ವಂಚಕ ವಜ್ರೋದ್ಯಮಿ ನೀರವ್​ ಮೋದಿ ವಿರುದ್ಧ ಬಂಧನ ವಾರಂಟ್​ ಹೊರಡಿಸಿದ ಲಂಡನ್​ ಕೋರ್ಟ್​

ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ಬ್ರಿಟನ್​ನಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್​ ಮೋದಿ ಬಂಧನಕ್ಕೆ ಲಂಡನ್​ನ ವೆಸ್ಟ್​ ಮಿನ್​ಸ್ಟರ್​ ಕೋರ್ಟ್​ ವಾರಂಟ್​ ಹೊರಡಿಸಿದೆ. ಸೋಮವಾರದೊಳಗೆ (ಮಾ.25) ಅವರನ್ನು ಬಂಧಿಸುವಂತೆ ವಾರಂಟ್​ನಲ್ಲಿ ಸೂಚಿಸಲಾಗಿದೆ.

ಬ್ರಿಟನ್​ನಲ್ಲಿ ತಲೆಮರೆಸಿಕೊಂಡಿರುವ ನೀರವ್​ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಬ್ರಿಟನ್​ನ ಗೃಹ ಕಾರ್ಯದರ್ಶಿಗೆ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಪರಿಗಣಿಸಿರುವ ಬ್ರಿಟನ್​ ಸರ್ಕಾರ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕೋಟ್​​ಗೆ ಸೂಚಿಸಿರುವುದಾಗಿ ಮಾ.9ರಂದು ಜಾರಿ ನಿರ್ದೇಶನಾಲಯ ತಿಳಿಸಿತ್ತು. (ಏಜೆನ್ಸೀಸ್​)