ಲಾಂಗ್ ತೋರಿಸಿ ದರೋಡೆ

  • ಕೆ.ಆರ್.ಸಾಗರ: ಇಲ್ಲಿನ ಕಟ್ಟೇರಿ-ಬನ್ನಂಗಾಡಿ ರಸ್ತೆಯ ಕಾವೇರಿಪುರ ಕ್ರಾಸ್ ಬಳಿ ಇರುವ ಕಾಫಿ-ಟೀ ಅಂಗಡಿಗೆ ಸೋಮವಾರ ನಡುರಾತ್ರಿ ಸುಮಾರು 1.45ಕ್ಕೆ ಎರಡು ಪಲ್ಸರ್ ಬೈಕ್‌ನಲ್ಲಿ ಬಂದ ನಾಲ್ವರು ಯುವಕರು ಲಾಂಗು-ಮಚ್ಚು ತೋರಿಸಿ ಚಿನ್ನಾಭರಣ, ನಗದು ದೋಚಿದ್ದಾರೆ.
  • ಕಟ್ಟೇರಿ ಹೊಸೂರಿನ ಶಶಿಕಲಾ ಎಂಬುವರಿಗೆ ಸೇರಿದ ಕಾಫಿ-ಟೀ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು ಅಂಗಡಿ ಬಾಗಿಲು ಬಡಿದು ತೆರೆಯುವಂತೆ ಕೂಗಿದ್ದಾರೆ. ನಂತರ ಬಾಗಿಲನ್ನು ಮುರಿದು ಒಳನುಗ್ಗಿದ ನಾಲ್ವರು ಶಶಿಕಲಾ ಅವರಿಗೆ ಲಾಂಗ್ ತೋರಿಸಿ ಮಾಂಗಲ್ಯ ಕಸಿದುಕೊಂಡಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಸ್ವಲ್ಪ ನಗದು, ಎಲ್‌ಇಡಿ ಟಿವಿ, ಮೊಬೈಲ್ ಕಿತ್ತುಕೊಂಡಿದ್ದಲ್ಲದೆ ಶಶಿಕಲಾ ಮಕ್ಕಳಿಬ್ಬರಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
  • ಮಾಂಗಲ್ಯ ಸೇರಿದಂತೆ 80 ಸಾವಿರ ಮೌಲ್ಯದ ಪದಾರ್ಥಗಳನ್ನು ದೋಚಿದ್ದಾರೆ ಎಂದು ಶಶಿಕಲಾ ಅವರು ಕೆ.ಆರ್.ಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಎಸ್‌ಐ ರಾಜಶೇಖರ್ ಹಾಗೂ ಮುಖ್ಯ ಪೇದೆ ಅಣ್ಣೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *