ಕಿರುವಾರ ಎಸ್. ಸುದರ್ಶನ್ ಕೋಲಾರ
ಪದೇಪದೆ ಕೋಲಾರ ಜಿಲ್ಲೆಯ ವಿವಿಧ ತಾಲೂಕಿಗೆ ಭೇಟಿ ನೀಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಕೋಲಾರ, ಮಾಲೂರು, ಮುಳಬಾಗಿಲು, ಕೆಜಿಎ್, ಶ್ರೀನಿವಾಸಪುರ ತಾಲೂಕಿಗೆ ದಿಢೀರ್ ಭೇಟಿ ನೀಡಿ ಭ್ರಷ್ಟ ಅಧಿಕಾರಿಗಳ ಬೇಟೆಯಾಡುತ್ತಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಕೂಗಳತೆಯಲ್ಲಿರುವ ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ದಾಖಲೆಗಳ ತಿದ್ದುಪಡಿ, ಅಕ್ರಮವಾಗಿ ಭೂ ಮಂಜೂರು, ಅಕ್ರಮ ಗಣಿ ಹೀಗೆ ಹಲವು ವಿಚಾರಗಳ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಹ ಇತ್ತೀಚೆಗೆ ತಾಲೂಕು ಕಚೇರಿ, ಎಡಿಎಲ್ಆರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಹಿಂದೆಯೇ ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳೊಂದಿಗೆ ಏ.17ರಂದು ವಿವಿಧ ಇಲಾಖೆಗಳ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದಾಗ ಹಲವು ಲೋಪದೋಷ ಕಂಡು ಬಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸ್ವಯಂ ದೂರು ದಾಖಲಿಸಿದ್ದಾರೆ.

* ಯಾರ್ಯಾರ ವಿರುದ್ಧ ದೂರು?
ಮಾಲೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ವಿ.ಕೋದಂಡರಾಮಯ್ಯ, ಮಾಲೂರು ಭೂ ವಿಜ್ಞಾನಿಗಳಾದ ಎಂ.ಕೆ.ವಿಶ್ವನಾಥ್, ಆರ್.ಚೇತನ್, ಕೆ.ಶ್ರೀನಿವಾಸ್, ಕಿರಿಯ ಅಭಿಯಂತ ಆರ್.ಸಿ.ಹರೀಶ್, ರುಕ್ಸಾರಾ ಸುಲ್ತಾನ, ತಹಸಿಲ್ದಾರ್ ರೂಪಾ, ಕಂದಾಯ ನಿರೀಕ್ಷಕ ನಾರಾಯಣಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ರುವೀರ್, ಸರ್ವೇಯರ್ ಟಿ.ಟಿ.ಅಶೋಕ್, ಸಹಾಯಕ ನಿರ್ದೇಶಕ ಸಿ.ಎಚ್.ಕೃಷ್ಣ, ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್.ವರಲಕ್ಷಿ$್ಮ, ಕಾರ್ಮಿಕ ನಿರೀಕ್ಷಕ ಎಚ್.ಆರ್.ರೇಣುಕಾ ಪ್ರಸನ್ನ. ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ ರೆಡ್ಡಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಯಾಜ್ ಪಾಷಾ, ಪರಿಸರ ಅಧಿಕಾರಿ ಡಾ.ಕೆ.ರಾಜು, ಬೆಸ್ಕಾಂ ಸಹಾಯಕ ಕಾರ್ಯಪಾಲ ಅನ್ಸರ್ ಭಾಷಾ, ಕಾರ್ಯಪಾಲಕ ಅಭಿಯಂತೆ ಕವಿತಾ, ಅಬಕಾರಿ ಇಲಾಖೆ ನಿರೀೆ ಪಿ.ಕೆ.ಶಶಿಕಲಾ, ಉಪ ನೋಂದಣಾಧಿಕಾರಿ ಬೈರಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದಿಪ್ ಕುಮಾರ್ ಅಧಿಕಾರಿಗಳ ವಿರುದ್ಧ ಸ್ವಯಂ ದೂರು ದಾಖಲಾಗಿದೆ. ತಾಲೂಕುಮಟ್ಟದ ಅಧಿಕಾರಿಗಳ ಜತೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧವೂ ದೂರು ದಾಖಲಾಗಿದ್ದು, ತಲೆ ದಂಡವಾಗುವ ಸಾಧ್ಯತೆ ಇದೆ.
* ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಗೂಡು
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ರೋಗಿಗಳು ಔಷಧವನ್ನು ಹೊರಗಡೆ ಖರೀದಿ ಮಾಡಲು ಚೀಟಿ ಬರೆದುಕೊಟ್ಟಿರುವುದು, ಸ್ವಚ್ಛತೆ ಇಲ್ಲದೆ ಇರುವುದು, ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಇರುವುದು, ಮಾರ್ಚ್ ಅಂತ್ಯಕ್ಕೆ ಅವಧಿ ಮುಗಿದಿರುವ ಔಷಧ ವಿತರಣೆ ಮಾಡುತ್ತಿರುವುದು, ಡಾಟಾ ಎಂಟ್ರಿ ಆಪರೇಟರ್ಗಳಾದ ಹೇಮಂತ್, ಗಂಗಾಧರ್, ಕೃಷ್ಣಪ್ಪ, ವೈದ್ಯಾಧಿಕಾರಿ ಡಾ.ವಸಂತಕುಮಾರ್ ಹಾಗೂ ಆಂಬುಲೆನ್ಸ್ ಚಾಲಕನ ಮೊಬೈಲ್ನಲ್ಲಿ ವಹಿವಾಟು ಪರಿಶೀಲಿಸಿ ವರ್ಷದ ಬ್ಯಾಂಕ್ ವರದಿ ನೀಡುವಂತೆ ಎಸಿ ಡಾ.ಮೈತ್ರಿ ಅವರಿಗೆ ಸೂಚಿಸಲಾಗಿತ್ತು. ಇನ್ನು ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ರತ್ನಪ್ರಭಾ ಕೇಂದ್ರ ಸ್ಥಾನದಲ್ಲಿ ಇಲ್ಲದೆ ಬೆಂಗಳೂರಿನಿಂದ ಪ್ರಯಾಣಿಸುತ್ತಿರುವುದು, ಸಮವಸ್ತ್ರ ಪಾಲನೆ ಮಾಡದಿರುವುದು, ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮಾಡದೆ ಇರುವುದು ಹೀಗೆ ಅನೇಕ ಲೋಪಗಳು ಬೆಳಕಿಗೆ ಬಂದಿದ್ದವು.
*ಅರ್ಜಿಗಳು ಬಾಕಿ
ತಾಲೂಕು ಕಚೇರಿಯ ರೆಕಾರ್ಡ್ ರೂಮ್ ಪರಿಶೀಸಿದಾಗ ಸಲ್ಲಿಕೆಯಾಗಿರುವ 500 ಅರ್ಜಿ ಬಾಕಿ ಉಳಿದುಕೊಂಡಿದ್ದವು, ಇದನ್ನು 2 ತಿಂಗಳಲ್ಲಿ ವಿಲೇ ಮಾಡಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಹಸೀಲ್ದಾರ್ ರೂಪಾ ಅವರಿಗೆ ಸೂಚಿಸಿದ್ದರು. ಆಹಾರ ಶಾಖೆಯಲ್ಲಿ ಬೋಗಸ್ ಕಾರ್ಡ್ ಹಾಗೂ ಅರ್ಹತೆ ಇಲ್ಲದವರಿಗೆ ದಂಡ ಹಾಕಿರುವ ಬಗ್ಗೆ ಪೂರಕ ದಾಖಲಾತಿಗಳು ಇಲ್ಲ. 1,106 ತಿದ್ದುಪಡಿ, ಹೊಸ ಪಡಿತರಕ್ಕೆ ಅರ್ಜಿಗಳು ಬಂದಿದ್ದು, ಬಾಕಿ ಉಳಿದುಕೊಂಡಿವೆ. ನಗದು ಘೋಷಣೆ ಮಾಡದೆ ಇರುವುದು ಲೋಕಾಯುಕ್ತರ ಕಣ್ಣಿಗೆ ಬಿದ್ದಿವೆ.
* ಅಬಕಾರಿ ನಿಯಮ ಉಲ್ಲಂನೆ
ಅಬಕಾರಿ ಇಲಾಖೆಯಿಂದ ಸಿಎಲ್-7, ಸಿಎಲ್-9 ಪರವಾನಗಿಗಳು ಕ್ರಮಬದ್ಧವಾಗಿಲ್ಲ, ಧಾರ್ಮಿಕ ಸಂಸ್ಥೆಗಳು, ಶಾಲೆಗಳು, ವಸತಿ ಸ್ಥಳಗಳ 100 ಮೀಟರ್ ವ್ಯಾಪ್ತಿಯೊಳಗೆ ಅಬಕಾರಿ ಪರವಾನಗಿ ನೀಡುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು. ಪ್ಲಾ$್ಯನ್ ನೆ, ಬ್ಲೂ ಪ್ರಿಂಟ್ ಮಾತ್ರ ಇದ್ದು, ಪಂಚಾಯಿತಿಯಿಂದ ವ್ಯಾಪಾರ ಪರವಾನಗಿ ಪಡೆಯದೆ ಇರುವುದು, ಮಾಲೂರು ಪಟ್ಟಣದ 18ನೇ ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳು ವಾಸವಿದ್ದು, ಕಾನೂನು ಉಲ್ಲಂಘಿಸಿ ಲೈಸನ್ಸ್ ನೀಡಲಾಗಿದೆ.
* ಮಾಹಿತಿ ನೀಡುವಲ್ಲಿ ವಿಫಲ
ಪಟ್ಟಣದಲ್ಲಿ ಒಟ್ಟು 18,000 ಖಾತಾಗಳ ಪೈಕಿ 2000 ಖಾತಾಗಳು ಅನಧಿಕೃತವಾಗಿ ಕೇವಲ 15 ಪ್ರಕರಣಗಳಲ್ಲಿ ನೋಟಿಸ್ ನೀಡಿರುವುದಾಗಿ ಮುಖ್ಯಾಧಿಕಾರಿ ಹೇಳಿಕೆ ನೀಡಿದ್ದಾರೆ. ಎಷ್ಟು ರಸ್ತೆ ಒತ್ತುವರಿಯಾಗಿದೆ, ಅನಧಿಕೃತ ಕಟ್ಟಡಗಳು ಎಷ್ಟಿವೆ, ಅವುಗಳ ವಿರುದ್ಧ ಯಾವ ಕ್ರಮ ಜರುಗಿಲಾಗಿದೆ ಎಂಬ ದಾಖಲೆಗಳನ್ನು ಹಾಜರುಪಡಿಸುವಲ್ಲಿ ವಿಲರಾಗಿದ್ದಾರೆ. ಕಚೇರಿ ಅಧೀಕ್ಷಕ ಅನಂತರಾಮು ಕೇಂದ್ರಸ್ಥಾನದಲ್ಲಿ ಇರದೆ ರಾಮನಗರದಿಂದ ಮಾಲೂರಿಗೆ ಪ್ರಯಾಣಿಸುತ್ತಿದ್ದು, ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ. ಸೂಪರ್ವೈಸರ್ ಅರುಣ್ ಕುಮಾರ್ ಬೆಂಗಳೂರಿನಿಂದ ಓಡಾಡುತ್ತಿದ್ದು, ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿಲ್ಲ. ಹೀಗೆ ಹಲವು ಕರ್ತವ್ಯ ಲೋಪ ಕಂಡು ಬಂದಿದ್ದವು.