ಪತ್ನಿ, ಪುತ್ರಿಯೊಂದಿಗೆ ಮತದಾನ ಮಾಡಿದ ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಆನಂದ್​ ಸಂಕೇಶ್ವರ್​

ಹುಬ್ಬಳ್ಳಿ: ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ್​ ಸಂಕೇಶ್ವರ್​ ಅವರು ಕುಟುಂಬದವರೊಂದಿಗೆ ಹುಬ್ಬಳ್ಳಿಯಲ್ಲಿ ಮತದಾನ ಮಾಡಿದರು.

ಆನಂದ್​ ಸಂಕೇಶ್ವರ್​ ಜತೆ ಪತ್ನಿ ವಾಣಿ, ಪುತ್ರಿ ವೈಷ್ಣವಿ ಆಗಮಿಸಿದ್ದರು. ಹುಬ್ಬಳ್ಳಿ ರೈಲ್ವೆ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 127ರಲ್ಲಿ ಮೂವರೂ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಆನಂದ್ ಸಂಕೇಶ್ವರ್​ ಅವರ ಪುತ್ರಿ ವೈಷ್ಣವಿ ಇದೇ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *