ಬೆಂಗಳೂರು: ಅಶೋಕನಗರ ಸಮೀಪದ ಆನೇಪಾಳ್ಯದಲ್ಲಿ ಗುರುವಾರ ದುಷ್ಕರ್ಮಿಗಳು ಮನೆಗೆ ನುಗ್ಗಿ ಒಂಟಿಯಾಗಿದ್ದ ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿದ್ದಾರೆ. ಆನೇಪಾಳ್ಯದ ದಿಲ್ಷಾನ್ ಬಾನು (62) ಮೃತರು. ವೃದ್ಧೆಯ ಪುತ್ರ ಕೆಲಸದ ನಿಮಿತ್ತ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಗೆ ಹೋಗಿದ್ದರು. ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನೇಪಾಳ್ಯದಲ್ಲಿ ಮಗನ ಕುಟುಂಬದ ಜತೆ ಬಾನು ನೆಲೆಸಿದ್ದರು. ಪುತ್ರ ಟೆಂಪೋ ಚಾಲಕನಾಗಿದ್ದು, ಹಿರಿಸಾವೆಗೆ ತೆಂಗಿನ ಕಾಯಿ ಸಾಗಾಣಿಕೆಗೆ ತೆರಳಿದ್ದರು. ಸೊಸೆ ಮತ್ತು ಮೊಮ್ಮಕ್ಕಳು, ಕೊರಟೆಗೆರೆ ತಾಲೂಕಿನಲ್ಲಿರುವ ತವರು ಮನೆಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು, ಬಾನು ಅವರ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಬಳೆ, ಓಲೆ ಸೇರಿದಂತೆ ಇತರೆ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್ ಹೇಳಿಕೆ
ಹಿಡಿಯಲು ಬಂದ ಸಬ್ ಇನ್ಸ್ಪೆಕ್ಟರ್ ಮೇಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಕಳ್ಳ; ಎಸ್ಐ ಬಲಗೈಗೆ ಗಾಯ