟ್ಟಣದ ಜನ ಊರಿನಲ್ಲೇ ಬೇರೆಡೆ ಇಟ್ಟಿದ್ದಾರೆ. ಆ ಆಂಜನೇಯ ದೇಗುಲಕ್ಕೆ ನಾನು ಹೋಗಿದ್ದೇನೆ.

ಡಾ.ಎಂ.ಚಿದಾನಂದಮೂರ್ತಿ, ಹಿರಿಯ ಸಂಶೋಧಕರು

ಮೈಸೂರು ಪುರಾತತ್ವ ಇಲಾಖೆ ವರದಿ, ಮಸೀದಿ ಮೇಲಿನ ಸಾಕ್ಷ್ಯಗಳನ್ನು ಪರಿಗಣಿಸಿ ಕೇಂದ್ರ ಪುರಾತತ್ವ ಇಲಾಖೆ ಸ್ವಯಂಪ್ರೇರಿತವಾಗಿ ಕ್ರಮ ಜರುಗಿಸಬೇಕು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ಕಳಿಸಬೇಕು. ಮುಂದಿನ ನಿರ್ಧಾರವನ್ನು ಕಾನೂನಾತ್ಮಕವಾಗಿ ತೆಗೆದುಕೊಳ್ಳಬೇಕು. ಕೇಂದ್ರ ಪುರಾತತ್ವ ಇಲಾಖೆ ಜಾಣಕುರುಡು ಪ್ರದರ್ಶಿಸಿದರೆ, ಕಾನೂನು ಸಮರವೊಂದೇ ನಮಗಿರುವ ಮಾರ್ಗ.

ಪವನ್​ಚಂದ್ರಶೆಟ್ಟಿ , ವಕೀಲರು

Leave a Reply

Your email address will not be published. Required fields are marked *

Back To Top