ರಕ್ತ ಚಂದಿರ ದರ್ಶನ

ಬೆಂಗಳೂರು: ಭಾರತ ಸಹಿತ ಹತ್ತಾರು ರಾಷ್ಟ್ರಗಳ ಕೋಟ್ಯಂತರ ಜನರು ಶತಮಾನದ ಸುದೀರ್ಘ ಚಂದ್ರ ಗ್ರಹಣವನ್ನು ಕುತೂಹಲದಿಂದ ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ, 1.50ರ ಸುಮಾರಿಗೆ ಖಗ್ರಾಸ ಗ್ರಹಣ ಸಂಭವಿಸಿತು. ಬೆಳಗಿನ ಜಾವ 3.49ಕ್ಕೆ ಗ್ರಹಣಮೋಕ್ಷವಾಯಿತು. ಮೂರು ತಾಸು 55 ನಿಮಿಷಗಳ ಕಾಲ ನಡೆದ ಈ ವಿಸ್ಮಯ ವಿದ್ಯಮಾನ ಹಾಗೂ ರಕ್ತವರ್ಣದಿಂದ ಕಂಗೊಳಿಸಿದ ಚಂದ್ರನ ಅಪರೂಪದ ದೃಶ್ಯ ಬಾಹ್ಯಾಕಾಶ ಆಸಕ್ತರಲ್ಲಿ ರೋಮಾಂಚನ ಮೂಡಿಸಿತು.

ಧಾರ್ವಿುಕ ಆಚರಣೆ

ಗ್ರಹಣ ಹಿನ್ನೆಲೆಯಲ್ಲಿ ಧಾರ್ವಿುಕ ಆಚರಣೆ, ವಿಶೇಷ ಪೂಜೆ ಮಧ್ಯಾಹ್ನದಿಂದಲೇ ಆರಂಭವಾಗಿದ್ದವು. ತಿರುಪತಿ, ಕುಕ್ಕೆ ಸುಬ್ರಹ್ಮಣ್ಯ, ಗೋಕರ್ಣ, ಮುರುಡೇಶ್ವರ, ಶಿರಸಿ ಮಾರಿಕಾಂಬಾ ಮತ್ತಿತರ ದೇವಾಲಯಗಳಲ್ಲಿ ಸಂಜೆಯ ಬಳಿಕ ದರ್ಶನ ಬಂದ್ ಮಾಡಲಾಗಿತ್ತು. ಧರ್ಮಸ್ಥಳ, ಕೊಲ್ಲೂರು, ಶೃಂಗೇರಿ ಸಹಿತ ಹಲವು ದೇವಾಲಯಗಳಲ್ಲಿ ದಿನದಂತೆಯೆ ದರ್ಶನ, ಪೂಜೆ ಜರುಗಿತು. ಮುಂದಿನ ಸುದೀರ್ಘ ಖಗ್ರಾಸ ಚಂದ್ರ ಗ್ರಹಣ 2123 ಡಿಸೆಂಬರ್​ನಲ್ಲಿ ಸಂಭವಿಸಲಿದೆ.