ನೀರವ್‌ ಮೋದಿ ಹಸ್ತಾಂತರಕ್ಕೆ ಇನ್ನಷ್ಟು ಸಾಕ್ಷ್ಯ ಕೇಳಿದ ಲಂಡನ್‌

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಬಹುಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿ ಹಸ್ತಾಂತರ ಪ್ರಕ್ರಿಯೆಗೆ ಮತ್ತಷ್ಟು ಸಾಕ್ಷ್ಯ್ಗಳನ್ನು ಒದಗಿಸುವಂತೆ ಭಾರತವನ್ನು ಬ್ರಿಟನ್‌ ಸರ್ಕಾರ ಕೇಳಿದೆ.

13,000 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್‌ ಸರ್ಕಾರಕ್ಕೆ ಪುರಾವೆಗಳನ್ನು ಒದಗಿಸಿದ ಬೆನ್ನಲ್ಲೇ ಯುಕೆ ಸರ್ಕಾರವು ನೀರವ್‌ ಮೋದಿ ಹಸ್ತಾಂತರ ಪ್ರಕ್ರಿಯೆಗೆ ಆತನ ವಿರುದ್ಧ ಮತ್ತಷ್ಟು ಪುರಾವೆಗಳನ್ನು ಒದಗಿಸುವಂತೆ ಕೇಳಿದೆ.

ಲಂಡನ್‌ ಅಧಿಕಾರಿಗಳು 18 ವಿವರಣೆಗಳನ್ನು ಮತ್ತು ಮೂರು ಷರತ್ತುಗಳನ್ನು ಭಾರತ ಸರ್ಕಾರದ ಮುಂದೆ ಇಟ್ಟಿದ್ದು, ನೀರವ್‌ ಮೋದಿಯನ್ನು ನ್ಯಾಯಾಲಯಕ್ಕೆ ಕರೆತರುವ ಮುನ್ನ ಇನ್ನಷ್ಟು ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿರುವುದು ಭಾರತ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಭಾರತ ಸದ್ಯಕ್ಕೆ ನೀಡಿರುವ ಮಾಹಿತಿ ಪ್ರಕಾರ ಫೆಬ್ರವರಿ 2017 ಮತ್ತು ಮೇ 2017 ಮತ್ತು ಜನವರಿ 2018ರ ಮಧ್ಯೆ ನಕಲಿ ಅನುಮತಿ ಪತ್ರವನ್ನು ನೀಡಿರುವ ಬಗ್ಗೆ, ವಂಚನೆಯ ಅಧಿಕಾರವದಿ? ಮತ್ತು ನೀರವ್‌ ಮೋದಿ ಲಂಡನ್‌ನಲ್ಲಿ ಹೊಂದಿರುವ ಆಸ್ತಿಗಳ ವಿವರವನ್ನು ನೀಡುವಂತೆ ಲಂಡನ್‌ ಸರ್ಕಾರ ಕೇಳಿದೆ. (ಏಜೆನ್ಸೀಸ್)