ದೇಶವನ್ನೇ ಗೆಲ್ಲಿಸುವ ಚುನಾವಣೆ

>

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಇದು ಭಾರತ ದೇಶವನ್ನು ಗೆಲ್ಲಿಸುವ ಚುನಾವಣೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವಿಶ್ಲೇಷಿಸಿದರು.
ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಸೋಮವಾರ ಆಯೋಜಿಸಲಾದ ಬಿಜೆಪಿ ಉಡುಪಿ ಗ್ರಾಮಾಂತರ ಕಾರ್ಯಕರ್ತರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಲಲಿತ ಮೋದಿ, ನೀರವ್ ಮೋದಿ, ವಿಜಯ ಮಲ್ಯ ಅಂತವರಿಗೆ ಕೋಟ್ಯಂತರ ರೂ. ಸಾಲ ನೀಡಿದ್ದು ಕಾಂಗ್ರೆಸ್ ಸರ್ಕಾರ. ದೇಶದ ಹಿತಾಸಕ್ತಿ ಬಯಸುವ ಕುಟುಂಬ ರಾಜಕಾರಣ ಒಲ್ಲದ ಪ್ರಜಾಪ್ರಭುತ್ವ ಬಯಸುವ ಪ್ರತಿಯೊಬ್ಬರು ಈ ಬಾರಿ ಬಿಜೆಪಿ ಜತೆಗಿರುತ್ತಾರೆ ಎಂದು ಹೇಳಿದರು.
ಈ ಬಾರಿ ಲೋಕಸಭಾ ಚುನಾವಣೆ ಭಾರತ ದೇಶದ ವಿಶ್ವ ನಾಯಕ ನರೇಂದ್ರ ಮೋದಿಯವರ ಚುನಾವಣೆ. ನಾವೆಲ್ಲ ಅವರಿಗೆ ಶಕ್ತಿ ನೀಡಬೇಕು. ಕೇಂದ್ರ ಸರ್ಕಾರದ ಅನೇಕ ಯೋಜನೆಯನ್ನು ಉಡುಪಿ ಜಿಲ್ಲೆಗೆ ತರಲಾಗಿದೆ. ಜನರು ಪಾಸ್ ಪೋರ್ಟ್ ಗಾಗಿ ಮಂಗಳೂರಿಗೆ ಹೋಗುವುದನ್ನು ತಪ್ಪಿಸಲು ಬ್ರಹ್ಮಾವರದಲ್ಲಿ ಕಚೇರಿ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಶಾಸಕ ರಘುಪತಿ ಭಟ್, ಜಾನ ವಸಂತ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಾಯಕರಾದ ಉದಯಕುಮಾರ ಶೆಟ್ಟಿ. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಹರಿಮಕ್ಕಿ ರತ್ನಾಕರ ಶೆಟ್ಟಿ, ಯಶಪಾಲ್ ಸುವರ್ಣ, ಉಡುಪಿ ತಾ.ಪಂ. ಅಧ್ಯಕ್ಷೆ ನಳೀನಿ ಪ್ರದೀಪ್ ರಾವ್, ಪಂಚಮಿ ಮೋಹನ್ ಶೆಟ್ಟಿ, ನಿಶಾನ್ ರೈ, ಧನಂಜಯ್ ಅಮೀನ್, ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಉಡುಪಿ ಗ್ರಾಮಾಂತರ ಅಧ್ಯಕ್ಷ ಪ್ರತಾಪ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು.

ಮೋದಿ ಐದು ವರ್ಷಗಳಲ್ಲಿ ಸಮೃದ್ಧ ಭಾರತ ನಿರ್ಮಾಣ ಮಾಡಿದ್ದಾರೆ. ರಾಜ್ಯದಲ್ಲಿ ನೋಟ್ ಬ್ಯಾನ್‌ನಿಂದ ತೊಂದರೆ ಆಗಿದ್ದು ಡಿಕೆಶಿ ಅಂತಹವರಿಗೆ ಮಾತ್ರ. ಅಕ್ರಮ ಸಂಪತ್ತನ್ನು ಮಾಡಿಕೊಂಡವರಿಗೆ ತೊಂದರೆಯಾಗಿದೆ, ಜನಸಾಮಾನ್ಯರಿಗಲ್ಲ.
– ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ