ಆದೇಶ ಮರು ಪರಿಶೀಲನೆಗೆ ಸುಪ್ರೀಂ ನಕಾರ: ವಿವಿಪ್ಯಾಟ್ ಮತ ಎಣಿಕೆ ಬಗ್ಗೆ 21 ಪ್ರತಿಪಕ್ಷಗಳ ಅರ್ಜಿ ವಜಾಗೊಳಿಸಿದ ನ್ಯಾಯಪೀಠ

ನವದೆಹಲಿ: ವಿದ್ಯುನ್ಮಾನ ಮತಯಂತ್ರದ ಮತಗಳ ಜತೆ ವಿವಿಪ್ಯಾಟ್ ಮತಗಳ ಹೋಲಿಕೆ ಪ್ರಮಾಣ ಏರಿಸಬೇಕು ಎನ್ನುವ 21 ಪ್ರತಿಪಕ್ಷಗಳ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೊರ್ಟ್ ವಜಾಗೊಳಿಸಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಿವಿಪ್ಯಾಟ್ ಬದಲಿಗೆ ಐದು ವಿವಿಪ್ಯಾಟ್​ನಲ್ಲಿನ ಮತಗಳ ಎಣಿಕೆಗೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಇದನ್ನು ಶೇ.50ಕ್ಕೆ ಏರಿಸಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ಪ್ರತಿಪಕ್ಷಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಹಿಂದಿನ ಆದೇಶ ಮರು ಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಚಾರಣೆ ಆರಂಭವಾದ ಕೇವಲ 60 ಸೆಕೆಂಡಿನಲ್ಲಿ ಮರುಪರಿಶೀಲನಾ ಆರ್ಜಿ ತಿರಸ್ಕರಿಸಲಾಗಿದೆ.

ಕೋರ್ಟ್ ಆದೇಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಆದೇಶಕ್ಕೆ ತಲೆಬಾಗುತ್ತೇವೆ. ಆದರೆ ಶೇ.25-30ವರೆಗಾದರೂ ಏರಿಸಲು ಆದೇಶಿಸುತ್ತಾರೆ ಎಂಬ ವಿಶ್ವಾಸವಿತ್ತು. ಈಗ ಮತ್ತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ, ಪ್ರಮಾಣ ಹೆಚ್ಚಿಸಲು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಹೋಟೆಲಲ್ಲಿ ಇವಿಎಂ!

ಬಿಹಾರದ ಮುಜಾಫರ್​ಪುರದ ಹೋಟೆಲ್​ನಲ್ಲಿ ವಿದ್ಯುನ್ಮಾನ ಮತಯಂತ್ರಗಳು ದೊರೆತಿವೆ. 2 ಇವಿಎಂ, 2 ವಿವಿಪ್ಯಾಟ್ ಹಾಗೂ 1 ಕಂಟ್ರೋಲಿಂಗ್ ಯಂತ್ರಗಳು ಹೋಟೆಲ್ ಕೊಠಡಿಯಲ್ಲಿ ದೊರೆತಿವೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಹಾಳಾ ಇವಿಎಂಗಳನ್ನು ಬದಲಾಯಿಸಲು ಕಾಯ್ದಿರಿಸಿದ್ದ ಯಂತ್ರಗಳನ್ನು ಅಧಿಕಾರಿಗೆ ನೀಡಲಾಗಿತ್ತು. ಆದರೆ ನಿಯಮಗಳ ಬಾಹಿರವಾಗಿ ಹೋಟೆಲ್​ನಲ್ಲಿ ಇರಿಸಿದ್ದಕ್ಕೆ ತನಿಖೆ ನಡೆಸಲಾಗುತ್ತಿದೆ.

ಮೋದಿಗೆ ಮತ್ತೆ ಮೂರು ಕ್ಲೀನ್​ಚಿಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿದ್ದ ಮತ್ತೆ ಮೂರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಕೇಂದ್ರ ಚುನಾವಣಾ ಆಯೋಗ ಕ್ಲೀನ್​ಚಿಟ್ ನೀಡಿದೆ. ಚಿತ್ರದುರ್ಗದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ಮಾಡಿದ ವಾಯುಪಡೆಗೆ ಮತಗಳನ್ನು ಅರ್ಪಿಸುವಂತೆ ಹಾಗೂ ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಮತ ಚಲಾಯಿಸುವಂತೆ ಕೇಳಿದ್ದರು. ಏ.23ರಂದು ಅಹಮದಾಬಾದ್​ನಲ್ಲಿ ಮತಚಲಾವಣೆ ಬಳಿಕ ತೆರೆದ ಜೀಪ್​ನಲ್ಲಿ ರೋಡ್ ಶೋ ಮಾಡಿದ್ದು ಹಾಗೂ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂ.1 ಎಂದಿರುವುದು ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಆಯೋಗ ಹೇಳಿದೆ. ಏತನ್ಮಧ್ಯೆ ಆರು ಪ್ರಕರಣಗಳಲ್ಲಿ ಮೋದಿ ಮತ್ತು ಷಾಗೆ ಕ್ಲೀನ್​ಚಿಟ್ ನೀಡಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸುಪ್ರೀಂಗೆ ಸಲ್ಲಿಸುವಂತೆ ಆಯೋಗಕ್ಕೆ ಕಾಂಗ್ರೆಸ್ ಮನವಿ ಸಲ್ಲಿಸಿದೆ.

ಆಯೋಗದ ಇನ್ನಿತರ ಕ್ರಮ: ್ಝಭಗ್ವಾ ಆತಂಕ್​ವಾದ್-ಭ್ರಮ್ಾಲ್’ ಕಿರುಚಿತ್ರ ಪ್ರದರ್ಶನಕ್ಕೆ ತಡೆ ನೀಡಿಲ್ಲ ಎಂದು ಮಧ್ಯಪ್ರದೇಶ ಮುಖ್ಯ ಚುನಾವಣಾಧಿಕಾರಿಯಿಂದ ಸ್ಪಷ್ಟನೆ. ್ಝೕತಿ ಆಯೋಗವನ್ನು ಪ್ರಧಾನಿ ಕಾರ್ಯಾಲಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಆಯೋಗಕ್ಕೆ ಸೂಚನೆ. ್ಝಮೇಠಿಯಲ್ಲಿ ಮತಗಟ್ಟೆ ವಶ ಪ್ರಕರಣಗಳು ನಡೆದಿಲ್ಲ ಎಂದು ಸ್ಪಷ್ಟನೆ.